ಕಲಾ ವಿಭಾಗದ ಅದ್ವಿತೀಯ ಪ್ರತಿಭೆ ಕು.ಸೃಷ್ಟಿ: ಪ್ರೊ.ಕೊಕ್ಕಣೆ೯ ಸುರೇಂದ್ರ ನಾಥ ಶೆಟ್ಟಿ ಅವರ ಲೇಖನ
ಈ ಬಾರಿಯ ದ್ವಿತೀಯ ಪಿ.ಯು.ಸಿ.ಕಲಾ ವಿಭಾಗದಲ್ಲಿ ಉಡುಪಿ ಜಿಲ್ಲೆ ಗುರುತಿಸ ಬೇಕಾದ ಇನ್ನೊಂದು ಅದ್ವಿತೀಯ ಪ್ರತಿಭೆ ಸೃಷ್ಟಿಯಾಗಿದ್ದು ಉಡುಪಿಯ ಬಾಲಕಿಯರ ಸರಕಾರಿ ಪದವಿ ಪೂವ೯ ಕಾಲೇಜಿನ ಕಲಾ ವಿದ್ಯಾರ್ಥಿನಿ ಕು.ಸೃಷ್ಟಿ ವಿ. ಇಲ್ಲಿಕೂಡಾ ಈ ಪ್ರತಿಭೆಗೆ ಹೆಚ್ಚಿನ ಮನ್ನಣೆ ಪ್ರಚಾರ ಮಾಧ್ಯಮಗಳಲ್ಲಿ ಸಿಗಲೇ ಇಲ್ಲ. ಪಠ್ಯೇತರ ಚಟುವಟಿಕೆಗಳಲ್ಲಿ ಸದಾ ಮುಂದರುವ ಸೃಷ್ಟಿ ಈ ಬಾರಿಯ ದ್ವಿತೀಯ ಪಿ.ಯು.ಕಲಾ ವಿಭಾಗದ ಪರೀಕ್ಷೆಯಲ್ಲಿ ಉತ್ಕೃಷ್ಟ ಸಾಧನೆಗೈದಿದ್ದಾಳೆ ಅನ್ನುವುದನ್ನು ನಾವು ಗುರುತಿಸಲೇ ಬೇಕು. ಸೃಷ್ಟಿ ಗಳಿಸಿರುವ ಅಂಕಗಳ ಬಗ್ಗೆ ಒಮ್ಮೆ ದೃಷ್ಟಿ […]
ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿ ಬಳಿ ಮಾನವ ಅಸ್ಥಿಪಂಜರ ಪತ್ತೆ; ತನಿಖೆ ಪ್ರಾರಂಭ
ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಾಡಿನಲ್ಲಿ ಮಾನವ ಅಸ್ಥಿಪಂಜರದ ಕುರುಹು ಪತ್ತೆಯಾಗಿದ್ದು, ಸ್ಥಳೀಯ ಪರಿಸರದಲ್ಲಿ ಭಯ ಹಾಗೂ ಕುತೂಹಲಕ್ಕೆ ಕಾರಣವಾಗಿದೆ. ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಮೀಸಲು ಅರಣ್ಯಕ್ಕೆ ಕಟ್ಟಿಗೆ ತರಲೆಂದು ತೆರಳಿದ ಸ್ಥಳೀಯರಿಗೆ ಇಲ್ಲಿ ಮಾನವ ತಲೆಬುರುಡೆ ಹಾಗೂ ಅವಶೇಷಗಳು ಪತ್ತೆಯಾಗಿದ್ದು, ಈ ಬಗ್ಗೆ ಅವರು ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ತಪಾಸಣೆ ನಡೆಸಿದ ವೇಳೆ ಅಸ್ಥಿಪಂಜರ ಪತ್ತೆಯಾದ ಸ್ಥಳದ ಪಕ್ಕದಲ್ಲಿನ ಮರದ ಕೊಂಬೆಯೊಂದರಲ್ಲಿ ಚೀಲವೊಂದು ಪತ್ತೆಯಾಗಿದೆ. ಈ […]
ಚಿಕ್ಕಮಗಳೂರು: ಕರ್ಣಾಟಕ ಬ್ಯಾಂಕ್ ಎಟಿಎಂನಲ್ಲಿ ಅಗ್ನಿ ಅವಘಡ; 5 ಲಕ್ಷ ರೂ ಸೇರಿದಂತೆ 15 ಲಕ್ಷ ಮೌಲ್ಯದ ಎಟಿಎಂ ಯಂತ್ರ ಸಂಪೂರ್ಣ ಭಸ್ಮ
