ಮಣಿಪಾಲ: ಬೈಕ್ ಗೆ ಡಿಕ್ಕಿ ಹೊಡೆದ ಕಾರು – ಬೈಕ್ ಸವಾರನಿಗೆ ಗಾಯ

ಮಣಿಪಾಲ: ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ತೀವ್ರ ಗಾಯಗೊಂಡ ಘಟನೆ ಗುರುವಾರ ಮಧ್ಯಾಹ್ನ ಅಲೆವೂರು ರಸ್ತೆಯ ಬಳಿ ಸಂಭವಿಸಿದೆ. ಈ ಬಗ್ಗೆ ಬೈಕ್ ಸವಾರ ಜೀವನ್ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾರು ಚಾಲಕ ಅನಿರುದ್ದ ಎಂಬವರ ನಿರ್ಲಕ್ಷ್ಯ ಮತ್ತು ದುಡುಕುತನದಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಕಾರ್ಕಳ: ಕಾರು ಡಿಕ್ಕಿ, ಬೈಕ್ ಸವಾರ ಸಾವು

ಕಾರ್ಕಳ: ಅತಿ ವೇಗದಿಂದ ಬಂದ ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ಕುಕ್ಕುಂದೂರು ಗ್ರಾಮದ ಜೋಡು ರಸ್ತೆ ಬಳಿ ಗುರುವಾರ ಸಂಭವಿಸಿದೆ. ಬಂಗ್ಲೆಗುಡ್ಡೆ ಕಡೆಯಿಂದ ಜೋಡು ರಸ್ತೆಯ ಕಡೆಗೆ ಸಂಚರಿಸುತ್ತಿದ್ದ ಬೈಕ್ ಸವಾರ ಮುದ್ದು (84) ಎಂಬವರಿಗೆ ಜೋಡು ರಸ್ತೆ ಕಡೆಯಿಂದ ಬಂಗ್ಲೆಗುಡ್ಡೆ ಕಡೆಗೆ ಅತಿ ವೇಗದಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನ ಹೆಲ್ಮೆಟ್ ಕಳಚಿ ರೋಡಿಗೆ ಬಿದ್ದಿದ್ದು ತಲೆಗೆ ತೀವ್ರವಾದ ಗಾಯವಾಗಿದ್ದು, ಕಾರ್ಕಳ ಖಾಸಗಿ ಆಸ್ಪತ್ರೆಯಲ್ಲಿ […]

ಬ್ರಹ್ಮಾವರದ “ಬ್ಲೂಬೆರಿ ಹಿಲ್ಸ್” ನಲ್ಲಿದೆ ಅತ್ಯಾಧುನಿಕ ಹಾಗೂ ಸುಸಜ್ಜಿತ ಸೌಲಭ್ಯಗಳುಳ್ಳ ಅಪಾರ್ಟ್ಮೆಂಟ್ ಗಳು: ಬುಕ್ಕಿಂಗ್ ಪ್ರಾರಂಭ

ಬ್ರಹ್ಮಾವರ: ಎನ್.ಎನ್ ಇನ್ಫ್ರಾಸ್ಟ್ರಕ್ಚರ್ ಡೆವೆಲಪರ್ಸ್ ನವರ ರೇರಾ ಪ್ರಮಾಣೀಕೃತ ಬ್ಲೂಬೆರಿ ಹಿಲ್ಸ್ ಅಪಾರ್ಟ್ ಮೆಂಟ್ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವು ಮಾ.17ರಂದು ನಡೆದಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.ಈ ಕಟ್ಟಡವು ಉತ್ತಮ ಶೈಲಿಯ ಗುಣಮಟ್ಟದ ಮೂಲ ಸೌಕರ್ಯಗಳನ್ನು ಒಳಗೊಂಡಿದೆ.3, 2 ಮತ್ತು1 ಬಿ. ಎಚ್. ಕೆ ಅಪಾರ್ಟ್ಮೆಂಟ್ ಗಳ ಸಕಲ ಅತ್ಯಾಧುನಿಕ ಸುಸಜ್ಜಿತ ಕೊಠಡಿಗಳನ್ನು ಹೊಂದಿದೆ. ಈ ನೂತನ ಕಟ್ಟಡವು ಹೊರಾಂಗಣ ವ್ಯವಸ್ಥೆ, 24*7 ಸಿ ಸಿ ಟಿವಿಗಳ ಭದ್ರತೆ, ವಾಕಿಂಗ್ ಮತ್ತು ಜಾಗಿಂಗ್ ಗೆ ಪ್ರತ್ಯೇಕ ಟ್ರ್ಯಾಕ್ , ಯಾವುದೇ […]

