ಹೀರೋ ಶಕ್ತಿ ಮೋಟರ್ಸ್ ನಲ್ಲಿ ಪ್ರಪ್ರಥಮ Hero Mavrick 440 ಬೈಕ್ ಲಾಂಚ್: ಆರಂಭಿಕ ಬೆಲೆ 1.9 ಲಕ್ಷ ರೂ. ನಿಂದ ಪ್ರಾರಂಭ

ಉಡುಪಿ: ಕರಾವಳಿ ಬೈಪಾಸ್, ರಾ.ಹೆ.66 ನ ರಾಮದರ್ಶನ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೀರೋ ಶಕ್ತಿ ಮೋಟರ್ಸ್ ನಲ್ಲಿ ಉಡುಪಿಯ ಪ್ರಪ್ರಥಮ Mavrick 440 ಬೈಕ್ ಲಾಂಚ್ ಹಾಗೂ ಗ್ರಾಹಕರಿಗೆ ಹಸ್ತಾಂತರ ಕಾರ್ಯಕ್ರಮವು ಜರುಗಿತು.

ಹೀರೋ ಶಕ್ತಿ ಮೋಟರ್ಸ್ ನ ಜಿ.ಎಂ ರಾಹುಲ್ ಬೈಕ್ ಅನಾವರಣಗೊಳಿಸಿ ಗ್ರಾಹಕರಿಗೆ ಹಸ್ತಾಂತರಿಸಿದರು.

ಹೀರೋ Mavrick 440 ಬೈಕಿನ ಆರಂಭಿಕ ಬೆಲೆ 1.99 ಲಕ್ಷ ರೂ. ಆಗಿದ್ದು ಟಾಪ್ ಮಾಡೆಲ್ 2.24 ಲ.ರೂ ಆಗಿದೆ. ಇದು ಭಾರತದಲ್ಲಿ 3 ವೇರಿಯೆಂಟ್ ಮತ್ತು 5 ಬಣ್ಣಗಳಲ್ಲಿ ಲಭ್ಯವಿದೆ.

ಮಾವ್ರಿಕ್ 440 ಇದು 440 ccbs6-2.0 ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 27.36 PS ಪವರ್ ಮತ್ತು 36 Nm ಟಾರ್ಕ್ ನೊಂದಿಗೆ ಬರುತ್ತದೆ. ಇದು ಡಿಸ್ಕ್ ಮುಂಭಾಗದ ಬ್ರೇಕ್ ಮತ್ತು ಡಿಸ್ಕ್ ಹಿಂಭಾಗದ ಬ್ರೇಕ್ಗಳನ್ನು ಹೊಂದಿದೆ. ಹೀರೋ ಮಾವ್ರಿಕ್ 440 ತೂಕ 187 ಕೆಜಿ ಮತ್ತು 13.5 ಲೀ ಇಂಧನ ಟ್ಯಾಂಕ್ ಸಾಮರ್ಥ್ಯದೊಂದಿಗೆ ಬರುತ್ತದೆ.

ಹೀರೋ ಮಾವ್ರಿಕ್ 440 ಹೀರೋನಿಂದ ರೋಡ್‌ಸ್ಟರ್ ಕೊಡುಗೆಯಾಗಿದೆ, ಇದನ್ನು ಹೀರೋ ಮತ್ತು ಹಾರ್ಲೆ ಜಂಟಿಯಾಗಿ ಅಭಿವೃದ್ಧಿಪಡಿಸಿದ ಹಾರ್ಲೆ-ಡೇವಿಡ್‌ಸನ್ ಎಕ್ಸ್ 440 ನ ಅದೇ 440 ಸಿಸಿ ಎಂಜಿನ್ ಬಳಸಿ ನಿರ್ಮಿಸಲಾಗಿದೆ.

ಉಡುಪಿಯ ಹೀರೋ ಶಕ್ತಿ ಮೋಟರ್ಸ್ ನಲ್ಲಿ ಬೈಕ್ ಗಳ ಬುಕ್ಕಿಂಗ್ ಪ್ರಾರಂಭವಾಗಿದೆ.