ವಡಭಾಂಡ ಬಲರಾಮ ದೇವಸ್ಥಾನದ ಪುನಃ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ

ಮಲ್ಪೆ: ಒಂದು ದೇವಸ್ಥಾನದ ಜೀರ್ಣೋದ್ದಾರ ಎಂದರೆ ಇಡೀ ಊರಿಗೆ ಊರೇ ಸಂಭ್ರಮಿಸುತ್ತದೆ. ದೇವರು ಮತ್ತೆ ಆಲಯ ಸೇರುವುದರೊಂದಿಗೆ ಎಲ್ಲರಿಗೂ ಶ್ರೇಯಸ್ಸಾಗುತ್ತದೆ. ಆತನ ಅನುಗ್ರಹ ದೇವಸ್ಥಾನಕ್ಕೆ ದುಡಿದ ಎಲ್ಲರಿಗೂ ಸಿಗುವಂತಾಗಲಿ ಎಂದು ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ನುಡಿದರು. ಅವರು ಶುಕ್ರವಾರ ವಡಭಾಂಡೇಶ್ವರ ಶ್ರೀ ವಡಭಾಂಡ ಬಲರಾಮ ದೇವಸ್ಥಾನದ ಪುನಃ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಮಧ್ವರ ಪವಿತ್ರ ಕ್ಷೇತ್ರ ವಡಭಾಂಡೇಶ್ವರ ಅದಮಾರು ಮಠದ ಕಿರಿಯ ಯತಿ ಶ್ರೀ ಈಶ ಪ್ರಿಯ […]

ಕಾರ್ಕಳ: ನಾಳೆ (ಮಾ. 24) ಅಭಿನವ್ ಭಾರತ್ ವತಿಯಿಂದ “ನಮಗಾಗಿ ಮೋದಿ” ವಿಶೇಷ ರಾಷ್ಟ್ರ ಜಾಗೃತಿ ಸಮಾವೇಶ

ಉಡುಪಿ: ಅಭಿನವ ಭಾರತ ಕಾರ್ಕಳ ವತಿಯಿಂದ ನಮಗಾಗಿ ಮೋದಿ ವಿಶೇಷ ರಾಷ್ಟ್ರ ಜಾಗೃತಿ ಸಮಾವೇಶ ಮಾರ್ಚ್ 24ರಂದು ಸಂಜೆ 4 ಗಂಟೆಗೆ ಕಾರ್ಕಳದ ಬಂಡಿಮಠದಲ್ಲಿರುವ ಹೋಟೆಲ್ ಬಾಲಾಜಿ ಇನ್ ನಲ್ಲಿ ನಡೆಯಲಿದೆ. ಸಮಾವೇಶದಲ್ಲಿ ಯುವ ರಾಜಕೀಯ ವಿಶ್ಲೇಷಕರಾದ ಸುರಭಿ ಹುದಿಗೆರೆ ಇವರು ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ವಿಂಗ್ ಕಮಾಂಡರ್ ಬಿ.ಎಸ್ ಸುದರ್ಶನ್, ಹಿರಿಯ ನ್ಯಾಯವಾದಿ ಎಂ.ಕೆ. ವಿಜಯಕುಮಾರ್, ಪತ್ರಕರ್ತ, ಅಂಕಣಕಾರ ಸಂತೋಷ್ ತಮ್ಮಯ್ಯ ಪಾಲ್ಗೊಳ್ಳಲಿದ್ದಾರೆ. ಈ ಜಾಗೃತಿ ಸಮಾವೇಶದ ಅಧ್ಯಕ್ಷತೆಯನ್ನು ಹಿರಿಯ ಉದ್ಯಮಿಯಾದ ಬೋಳ ಪ್ರಭಾಕರ್ ಕಾಮತ್ […]

ಮಾ.25 ರಂದು ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ‌ಮನ್ಮಹಾರಥೋತ್ಸವ

ಉಡುಪಿ: ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಶ್ರೀ ಮಹಿಷ ಮರ್ದಿನಿ ದೇವಿಯ ರಥೋತ್ಸವ ದಿ. 22 ರಿಂದ 27ರವರೆಗೆ ನಡೆಯಲಿದೆ. ಮಾ. 22ರ ರಾತ್ರಿ 7:30ಕ್ಕೆ ವಿಘ್ನೇಶ್ವರ ಪ್ರಾರ್ಥನೆ ನಡೆಯಲಿದ್ದು, ಮಾ. 23 ರಂದು ಮಧ್ಯಾಹ್ನ ಒಂದಕ್ಕೆ ದಿ|ಪರ್ಕಳ ಗುರುರಾಜ್ ಜೋಯ್ಸರ ಸುಪುತ್ರರಿಂದ ಕಲಶ ಅಭಿಷೇಕ ನಡೆಯಲಿದೆ. ಅದೇ ದಿನ ರಾತ್ರಿ ಬೈಗಿನ ಬಲಿ, ಚಂದ್ರಮಂಡಲ ರಥೋತ್ಸವ ಮತ್ತು ದೊಡ್ಡ ರಂಗ ಪೂಜೆ, ಬೂತ ಬಲಿ, ಮಾ. 24ರಂದು ಬೆಳಿಗ್ಗೆ ಆಶ್ಲೇಷ ಬಲಿ, ದುರ್ಗಾ ಹೋಮ […]

