ಕಿನ್ನಿಮೂಲ್ಕಿ-ಕನ್ನರ್ಪಾಡಿ ಬ್ರಾಹ್ಮಣ ಸಂಘದ ವತಿಯಿಂದ ‘ಅಮ್ಮನಿಂದ ಅಮ್ಮನೆಡೆಗೆ ನಮ್ಮ ನಡಿಗೆ’

ಉಡುಪಿ: ಕಿನ್ನಿಮೂಲ್ಕಿ-ಕನ್ನರ್ಪಾಡಿ ಬ್ರಾಹ್ಮಣ ಸಂಘದ ವತಿಯಿಂದ ಪ್ರಥಮ ಬಾರಿಗೆ ” ಅಮ್ಮನಿಂದ ಅಮ್ಮನೆಡೆಗೆ ನಮ್ಮ ನಡಿಗೆ ” ಕಾರ್ಯಕ್ರಮವು ನಡೆಯಿತು. ಕನ್ನರ್ಪಾಡಿ ಜಯದುರ್ಗೆಗೆ ನಮಿಸಿ, ಮುಂಜಾನೆ 5.45ಕ್ಕೆ ಪಾದಯಾತ್ರೆ ಆರಂಭಗೊಂಡು ಉದ್ಯಾವರ, ಕಟಪಾಡಿ ಮಾರ್ಗವಾಗಿ ಕಾಲುನಡಿಗೆಯಲ್ಲಿ ವಲಯದ 36 ಉತ್ಸಾಹಿ ಸದಸ್ಯರು ಮತ್ತು ಇತರ ವಲಯದ ಸದಸ್ಯರು ಕುಂಜಾರುಗಿರಿಗೆ ಪಯಣಿಸಿ, 8.15 ರ ಹೊತ್ತಿಗೆ ಕುಂಜಾರುಗಿರಿಯ ಮೆಟ್ಟಿಲನ್ನೇರಿ ಕುಂಜಾರಮ್ಮನಿಗೆ ದರ್ಶನಗೈದರು. ಭಕ್ತರನ್ನು ಅದಮಾರು ಮಠದ ವತಿಯಿಂದ ಸ್ವಾಗತಿಸಲಾಯಿತು. ಸಂಘದ ಅಧ್ಯಕ್ಷ ಎಂ.ಎನ್.ರಾಜೇಂದ್ರ , ಕಾರ್ಯದರ್ಶಿ ಎಂ.ಸುರೇಶ್ ರಾವ್, […]
ಕುಂದಾಪುರ: ಪಾದ್ರಿಗುಡ್ಡೆ ಶ್ಯಾನುಭಾಗ ಮೂಲ ನಾಗಸನ್ನಿಧಿಗೆ ಗೋಕರ್ಣ ಮಠಾಧೀಶರ ಭೇಟಿ

ಕುಂದಾಪುರ: ಇಲ್ಲಿನ ಚರ್ಚ್ ರಸ್ತೆಯ ಪಾದ್ರಿಗುಡ್ಡೆ ಶ್ಯಾನುಭಾಗ ಕುಟುಂಬಿಕರ ಮೂಲ ನಾಗ ಸನ್ನಿಧಿಯಲ್ಲಿ ನಾಗದೇವರ ಪುನರ್ ಪ್ರತಿಷ್ಠಾ ಮಹೋತ್ಸವ ಹಾಗೂ ನಾಗಯಕ್ಷಿ, ರಕ್ತೇಶ್ವರಿ ಮತ್ತು ಪರಿವಾರ ದೇವರಗಳ ಪ್ರತಿಷ್ಠೆ ಮಂಗಳವಾರ ಸಂಪನ್ನಗೊಂಡಿತು. ಧಾರ್ಮಿಕ ಪೂಜಾ ವಿಧಿಗಳನ್ನು ವೇದಮೂರ್ತಿ, ರವೀಂದ್ರ ಆಚಾರ್ಯ ನಯಂಪಳ್ಳಿ ನೇತೃತ್ವದಲ್ಲಿ ನಡೆಯಿತು. ಶ್ರೀ ದೇವರಿಗೆ ವಿಶೇಷ ಹೂವಿನ ಅಲಂಕಾರ , ಭಜನಾ ಕಾರ್ಯಕ್ರಮ ಜರಗಿತು ಮಧ್ಯಾಹ್ನ ಆಶ್ಲೇಷಾ ಬಲಿ ಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಶ್ರೀ ಸಂಸ್ಥಾನ ಗೋಕರ್ಣ ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ […]
ನ್ಯೂಸ್ ಪೇಪರ್ ಅಸೋಸಿಯೇಶನ್ ಆಫ್ ಇಂಡಿಯಾದ ರಾಜ್ಯ ಉಪ ಕಾರ್ಯದರ್ಶಿಯಾಗಿ ಪೊಲೀಸ್ ವಾರ್ತೆ ಪ್ರಧಾನ ಸಂಪಾದಕ ಸುಭಾಶ್ ಶೆಟ್ಟಿ ಅವಿರೋಧ ಆಯ್ಕೆ

ಉಡುಪಿ: ರಾಷ್ಟ್ರೀಯ ಮಟ್ಟದಲ್ಲಿ ಪತ್ರಕರ್ತರ ಶ್ರೇಯೋಭಿವೃದ್ಧಿ ಹಾಗೂ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸಲು ಅಸ್ತಿತ್ವದಲ್ಲಿರುವ ‘ನ್ಯೂಸ್ ಪೇಪರ್ ಅಸೋಸಿಯೇಶನ್ ಆಫ್ ಇಂಡಿಯಾ (NAI) ರಾಜ್ಯ ಉಪ ಕಾರ್ಯದರ್ಶಿಯಾಗಿ ಪೊಲೀಸ್ ವಾರ್ತೆ ಪ್ರಧಾನ ಸಂಪಾದಕ ಸುಭಾಶ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. NAI ರಾಜ್ಯ ಘಟಕದ ಅಧ್ಯಕ್ಷ ಅಮ್ಮರವಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಶ್ರೀಕಾಂತ್ ಕಶ್ಯಪ್ ಇವರು ನಿರ್ಭೀತಿಯ ಪತ್ರಿಕೆಯಾದ “ಪೊಲೀಸ್ ವಾರ್ತೆ” ಇದರ ಪ್ರಧಾನ ಸಂಪಾದಕ ಸೃಜನಶೀಲ ಮತ್ತು ಸರಳ ವ್ಯಕ್ತಿತ್ವದ ಸುಭಾಶ್.ಆರ್.ಶೆಟ್ಟಿ ಇವರನ್ನು ನೇಮಕಾತಿ ಮಾಡಿರುತ್ತಾರೆ. ರಾಷ್ಟ್ರೀಯ ಪ್ರಧಾನ […]
ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಭೇಟಿ

ಪೆರ್ಣಂಕಿಲ: ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಏ.2 ರ ವರೆಗೆ ಬ್ರಹ್ಮಕಲಶೋತ್ಸವ, ನಾಗಮಂಡಲ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಬುಧವಾರ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ, ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಆಶೀರ್ವಾದ ಪಡೆದರು. ಬಳಿಕ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳ ಆಶಿರ್ವಾದ ಪಡೆದು ಇಂತಹ ಪುರಾತನ ದೇವಾಲಯದ ಅಂದದ ಸ್ವರೂಪ ಕಂಡು […]