ಚಿಕ್ಕಮಗಳೂರು: ಕರ್ಣಾಟಕ ಬ್ಯಾಂಕ್ ಎಟಿಎಂನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬರೋಬ್ಬರಿ ಐದು ಲಕ್ಷ ರೂಪಾಯಿ ಭಸ್ಮವಾಗಿದೆ. ಐಜಿ ರಸ್ತೆಯ ಸಾರಗೋಡು ಆರ್ಕೆಡ್ನಲ್ಲಿರುವ ಕರ್ನಾಟಕ ಬ್ಯಾಂಕ್ನ ಶಾಖೆಯ ಕೆಳಭಾಗದಲ್ಲಿರುವ ಎಟಿಎಂಗೆ ಬೆಂಕಿ ಹೊತ್ತಿಕೊಂಡಿದ್ದು, 5 ಲಕ್ಷ ಹಣ ಸೇರಿದಂತೆ 15 ಲಕ್ಷ ಮೌಲ್ಯದ ಎಟಿಎಂ ಯಂತ್ರ ಸಂಪೂರ್ಣ ಭಸ್ಮವಾಗಿದೆ. ಶಾರ್ಟ್ ಸರ್ಕ್ಯೂಟ್ನಿಂದ ಎಟಿಎಂಗೆ ಬೆಂಕಿ ತಗುಲಿರುವ ಸಾಧ್ಯತೆ ಇದೆ. ಎಟಿಎಂಗೆ ಬೆಂಕಿ ಹೊತ್ತಿಕೊಂಡ ವಿಚಾರವನ್ನು ಹೈದರಾಬಾದ್ ಬ್ಯಾಂಕ್ ಕಂಟ್ರೋಲ್ ರೂಮ್ ಅಗ್ನಿಶಾಮಕ ದಳಕ್ಕೆ ತಿಳಿಸಿದೆ. ಮಾಹಿತಿ ಬಂದ ಕೂಡಲೆ […]
ಚದುರಂಗದಲ್ಲಿ ಮತ್ತೊಮ್ಮೆ ಭಾರತದ ಪಾರುಪತ್ಯ: ಕ್ಯಾಂಡಿಡೇಟ್ಸ್ ಚೆಸ್ ಪಂದ್ಯಾವಳಿ ಗೆದ್ದು ಇತಿಹಾಸ ನಿರ್ಮಿಸಿದ ಅತಿ ಕಿರಿಯ ಆಟಗಾರ ಡಿ ಗುಕೇಶ್
ನವದೆಹಲಿ: ಭಾರತದ 17 ವರ್ಷದ ಗ್ರ್ಯಾಂಡ್‌ಮಾಸ್ಟರ್ ಡಿ ಗುಕೇಶ್ ಅವರು ಕ್ಯಾಂಡಿಡೇಟ್ಸ್ ಚೆಸ್ ಪಂದ್ಯಾವಳಿಯನ್ನು ಗೆಲ್ಲುವ ಮೂಲಕ ಇತಿಹಾಸವನ್ನು ನಿರ್ಮಿಸಿದ್ದಾರೆ. ಆ ಮೂಲಕ ವಿಶ್ವ ಪ್ರಶಸ್ತಿ ಗೆದ್ದ ಅತ್ಯಂತ ಕಿರಿಯ ಚೆಸ್ ಆಟಗಾರರಾಗಿದ್ದಾರೆ. ಅಮೆರಿಕದ ಗ್ರ್ಯಾಂಡ್‌ಮಾಸ್ಟರ್ ಹಿಕಾರು ನಕಮುರಾ ವಿರುದ್ಧ ಅಂತಿಮ ಸುತ್ತಿನ ಪಂದ್ಯವನ್ನು ಡ್ರಾ ಮಾಡಿಕೊಂಡ ನಂತರ ಗುಕೇಶ್ ಸಂಭವನೀಯ 14 ಅಂಕಗಳಲ್ಲಿ ಒಂಬತ್ತು ಅಂಕಗಳನ್ನು ಗಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈ ವರ್ಷಾಂತ್ಯದಲ್ಲಿ ನಡೆಯಲಿರುವ ಚಾಂಪಿಯನ್‌ಶಿಪ್‌ಗಾಗಿ ಅವರು ವಿಶ್ವ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ವಿರುದ್ಧ […]