ಪಡುಬಿದ್ರೆ : ಹಾರ್ನ್ ಹಾಕಿ ಓವರ್ ಟೇಕ್ ಮಾಡಿದ್ದಕ್ಕೆ ಬಸ್ ಚಾಲಕನಿಗೆ ಚೂರಿ ಇರಿದ ಕಾರು ಚಾಲಕ

ಪಡುಬಿದ್ರೆ : ಹಾರ್ನ್ ಹಾಕಿ ಓವರ್ ಟೇಕ್ ಮಾಡಿದಕ್ಕೆ ಕಾರು ಚಾಲಕನೊಬ್ಬ ಬಸ್ಸನ್ನು ಅಡ್ಡಗಟ್ಟಿ ಬಸ್ ಚಾಲಕನಿಗೆ ಚಾಕುವಿನಿಂದ ಇರಿದ ಘಟನೆ ಪಡುಬಿದ್ರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ಇರಿತಕ್ಕೊಳಗಾದ ಚಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಉಡುಪಿಯಿಂದ ಮಂಗಳೂರಿಗೆ ಬರುತ್ತಿದ್ದ ಮಾಸ್ಟರ್ ಹೆಸರಿನ ಎಕ್ಸ್ ಪ್ರೆಸ್ ಬಸ್ ನ ಚಾಲಕ, ಪಡುಬಿದ್ರೆಯ ಎರ್ಮಾಳ್ ಬಳಿ ಮುಂದಿನಿಂದ ಹೋಗುತ್ತಿದ್ದ ಕಾರು ಚಾಲಕನಿಗೆ ಹಾರ್ನ್ ಹಾಕಿ ಓವರ್ ಟೇಕ್ ಮಾಡಲು ಯತ್ನಿಸಿದ್ದಾನೆ. ಬಸ್ಸಿನ ಕರ್ಕಶ ಹಾರ್ನ್‌ಗೆ ಆಕ್ರೋಶಗೊಂಡ ಕಾರು ಚಾಲಕ ಬಸ್ಸನ್ನು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ಮಾಡಿ ಇರಿದು ಬಳಿಕ ಬಸ್ಸಿನಿಂದ ಇಳಿದು ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.

ಗಾಯಗೊಂಡ ಬಸ್ ಚಾಲಕನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಬಗ್ಗೆ ಪಡುಬಿದ್ರೆ ಪೊಲೀಸರು ಪ್ರಕರಣ ದಾಖಲಾಗಿದೆ.