ಪಿಎಂಶ್ರೀ ಶಾಲೆ ಯೋಜನೆಗೆ ಅವಿಭಜಿತ ದ.ಕ ಜಿಲ್ಲೆಯ 16 ಶಾಲೆಗಳು ಆಯ್ಕೆ

ಮಂಗಳೂರು: ಸರ್ಕಾರಿ ಶಾಲೆಗಳ ಮೂಲ ಸೌಕರ್ಯ ಉನ್ನತೀಕರಿಸುವ ಆಶಯದೊಂದಿಗೆ ಎರಡು ವರ್ಷಗಳ ಹಿಂದೆ ಆರಂಭವಾಗಿರುವ ಕೇಂದ್ರ ಸರ್ಕಾರದ ‘ಪಿಎಂಶ್ರೀ ಶಾಲೆ’ ಯೋಜನೆಗೆ ಎರಡನೇ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಶಾಲೆಗಳು ಆಯ್ಕೆಯಾಗಿವೆ. ದೇಶದಲ್ಲಿ ಒಟ್ಟು 14,500 ಶಾಲೆಗಳಲ್ಲಿ ಈ ಯೋಜನೆ ಜಾರಿಗೊಳಿಸುವ ಉದ್ದೇಶ ಹೊಂದಿರುವ ಕೇಂದ್ರ ಸರ್ಕಾರವು ಮೊದಲ ಹಂತದಲ್ಲಿ ಕರ್ನಾಟಕದ 129 ಶಾಲೆಗಳು ಸೇರಿದಂತೆ ಒಟ್ಟು 6,207 ಶಾಲೆಗಳನ್ನು ಆಯ್ಕೆ ಮಾಡಿತ್ತು. ಎರಡನೇ ಹಂತದಲ್ಲಿ ರಾಜ್ಯದ 245 ಶಾಲೆಗಳು ಪಿಎಂಶ್ರೀಗೆ ಆಯ್ಕೆಯಾಗಿದ್ದು, ಅದರಲ್ಲಿ ದಕ್ಷಿಣ […]

ವ್ಯಾಪಾರ ಗತಿಶೀಲತೆ ಮತ್ತು ಸುಸ್ಥಿರ ಅಭಿವೃದ್ಧಿಯ 5 ನೇ ಅಂತರರಾಷ್ಟ್ರೀಯ ಸಮ್ಮೇಳನ

ಬೆಂಗಳೂರು: ವ್ಯಾಪಾರ ಗತಿಶೀಲತೆ ಮತ್ತು ಸುಸ್ಥಿರ ಅಭಿವೃದ್ಧಿಯ (ICBD 5.0) ಕುರಿತಾದ 5 ನೇ ಅಂತರರಾಷ್ಟ್ರೀಯ ಸಮ್ಮೇಳನವು ಬೆಂಗಳೂರಿನ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಸ್ಕೂಲ್ ಆಫ್ ಬ್ಯುಸಿನೆಸ್‌ನ ಪ್ರಮುಖ ಕಾರ್ಯಕ್ರಮವಾಗಿದ್ದು, ಮಾರ್ಚ್ 14 ರಂದು ಆಯೋಜಿಸಲಾಗಿತ್ತು. ಈ ಸಮ್ಮೇಳನವನ್ನು ಮೈಲ್ಸ್ ಎಜುಕೇಶನ್, ಟೈಟಾನ್, ಎಲ್.ಟಿ.ಐ.ಮೈಂಡ್ ಟ್ರೀ ಮತ್ತು ವರ್ಟೆಕ್ಸ್ ವೆಂಚರ್ಸ್ ಪ್ರಾಯೋಜಿಸಿದೆ. ವಿವಿಧ ಸಂಸ್ಥೆಗಳ ಒಟ್ಟು 60 ಸಂಶೋಧನಾ ಪ್ರಬಂಧ ನಿರೂಪಕರು, ಶಿಕ್ಷಣತಜ್ಞರು, ಸಂಶೋಧನಾ ವಿದ್ವಾಂಸರು, ಉದ್ಯಮ ವೃತ್ತಿಪರರು, ವಿಶ್ವದಾದ್ಯಂತ ಉನ್ನತ ಶಿಕ್ಷಣದ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು. […]