ಹೀರೋ ಶಕ್ತಿ ಮೋಟರ್ಸ್ ನಲ್ಲಿ ಪ್ರಪ್ರಥಮ Hero Mavrick 440 ಬೈಕ್ ಲಾಂಚ್: ಆರಂಭಿಕ ಬೆಲೆ 1.9 ಲಕ್ಷ ರೂ. ನಿಂದ ಪ್ರಾರಂಭ
ಉಡುಪಿ: ಕರಾವಳಿ ಬೈಪಾಸ್, ರಾ.ಹೆ.66 ನ ರಾಮದರ್ಶನ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೀರೋ ಶಕ್ತಿ ಮೋಟರ್ಸ್ ನಲ್ಲಿ ಉಡುಪಿಯ ಪ್ರಪ್ರಥಮ Mavrick 440 ಬೈಕ್ ಲಾಂಚ್ ಹಾಗೂ ಗ್ರಾಹಕರಿಗೆ ಹಸ್ತಾಂತರ ಕಾರ್ಯಕ್ರಮವು ಜರುಗಿತು. ಹೀರೋ ಶಕ್ತಿ ಮೋಟರ್ಸ್ ನ ಜಿ.ಎಂ ರಾಹುಲ್ ಬೈಕ್ ಅನಾವರಣಗೊಳಿಸಿ ಗ್ರಾಹಕರಿಗೆ ಹಸ್ತಾಂತರಿಸಿದರು. ಹೀರೋ Mavrick 440 ಬೈಕಿನ ಆರಂಭಿಕ ಬೆಲೆ 1.99 ಲಕ್ಷ ರೂ. ಆಗಿದ್ದು ಟಾಪ್ ಮಾಡೆಲ್ 2.24 ಲ.ರೂ ಆಗಿದೆ. ಇದು ಭಾರತದಲ್ಲಿ 3 ವೇರಿಯೆಂಟ್ ಮತ್ತು 5 ಬಣ್ಣಗಳಲ್ಲಿ […]
ಸೂರ್ಯವಂಶಿ ರಘುರಾಮನಿಗೆ ರಾಮನವಮಿಯಂದು “ಸೂರ್ಯತಿಲಕ”!! ಏಪ್ರಿಲ್ 17 ರಂದು ರಾಮಲಲ್ಲಾನ ಹಣೆಗೆ ತಿಲಕವಿಡಲಿದ್ದಾನೆ ಸಾಕ್ಷಾತ್ ಸೂರ್ಯದೇವ!!
ಅಯೋಧ್ಯೆ: ಅಯೋಧ್ಯೆಯ ರಾಮಮಂದಿರದ ಅರ್ಚಕರು ವಿಜ್ಞಾನಿಗಳ ಸಮ್ಮುಖದಲ್ಲಿ ‘ಸೂರ್ಯ ತಿಲಕ’ (Surya Tilak) ಪ್ರಯೋಗವನ್ನು ಯಶಸ್ವಿಯಾಗಿ ಪರೀಕ್ಷೆ ಮಾಡಿದ್ದಾರೆ. ಏಪ್ರಿಲ್ 17 ರಂದು ರಾಮನವಮಿ ಹಬ್ಬದ ಸಂದರ್ಭದಲ್ಲಿ ಸೂರ್ಯನ ಕಿರಣಗಳು ವಿಶೇಷವಾಗಿ ತಯಾರಿಸಲಾದ ಕನ್ನಡಿಯ ಮೂಲಕ ಪ್ರತಿಫಲನಗೊಂಡು ಸೂರ್ಯವಂಶಿ ರಘುರಾಮನ ಹಣೆಗೆ ತಿಲಕವನ್ನಿಡಲಿದೆ. ಅದಾಗಲೇ ಎರಡು ಬಾರಿ ಇದನ್ನು ಯಶಸ್ವಿಯಾಗಿ ಪ್ರಯೋಗಿಸಲಾಗಿದೆ. CSIR-ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್ (CBRI) ನ ವಿಜ್ಞಾನಿಗಳು “ಸೂರ್ಯ ತಿಲಕ” ವ್ಯವಸ್ಥೆಯನ್ನು ವಿನ್ಯಾಸಗೊಳಿಸಿದ್ದಾರೆ. ಇದು ಮಧ್ಯಾಹ್ನದ ಸಮಯ ಸುಮಾರು ಆರು ನಿಮಿಷಗಳ ಕಾಲ […]
ಹೆಣ್ಣು ಮಕ್ಕಳ ಘನತೆಗೆ ಧಕ್ಕೆ ತಂದಿರುವ ಎಚ್.ಡಿ.ಕುಮಾರಸ್ವಾಮಿ ಕ್ಷಮೆ ಕೇಳಬೇಕು: ವೆರೋನಿಕಾ ಕರ್ನೆಲಿಯೋ
ಉಡುಪಿ: ಗ್ಯಾರಂಟಿಗಳಿಂದ ಹಳ್ಳಿ ಹೆಣ್ಮಕ್ಕಳು ದಾರಿ ತಪ್ಪಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಮಹಿಳೆಯರ ಘನತೆಗೆ ಧಕ್ಕೆ ತಂದಿದ್ದಾರೆ. ಇವರ ಇಂತಹ ಹೇಳಿಕೆಯಿಂದ ಮಹಿಳೆಯರ ಬಗ್ಗೆ ಇವರಿಗಿರುವ ನೀಚ ಭಾವನೆ ಹೊರಬಂದಿದೆ ಎಂದು ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೆಲಿಯೋ ಹೇಳಿದ್ದಾರೆ. ಹೆಣ್ಣುಮಗಳ ಬಗ್ಗೆ ಇಷ್ಟು ಹಗುರವಾಗಿ ಮಾತನಾಡಿರುವುದು ಖಂಡನೀಯ. ಕಾಂಗ್ರೆಸ್ ಯಾವುದೇ ಸ್ವಾರ್ಥಕ್ಕಾಗಿ ಯೋಜನೆ ಮಾಡಿಲ್ಲ. ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ತಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಸಾಧ್ಯವಾಗಿದೆ ಹೊರತು ದಾರಿ ತಪ್ಪಿದ್ದಾರೆ ಎನ್ನುವುದು ಸರಿಯಲ್ಲ. ಬಿಜೆಪಿ […]
ಚುನಾವಣಾ ಕರ್ತವ್ಯಾಧಿಕಾರಿಗಳಿಗೆ ಏ.17 ರಂದು ಎರಡನೇ ಹಂತದ ತರಬೇತಿ ಕಾರ್ಯಕ್ರಮ
ಉಡುಪಿ: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸಿದಂತೆ ಚುನಾವಣಾ ಕರ್ತವ್ಯಕ್ಕಾಗಿ ಈಗಾಗಲೇ ನೇಮಕ ಮಾಡಿರುವ PRO, APRO, PO ಗಳಿಗೆ ದಿನಾಂಕ 17-04-2024 ರಂದು ಎರಡನೇ ಹಂತದ ತರಬೇತಿ ಕಾರ್ಯಗಾರವನ್ನು ಈ ಕೆಳಗೆ ತಿಳಿಸಿರುವ ಸ್ಥಳಗಳಲ್ಲಿ ಆಯೋಜಿಸಲಾಗಿದೆ. 119-ಕುಂದಾಪುರ- ಭಂಡಾರ್ಕರ್ ಆಟ್ಸ್೯ ಮತ್ತು ವಿಜ್ಞಾನ ಕಾಲೇಜು, ಕುಂದಾಪುರ120-ಉಡುಪಿ-ಸೈಂಟ್ ಸಿಸಿಲಿಸ್ ಸ್ಕೂಲ್, ಬ್ರಹ್ಮಗಿರಿ ಉಡುಪಿ121-ಕಾಪು- ದಂಡತೀಥ೯ ಪಿ.ಯು. ಕಾಲೇಜು, ಉಳಿಯಾರಗೋಳಿ, ಕಾಪು122-ಕಾರ್ಕಳ-ಕ್ರೈಸ್ಟ್ ಕಿಂಗ್ ಪಿ.ಯು. ಕಾಲೇಜು, ಗಾಂಧಿ ಮೈದಾನ, ಕಾಕ೯ಳ ಎರಡನೇ ಹಂತದ ತರಬೇತಿಗೆ ನಿಯೋಜಿಸಿರುವ ಅಧಿಕಾರಿ, ಸಿಬ್ಬಂದಿಗಳಿಗೆ […]
ನಿಟ್ಟೆ ತಾಂತ್ರಿಕ ಕಾಲೇಜಿನಲ್ಲಿ ‘ನಿಟ್ಟೆ ಎಕ್ಸ್ ಪ್ರೋ- 2024’
ನಿಟ್ಟೆ: ವಿದ್ಯಾರ್ಥಿಜೀವನದಲ್ಲಿ ವಿವಿಧ ಬಗೆಯ ಸಂಶೋಧನಾ ಪ್ರಯತ್ನಗಳನ್ನು ನಡೆಸುವುದು ಕಲಿಕಾ ಪ್ರಕ್ರಿಯೆಯ ಪ್ರಮುಖ ಅಂಗವಾಗಿದೆ. ಇಂದು ಪ್ರತಿಯೊಬ್ಬನಲ್ಲೂ ವಿಮರ್ಶಾತ್ಮಕ ಚಿಂತನೆಯ ಗುಣ ಇರಬೇಕಾದುದು ಅತಿಮುಖ್ಯ ಎಂದು ನಿಟ್ಟೆ ತಾಂತ್ರಿಕ ಕಾಲೇಜಿನ ಸಲಹೆಗಾರ ಹಾಗೂ ತ್ರಿಚಿಯ ಬಿ.ಎಚ್.ಇ.ಎಲ್ ನ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಗೋಪೀನಾಥ್ ಎಸ್ ಅಭಿಪ್ರಾಯಪಟ್ಟರು. ಅವರು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಹಳೆವಿದ್ಯಾರ್ಥಿ ಸಂಘ ‘ವಿನಮಿತ’ದ ಸಹಯೋಗದೊಂದಿಗೆ ಸುಮಾರು 32 ವರ್ಷಗಳಿಂದ ನಡೆಸಿಕೊಂಡು ಬಂದಿರುವ ‘ನಿಟ್ಟೆ ಎಕ್ಸ್ ಪ್ರೋ’ ಎಂಬ ಅಂತಿಮ ಬಿ.ಇ ವಿದ್ಯಾರ್ಥಿಗಳ ಪ್ರೊಜೆಕ್ಟ್ […]