ಓಂಕಾರ್ ಫರ್ನಿಚರ್ಸ್-ಇಂಟೀರಿಯರ್ಸ್: ಯುಗಾದಿ ಪ್ರಯುಕ್ತ ಮೆಗಾ ಡಿಸ್ಕೌಂಟ್ ಸೇಲ್!! ಏ.21 ರವೆರೆಗೆ ಭಾರೀ ದರ ಕಡಿತದ ಮಾರಾಟ…

ಉಡುಪಿ: ಓಂಕಾರ್ ಫರ್ನಿಚರ್ಸ್-ಇಂಟೀರಿಯರ್ಸ್ ನಲ್ಲಿ ಯುಗಾದಿ ಪ್ರಯುಕ್ತ ಮಾ. 31 ರಿಂದ ಏ.21 ರವರೆಗೆ ಡಿಸ್ಕೌಂಟ್ ಸೇಲ್ ನಡೆಯಲಿದೆ. ಭಾರೀ ದರ ಕಡಿತದ ಮಾರಾಟಉತ್ಪಾದನಾ ವೆಚ್ಚದಲ್ಲಿ ಮಾರಾಟಫರ್ನಿಚರ್ಸ್ ಎಕ್ಸ್ ಚೇಂಜ್ ಮೇಳ ಓಂಕಾರ್ ಗಿಫ್ಟ್ ಸ್ಕೀಮ್ ಮಾಸಿಕ ಕಂತಿನ ಯೋಜನೆ. ಉಚಿತ ಹೋಂ ಡೆಲಿವರಿ… ನಂಬಲಸಾಧ್ಯ ಕಡಿಮೆ ದರ-ಸೂಪರ್ ಕ್ವಾಲಿಟಿ. ಭಾನುವಾರವೂ ತೆರೆದಿರುತ್ತದೆ. ವಿಳಾಸ: ಆಯುಷ್ ಕಾಂಪ್ಲೆಕ್ಸ್, ಕೊಳಲಗಿರಿ ರಸ್ತೆ, ಉಪ್ಪೂರು ಗ್ರಾ.ಪಂ.ಬಳಿ, ಸಾಲ್ಮರ, ತೆಂಕಬೆಟ್ಟು ಉಡುಪಿ. ಸಂಪರ್ಕ: 9964142100/9880080253 ಗೂಗಲ್ ಪೇ- 6360696378

ನೀತಿ ಸಂಹಿತೆ ಉಲ್ಲಂಘನೆ: 10 ಸಾವಿರ ರೂ ಮೌಲ್ಯದ ಮದ್ಯ ವಶ

ಉಡುಪಿ: ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ರ ಹಿನ್ನೆಲೆ, ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾ. 31 ರಂದು ಅಬಕಾರಿ ಇಲಾಖೆ ವತಿಯಿಂದ 10,680 ರೂ. ಮೌಲ್ಯದ 24.030 ಲೀ ಮದ್ಯವನ್ನು ವಶಪಡಿಸಿಕೊಳ್ಳಲಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಜಲ ಕ್ರೀಡೆಯ ಮೂಲಕ ಮತದಾನ ಜಾಗೃತಿ: ಜಿಲ್ಲಾಡಳಿತ ಮತ್ತು ಸ್ವೀಪ್ ಸಮಿತಿ ವತಿಯಿಂದ ಆಯೋಜನೆ

ಉಡುಪಿ: ಪ್ರತಿಯೊಬ್ಬ ಮತದಾರರು ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಎಂದು ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಕೆ. ಹೇಳಿದರು. ಅವರು ರವಿವಾರ ಮಲ್ಪೆಯ ಕಡಲ ಕಿನಾರೆಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ (SVEEP) ಉಡುಪಿ ಇವರ ವತಿಯಿಂದ ಆಯೋಜಿಸಲಾದ ಜಲ ಕ್ರೀಡೆಯ ಮೂಲಕ ಮತದಾನ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಪ್ರಜಾಪ್ರಭುತ್ವವನ್ನು ಬಲಪಡಿಸುವ ನಿರ್ಣಾಯಕ ಪಾತ್ರ ಮತದಾರರ ಮೇಲಿದೆ. ಮೌಲ್ಯಯುತವಾದ ಇಂತಹ ಹೊಣೆಗಾರಿಕೆಯನ್ನುಪ್ರತಿಯೊಬ್ಬರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮತದಾನ ಮಾಡುವ […]

ಲೋಕಸಭಾ ಚುನಾವಣೆ: ಮತದಾನ ದಿನದಂದು ಸಾರ್ವತ್ರಿಕ ರಜೆ

ಉಡುಪಿ: ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ಕ್ಕೆ (Loksabha Elections) ಸಂಬಂಧಿಸಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ 119-ಕುಂದಾಪುರ, 120-ಉಡುಪಿ, 121-ಕಾಪು ಹಾಗೂ 122-ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಏಪ್ರಿಲ್ 26 ರಂದು ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದ 118-ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಮೇ 7 ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ ಹಿನ್ನೆಲೆ, ಚುನಾವಣಾ ವ್ಯಾಪ್ತಿಯಲ್ಲಿರುವ ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ಆಯಾ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಎಲ್ಲಾ ರಾಜ್ಯ ಸರ್ಕಾರಿ ಕಚೇರಿಗಳಿಗೆ, ಅನುದಾನಿತ ಶಿಕ್ಷಣ […]