ಮತದಾನದಲ್ಲೂ ಮುನ್ನಡೆ ಕಾಯ್ದಿರಿಸಿದ ಉಭಯ ಜಿಲ್ಲೆಗಳು: 1 ಗಂಟೆವರೆಗೆ ದಕ್ಷಿಣ ಕನ್ನಡದಲ್ಲಿ 48.10%, ಉಡುಪಿ-ಚಿಕ್ಕಮಗಳೂರಿನಲ್ಲಿ 46.43% ಮತದಾನ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ ಜನರೆಲ್ಲರೂ ಉತ್ಸಾಹದಿಂದ ಮತದಾನಕ್ಕೆ ಆಗಮಿಸುತ್ತಿದ್ದು ಮಧ್ಯಾಹ್ನ 1 ಗಂಟೆವರೆಗೆ ಹಲವೆಡೆ 40% ಗೂ ಹೆಚ್ಚು ಮತದಾನವಾಗಿದೆ.

ವಿವಿಧ ಕ್ಷೇತ್ರಗಳಲ್ಲಿ ಮತದಾನದ ಪ್ರಮಾಣವನ್ನು ಮಧ್ಯಾಹ್ನ 1 ಗಂಟೆಗೆ ದಾಖಲಿಸಲಾಗಿದ್ದು,ಉಡುಪಿ ಚಿಕ್ಕಮಗಳೂರಿನಲ್ಲಿ 46.43% ಮತದಾನವಾಗಿದ್ದರೆ, ಹಾಸನದಲ್ಲಿ 40.99% ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ದಕ್ಷಿಣ ಕನ್ನಡದಲ್ಲಿ 48.10%, ಚಿತ್ರದುರ್ಗದಲ್ಲಿ 39.05% ಮತ್ತು ತುಮಕೂರಿನಲ್ಲಿ 41.91% ಮತದಾನವಾಗಿದೆ. ಮಂಡ್ಯದಲ್ಲಿ ಶೇ.40.70ರಷ್ಟು ಮತದಾನವಾಗಿದ್ದು, ಮೈಸೂರು ಮತ್ತು ಚಾಮರಾಜನಗರದಲ್ಲಿ ಕ್ರಮವಾಗಿ ಶೇ.41.51 ಮತ್ತು ಶೇ.39.57ರಷ್ಟು ಮತದಾನವಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ 36.09% ಮತದಾನವಾಗಿದ್ದರೆ, ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್ ಮತ್ತು ಬೆಂಗಳೂರು ದಕ್ಷಿಣದಲ್ಲಿ ಕ್ರಮವಾಗಿ 32.25%, 30.10% ಮತ್ತು 31.51% ಮತದಾನವಾಗಿದೆ. ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿ ಕ್ರಮವಾಗಿ 39.85% ಮತ್ತು 38.42% ಮತದಾನವಾಗಿದೆ.