ಉಡುಪಿ-ಅಂಬಾಗಿಲು ಮುಖ್ಯ ರಸ್ತೆಯಲ್ಲಿ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು
ಉಡುಪಿ: ಟಿಪ್ಪರ್ ಮತ್ತು ಬೈಕ್ ನಡುವೆ ಅಪಘಾತ ನಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉಡುಪಿಯಲ್ಲಿ ಶುಕ್ರವಾರ ನಡೆದಿದೆ. ಅಂಬಾಗಿಲು–ಉಡುಪಿ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದ್ದು, ಅಪಘಾತದ ರಭಸಕ್ಕೆ ಟಿಪ್ಪರ್ ನ ಅಡಿ ಭಾಗಕ್ಕೆ ಬೈಕ್ ಬಿದ್ದಿದೆ. ಮೃತ ಬೈಕ್ ಸವಾರನನ್ನು ಬ್ರಹ್ಮಾವರದ ಮಟಪಾಡಿ ಮೂಲದ ಪ್ರಭಾಕರ ಆಚಾರಿ ಎಂದು ಗುರುತಿಸಲಾಗಿದೆ. ಅವರು ಪೆರಂಪಳ್ಳಿ ಕಡೆಯಿಂದ ಅಂಬಾಗಿಲು ಮುಖ್ಯ ರಸ್ತೆಗೆ ಬರುತಿದ್ದರು. ಬೈಕ್ ನಲ್ಲಿದ್ದ ಸಹಸವಾರ ಕೂಡಾ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಿ.ಮೇಟಿ ಮುದಿಯಪ್ಪ ಯುವ ಕಥಾ ಸ್ಪರ್ಧೆ – ಡಾ. ನಮ್ರತಾ ಬಿ ಪ್ರಥಮ
ಉಡುಪಿ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕದ ಆಶ್ರಯದಲ್ಲಿ ಸಾಹಿತಿ, ಕವಿ ದಿವಂಗತ ಮೇಟಿ ಮುದಿಯಪ್ಪ ನೆನಪಿನ ಉಡುಪಿ ಜಿಲ್ಲಾಮಟ್ಟದ ಯುವ ಕಥಾ ಸ್ಪರ್ಧೆಯಲ್ಲಿ ಡಾ. ನಮೃತಾ ಬಿ. ಅವರು ಪ್ರಥಮ ಬಹುಮಾನದೊಂದಿಗೆ ಆಯ್ಕೆಯಾಗಿರುತ್ತಾರೆ. ಬಹುಮಾನವು ನಗದು ರೂಪಾಯಿ 5000 ಹಾಗೂ ಪ್ರಶಸ್ತಿ ಪತ್ರ, ಫಲಕ ಒಳಗೊಂಡಿರುತ್ತದೆ. ದ್ವಿತೀಯ ಬಹುಮಾನ ನಗದು ಮೂರು ಸಾವಿರದೊಂದಿಗೆ ಡಾ. ಜಿ.ಪಿ. ನಾಗರಾಜ್ ಆಯ್ಕೆಯಾಗಿರುತ್ತಾರೆ., ತೀರ್ಪುಗಾರರ ಮೆಚ್ಚುಗೆ ಬಹುಮಾನಕ್ಕಾಗಿ ರಾಮಾಂಜಿ ನಮ್ಮಭೂಮಿ, ಮಂಜುನಾಥ ಕಾರ್ತಟ್ಟು ಹಾಗೂ ಮಂಜುನಾಥ […]
ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಿಂಕೋಪ್ ಮತ್ತು ಪೇಸ್‌ಮೇಕರ್ ವಿಶೇಷ ಕ್ಲಿನಿಕ್‌ಗಳ ಉದ್ಘಾಟನೆ.
