ಮೇಷ ರಾಶಿಯಲ್ಲಿ ಸೂರ್ಯ ಸಂಚಾರ: ಹೀಗಿರಲಿದೆ ಮೇಷ ರಾಶಿಯವರ ಫಲಾಫಲಗಳು…

ಮೇಷ ರಾಶಿಯಲ್ಲಿ ಸೂರ್ಯ ಸಂಕ್ರಮಣವು ಜ್ಯೋತಿಷ್ಯದಲ್ಲಿ ಒಂದು ಪ್ರಮುಖ ಘಟನೆಯಾಗಿದೆ, ಇದು ಜ್ಯೋತಿಷ್ಯಶಾಸ್ತ್ರದ ವರ್ಷದ ಆರಂಭವನ್ನು ಸೂಚಿಸುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮೇಷ ರಾಶಿಗೆ ಸೂರ್ಯನ ಚಲನೆಯು ಶಕ್ತಿ, ಪ್ರಾರಂಭ ಮತ್ತು ಉತ್ಸಾಹಕ್ಕೆ ಸಂಬಂಧಿಸಿದೆ. ಮೇಷ ರಾಶಿಯು ಮಂಗಳದಿಂದ ಆಳಲ್ಪಡುವುದರಿಂದ ಚೈತನ್ಯ ಮತ್ತು ಪ್ರೇರಣೆಯ ಪ್ರಜ್ಞೆ ಇರುತ್ತದೆ. ಏ.13 ರಂದು ಸೂರ್ಯನು ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಮೇಷ ರಾಶಿ ಮೇಷ ರಾಶಿಯವರಿಗೆ ಐದನೇ ಮನೆಯ ಅಧಿಪತಿ ಸೂರ್ಯ. ಇದು ಪ್ರೀತಿ, ಸಂಬಂಧಗಳು ಮತ್ತು ಮಕ್ಕಳಿಗೆ ಸಂಬಂಧಿಸಿದೆ. ವೃತ್ತಿಜೀವನದ ಮುಂಭಾಗದಲ್ಲಿ […]

ಹೊಸವರ್ಷಕ್ಕೆ ಶುಭ ಸುದ್ದಿ: ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಮುಂಬೈ ಷೇರು ಮಾರುಕಟ್ಟೆ; ಐಟಿ ಹಾಗೂ ಆಟೋಮೊಬೈಲ್ ನಾಗಾಲೋಟ

ಮುಂಬೈ: ಯುಗಾದಿ ಹಬ್ಬದ ದಿನವಾದ ಮಂಗಳವಾರ ಬೆಳಗ್ಗೆ ಮುಂಬೈ ಷೇರು ಮಾರುಕಟ್ಟೆಯ ವಹಿವಾಟು ಆರಂಭದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದವು, ಮಾಹಿತಿ ತಂತ್ರಜ್ಞಾನ ಮತ್ತು ಆಟೋಮೊಬೈಲ್‌ನಂತಹ ವಲಯಗಳಲ್ಲಿ ಏರಿಕೆ ಹೆಚ್ಚಳ ಕಂಡುಬಂದವು. ಸೆನ್ಸೆಕ್ಸ್ 75,000 ಗಡಿಯನ್ನು ದಾಟಿದರೆ, ನಿಫ್ಟಿ 22765.30 ಕ್ಕೆ ತಲುಪಿತು. ಟೆಕ್ ಮಹೀಂದ್ರಾ, ಎಚ್‌ಸಿಎಲ್ ಟೆಕ್ನಾಲಜೀಸ್ ಮತ್ತು ಇನ್ಫೋಸಿಸ್‌ನಂತಹ ಐಟಿ ದಿಗ್ಗಜ ಸಂಸ್ಥೆಗಳ ಷೇರುಗಳು ಇಂದು ಅತಿ ಹೆಚ್ಚು ಲಾಭ ಗಳಿಸಿದವು. ಆಟೋ ಸ್ಟಾಕ್‌ಗಳಲ್ಲಿ, ಹೀರೋ ಮೋಟೋಕಾರ್ಪ್ ಮತ್ತು ಟಾಟಾ ಮೋಟಾರ್ಸ್ ಇತರರನ್ನು ಮೀರಿಸಿದೆ. […]

‘KA 50 MD’ ಫ್ಯಾನ್ಸಿ ನಂಬರ್‌ಗಳ ಹರಾಜಿಗೆ ರಾಜ್ಯ ಸಾರಿಗೆ ಇಲಾಖೆ ಸಜ್ಜು: ಅರ್ಜಿ ಆಹ್ವಾನ; ಏ.18ರಂದು ಹಾರಾಜು ಪ್ರಕ್ರಿಯೆ

