ಮತದಾನದಲ್ಲೂ ಮುನ್ನಡೆ ಕಾಯ್ದಿರಿಸಿದ ಉಭಯ ಜಿಲ್ಲೆಗಳು: 1 ಗಂಟೆವರೆಗೆ ದಕ್ಷಿಣ ಕನ್ನಡದಲ್ಲಿ 48.10%, ಉಡುಪಿ-ಚಿಕ್ಕಮಗಳೂರಿನಲ್ಲಿ 46.43% ಮತದಾನ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ ಜನರೆಲ್ಲರೂ ಉತ್ಸಾಹದಿಂದ ಮತದಾನಕ್ಕೆ ಆಗಮಿಸುತ್ತಿದ್ದು ಮಧ್ಯಾಹ್ನ 1 ಗಂಟೆವರೆಗೆ ಹಲವೆಡೆ 40% ಗೂ ಹೆಚ್ಚು ಮತದಾನವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಮತದಾನದ ಪ್ರಮಾಣವನ್ನು ಮಧ್ಯಾಹ್ನ 1 ಗಂಟೆಗೆ ದಾಖಲಿಸಲಾಗಿದ್ದು,ಉಡುಪಿ ಚಿಕ್ಕಮಗಳೂರಿನಲ್ಲಿ 46.43% ಮತದಾನವಾಗಿದ್ದರೆ, ಹಾಸನದಲ್ಲಿ 40.99% ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ದಕ್ಷಿಣ ಕನ್ನಡದಲ್ಲಿ 48.10%, ಚಿತ್ರದುರ್ಗದಲ್ಲಿ 39.05% ಮತ್ತು ತುಮಕೂರಿನಲ್ಲಿ 41.91% ಮತದಾನವಾಗಿದೆ. ಮಂಡ್ಯದಲ್ಲಿ ಶೇ.40.70ರಷ್ಟು ಮತದಾನವಾಗಿದ್ದು, ಮೈಸೂರು ಮತ್ತು ಚಾಮರಾಜನಗರದಲ್ಲಿ ಕ್ರಮವಾಗಿ ಶೇ.41.51 ಮತ್ತು ಶೇ.39.57ರಷ್ಟು ಮತದಾನವಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ […]

ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರಿಂದ ಮತದಾನ

ಉಡುಪಿ: ಪೈಯಾರು ಕರಿಯಣ್ಣ ಶೆಟ್ಟಿ ಪ್ರೌಢಶಾಲೆಯಲ್ಲಿ ಕಳತ್ತೂರು ವಾರ್ಡಿನ ಮತಗಟ್ಟೆ ಸಂಖ್ಯೆ 157 ರಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಮತದಾನ ಮಾಡಿದರು. ಪ್ರಜಾಪ್ರಭುತ್ವದ ಹಬ್ಬವಾದ ಇಂದು ನಾವೆಲ್ಲರೂ ತಪ್ಪದೆ ಮತದಾನ ಮಾಡಿ ಮುಂದಿನ ವಿಕಸಿತ ಭಾರತಕ್ಕೆ ಸಹಕರಿಸೋಣ ಎಂದರು.

ಮತ ಚಲಾಯಿಸಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ

ಮಂಗಳೂರು: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಶುಕ್ರವಾರ ಮಂಗಳೂರಿನ ಕಪಿತಾನಿಯೋ ಶಾಲೆಯ ಮಂಗಟ್ಟೆಯಲ್ಲಿ ಮತ ಚಲಾಯಿಸಿದರು. ಪತ್ನಿ ಸಾಯಿರಶ್ಮಿರಾಜ್ ಪೂಜಾರಿ ಹಾಗೂ ಪುತ್ರಿ ರಿತುರಾಜ್ ಹಾಗೂ ಹಿತೈಷಿಗಳೊಂದಿಗೆ ಆಗಮಿಸಿದ ಅವರು, ಮತ ಚಲಾಯಿಸಿದರು.

ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ ಚಲಾವಣೆ

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಡೊಂಗರಿಕೇರಿ ವಾರ್ಡಿನ ಬೂತ್ ಸಂಖ್ಯೆ 117 ರಲ್ಲಿ ಅವರ ತಂದೆ ಮತ್ತು ತಾಯಿಯೊಂದಿಗೆ ತೆರಳಿ ಮತವನ್ನು ಚಲಾಯಿಸಿದರು.

ಏ. 27 : ಶ್ರೀ ಕ್ಷೇತ್ರ ನೀಲಾವರ ಶ್ರೀ ಮಹಿಷಮರ್ದಿನಿ ದೇವಸ್ಥಾನದ ರಥೋತ್ಸವ

ಉಡುಪಿ: ಶ್ರೀ ಕ್ಷೇತ್ರ ನೀಲಾವರ ಶ್ರೀ ಮಹಿಷಮರ್ದಿನಿ ದೇವಸ್ಥಾನದ ರಥೋತ್ಸವವು ಏ.27 ರಂದು ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಾಲಯದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.