ಮಣಿಪಾಲ: ಉತ್ತಮ ಆರೋಗ್ಯ ಸೇವೆಗಳನ್ನು ನೀಡುವ ಗುರಿಯನ್ನು ಹೊಂದಿರುವ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹೃದ್ರೋಗ ವಿಭಾಗವು ವಿಶೇಷ ಚಿಕಿತ್ಸೆ ನೀಡಲು ಸಿಂಕೋಪ್ ಮತ್ತು ಪೇಸ್‌ಮೇಕರ್ ಕ್ಲಿನಿಕ್‌ಗಳನ್ನು ಉದ್ಘಾಟಿಸಿದೆ. ಇದು ಕರ್ನಾಟಕದಲ್ಲಿ ಮೊದಲ ಬಾರಿಗೆ ಮತ್ತು ಈ ಕ್ಲಿನಿಕ್ ದೇಶದ ಕೆಲವೇ ಕೆಲವು ವಿಶೇಷ ಸಿಂಕೋಪ್ ಕ್ಲಿನಿಕ್‌ಗಳಲ್ಲಿ ಒಂದಾಗಿದೆ. ಈ ಕ್ಲಿನಿಕ್ ಸಿಂಕೋಪ್ ರೋಗಿಗಳಿಗೆ ಅತ್ಯಾಧುನಿಕ ಆರೈಕೆಯನ್ನು ಒದಗಿಸಲಿದೆ. ಸಿಂಕೋಪ್ ಅಂದರೇ , ಇದು ಮೂರ್ಛೆ ರೂಪದ ಅಥವಾ ಹಾದುಹೋಗುವಿಕೆ ಎಂದು ಕರೆಯಲ್ಪಡುವ ಮೆದುಳು […]
ವಿದ್ಯುತ್ ನಡೆದು ಬಂದ ದಾರಿ ಮತ್ತು ವಿದ್ಯುತ್ ಜೀವನ ಪುಸ್ತಕ ಬಿಡುಗಡೆ
ಮಣಿಪಾಲ: ಮಣಿಪಾಲದ ಕೆ ಹೆಚ್ ಬಿ ಕಾಲೋನಿಯಲ್ಲಿರುವ ಮಣಿಪಾಲ್ ಹಿಲ್ಸ್ ರೋಟರಿ ಮಕ್ಕಳ ಗ್ರಂಥಾಲಯದಲ್ಲಿ ವಿದ್ಯುತ್ ನಡೆದು ಬಂದ ದಾರಿ ಮತ್ತು ವಿದ್ಯುತ್ ಜೀವನ ಈ ಪುಸ್ತಕದ ಬಿಡುಗಡೆ ಕಾರ್ಯಕ್ರಮವು ನಡೆಯಿತು. ಮಣಿಪಾಲದ ವಸಂತ ಗೀತ ಪ್ರಕಾಶನದಿಂದ ಪ್ರಕಟಣೆಯಾದ ಈ ಪುಸ್ತಕದ ಲೇಖಕರು ಶ್ರೀ ಗೋಪಿನಾಥ್ ರಾವ್ ಸರ್ವದೇ. ಇವರು ಕರ್ನಾಟಕ ಎಲೆಕ್ಟ್ರಿಸಿಟಿ ಬೋರ್ಡ್ ನ ನಿವೃತ್ತ ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಪುಸ್ತಕ ಬಿಡುಗಡೆಗೊಳಿಸಿದ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಪುಸ್ತಕದ ಬಗ್ಗೆ ಮಾತನಾಡಿ, ಲೇಖಕರು ಕೆ […]
ಪ್ರೊಫೆಷನಲ್ ಏಡ್ಜುಕೇಷನ್ ನಲ್ಲಿ ಶಿಕ್ಷಕರಿಗೆ ಉದ್ಯೋಗಾವಕಾಶ
ಪ್ರೊಫೆಷನಲ್ ಏಡ್ಜುಕೇಷನ್ ನಲ್ಲಿ ಶಿಕ್ಷಕರಿಗೆ ಉದ್ಯೋಗಾವಕಾಶ ಅರ್ಹತೆ:ಚಾರ್ಟರ್ಡ್ ಅಕೌಂಟೆಂಟ್ (CA), ಕಂಪನಿ ಕಾರ್ಯದರ್ಶಿ (CS), ವೆಚ್ಚ ನಿರ್ವಹಣಾ ಅಕೌಂಟೆಂಟ್ (CMA), LLB, LLM, Mcom, MBA, Msc ಉತ್ತಮ ಸಂವಹನ ಕೌಶಲ್ಯಗಳುಬೋಧನೆಯಲ್ಲಿ ಉತ್ಸಾಹಕೆಲಸದಲ್ಲಿ ಪರಿಣಾಮಕಾರಿ ವೃತ್ತಿಪರರನ್ನು ಅಭಿವೃದ್ಧಿಪಡಿಸುವ ಮತ್ತು ನಿರ್ವಹಿಸುವ ಸಾಮರ್ಥ್ಯ ಬಯೋ ಡೇಟಾದೊಂದಿಗೆ ಅರ್ಜಿಗಳನ್ನು ಇಮೇಲ್ ಮೂಲಕ [email protected] ಗೆ ಕಳುಹಿಸಬಹುದುದೂರವಾಣಿ: 8088161969