ಬೆಂಗಳೂರು: ಫ್ಯಾನ್ಸಿ ನಂಬರ್‌ಗಳ ಹರಾಜಿನ ಮೂಲಕ ಅಧಿಕ ಆದಾಯ ಗಳಿಸುತ್ತಿರುವ ರಾಜ್ಯ ಸಾರಿಗೆ ಇಲಾಖೆಯು ‘ಕೆಎ 50 ಎಂಡಿ’ ಸರಣಿಗೆ ಅರ್ಜಿ ಆಹ್ವಾನಿಸಿದೆ. ಏಪ್ರಿಲ್ 18ರಂದು ಹರಾಜು ಆರಂಭವಾಗಲಿದೆ. ಈ ಬಾರಿ ಕೂಡ ಸಾರಿಗೆ ಇಲಾಖೆ ಲಕ್ಷಾಂತರ ರೂಪಾಯಿ ಆದಾಯ ಗಳಿಸುವ ನಿರೀಕ್ಷೆ ಇದೆ. ಸಾರಿಗೆ ಇಲಾಖೆಯು ಕರ್ನಾಟಕ ಮೋಟಾರು ವಾಹನ ನಿಯಮಗಳು, 1989 ರ ನಿಯಮ 46 (ಎಎ) 1 ರಿಂದ 999 ರ ನಡುವಿನ ಲಘು ಮೋಟಾರು ವಾಹನಗಳಿಗೆ ಫ್ಯಾನ್ಸಿ ನೋಂದಣಿ ಸಂಖ್ಯೆಗಳನ್ನು ಹಂಚಿಕೆ […]

ಏ. 9ರಿಂದ 18ರ ವರೆಗೆ ಶೀರೂರು ಮೂಲಮಠದಲ್ಲಿ ರಾಮನವಮಿ ಮಹೋತ್ಸವ

ಹಿರಿಯಡಕ: ಏ. 9ರಿಂದ 18ರ ವರೆಗೆ ಶೀರೂರು ಮೂಲಮಠದಲ್ಲಿ ರಾಮನವಮಿ ಮಹೋತ್ಸವವು ಮಠಾಧೀಶ ವೇದವರ್ಧನತೀರ್ಥ ಶ್ರೀಪಾದ ನೇತೃತ್ವದಲ್ಲಿ ನಡೆಯಲಿದೆ. ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಂಜೆ 5.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 9ರಂದು ಬೆಳಿಗ್ಗೆ ಹಯಗ್ರೀವ ಮಂತ್ರಹೋಮ, ಸಂಜೆ ಕುಣಿತ ಭಜನೆ ನಡೆಯಲಿದೆ. 10ರಂದು ಬೆಳಿಗ್ಗೆ ಶಾಕಲ ಋಕ್ಸಂಹಿತಾ ಯಾಗ, ಸಂಜೆ ಗಿರಿಬಳಗ ಕುಂಜಾರು ಸದಸ್ಯರಿಂದ ಛತ್ರಪತಿ ಶಿವಾಜಿ ಐತಿಹಾಸಿಕ ನಾಟಕ ಪ್ರದರ್ಶನ ನಡೆಯಲಿದೆ. 11ರಂದು ಸಂಜೆ 4ಕ್ಕೆ ಚಿತ್ರಾಪುರ ಮಠದ ವಿದ್ಯೇಂದ್ರತೀರ್ಥ ಶ್ರೀಪಾದ ಪಟ್ಟದ ದೇವರೊಂದಿಗೆ […]

ಯುಗಾದಿಯ ಹೊಸ ತಳಿರು, ಎಲ್ಲೆಲ್ಲೂ ಸಂಭ್ರಮದ ಚಿಗುರು..

ಯುಗಗಳ ಆದಿ ಯುಗಾದಿ ಬಂತೆಂದರೆ ಎಲ್ಲೆಡೆಯೂ ಸಡಗರ, ಎಲ್ಲೆಲ್ಲೂ ತಳಿರು ತೋರಣಗಳ ಅಲಂಕಾರ ವರುಷ ಕಳೆದಂತೆ ಜನರ ಜೀವನ ಬದಲಾದರೂ ಹಬ್ಬಗಳ ಆಚರಣೆ, ನಂಬಿಕೆಗಳಲ್ಲಿ ಬದಲಾವಣೆ ಇಲ್ಲ, ಹಳೆ ಬೇರು ಹೊಸ ಚಿಗುರು ಮಾತಿನಂತೆ ಯುಗಾದಿಯು ಕಾಲ ಕಳೆದಂತೆ ಜನರಲ್ಲಿ ಹೊಸ ಉತ್ಸುಕತೆ ಮೂಡಿಸುತ್ತ ಬಂದಿದೆ. ಹಿಂದೂಗಳ ಹೊಸ ವರ್ಷವಾದ ಯುಗಾದಿ ತನ್ನದೇ ಆದ ವೈಶಿಷ್ಟ್ಯತೆ ಹೊಂದಿದೆ. ಕಲಿಯುಗದ ಆರಂಭ – ಚೈತ್ರ ಶುದ್ಧ ಪಾಡ್ಯಮಿಯಂದು ಶ್ರೀಕೃಷ್ಣನ ಗತಕಾಲವು ದ್ವಾಪರ ಯುಗದ ಅಂತ್ಯ ಮತ್ತು ಕಲಿಯುಗದ ಆರಂಭವನ್ನು […]