TECH YUVA- K24: ಬಂಟಕಲ್ ಮಧ್ವ ವಾದಿರಾಜ ಕಾಲೇಜಿಗೆ ಸಮಗ್ರ ಚಾಂಪಿಯನ್ ಶಿಪ್ ಪ್ರಶಸ್ತಿ

ಉಡುಪಿ: ಶ್ರೀ ಮಧ್ವ ವಾದಿರಾಜ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಡ್ ಮ್ಯಾನೆಜ್ಮೆಂಟ್ ವಿದ್ಯಾರ್ಥಿಗಳು “TECH YUVA- K24” ನಲ್ಲಿ ಸಮಗ್ರ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಸ್ಪರ್ಧೆಯು ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮಾರ್ಚ್ 26 ಮತ್ತು 27 ರಂದು ನಡೆಯಿತು. ಸ್ಟ್ಯಾಂಡ್ ಅಪ್ ಕಾಮಿಡಿ, ಪ್ರಾಜೆಕ್ಟ್ ಎಕ್ಸ್ ಪೋ, ಟೆಕ್ನಿಕಲ್ ನಲ್ಲಿ ಪ್ರಥಮ ಸ್ಥಾನ, ರಸಪ್ರಶ್ನೆ ಸ್ಪರ್ಧೆ, ಲೈನ್ ಫಾಲೋವರ್ ಮತ್ತು ಫೋಟೋಗ್ರಫಿಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ, ಐಡಿಯೇಷನ್‌ನಲ್ಲಿ ದ್ವಿತೀಯ ಸ್ಥಾನ, ಟೇಬಲ್ ಟೆನ್ನಿಸ್‌ನಲ್ಲಿ […]

ಏಪ್ರಿಲ್ 30 ರ ಒಳಗೆ ಮಕ್ಕಳ ಪಾಲನಾ ಸಂಸ್ಥೆಗಳನ್ನು ನೋಂದಾಯಿಸಿ: ಜಿಲ್ಲಾಧಿಕಾರಿ

ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿರುವ 0-18 ವರ್ಷದೊಳಗಿನ ಪಾಲನೆ ಹಾಗೂ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮಕ್ಕಳ ಪಾಲನಾ ಸಂಸ್ಥೆಗಳು ಕಡ್ಡಾಯವಾಗಿ ಬಾಲನ್ಯಾಯ ಕಾಯ್ದೆ-2015ರಡಿ ನೋಂದಾವಣೆಗೊಂಡಿರಬೇಕು. ಯಾವುದೇ ಮಕ್ಕಳ ಪಾಲನಾ ಸಂಸ್ಥೆಗಳು, ಮಠ, ಮದ್ರಸಾ, ಚರ್ಚ್ಗಳಲ್ಲಿ ಮಕ್ಕಳನ್ನು ದಾಖಲಿಸಿ, ಮಕ್ಕಳ ಪಾಲನಾ ಸಂಸ್ಥೆಗಳನ್ನು ಸರ್ಕಾರದ ನೋಂದಣಿ ಇಲ್ಲದೇ ನಡೆಸುತ್ತಿದ್ದಲ್ಲಿ ಅವುಗಳನ್ನು ಏಪ್ರಿಲ್ 30 ರ ಒಳಗೆ ನೋಂದಾಯಿಸಿಕೊಳ್ಳಬೇಕು. ಅನಾಥ, ಪರಿತ್ಯಕ್ತ, ಪಾಲನೆ, ಪೋಷಣೆ ಹಾಗೂ ರಕ್ಷಣೆಗೆ ಅಗತ್ಯವಿರುವ ಮಕ್ಕಳನ್ನು ಹೊಂದಿದ್ದು, ಔಪಚಾರಿಕ ಶಿಕ್ಷಣ ಮತ್ತು ಮೂಲಭೂತ ಸೌಕರ್ಯಗಳನ್ನು ಹೊಂದಿರದೇ ಬಾಲನ್ಯಾಯ […]