ಕೆ.ಅಣ್ಣಾಮಲೈ ನಟನೆಯ ಕನ್ನಡ ಚಲನಚಿತ್ರ ‘ಅರಬ್ಬಿ’ಯ ಟ್ರೈಲರ್ ಬಿಡುಗಡೆ

ಬೆಂಗಳೂರು: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ(K. Annamalai) ನಟಿಸಿರುವ ಮೊಟ್ಟ ಮೊದಲ ಕನ್ನಡ ಚಲನಚಿತ್ರ ‘ಅರಬ್ಬಿ’ಯ ಟ್ರೈಲರ್ ಬಿಡುಗಡೆ ಆಗಿದೆ. ಕೈಗಳಿಲ್ಲದ ಕೆ.ಎಸ್ ವಿಶ್ವಾಸ್ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆ ಮಾಡಿರುವ ನೈಜ ಕಥೆಯನ್ನು ಚಿತ್ರ ಒಳಗೊಂಡಿದೆ. ಈ ಚಿತ್ರದಲ್ಲಿ ವಿಶ್ವಾಸ್​ ಅವರ ತರಬೇತುದಾರನ ಪಾತ್ರದಲ್ಲಿ ಅಣ್ಣಾಮಲೈ ನಟಿಸಿದ್ದಾರೆ. ಐಪಿಎಸ್ ವೃತ್ತಿಗೆ ವಿದಾಯ ಹೇಳಿದ ಬಳಿಕ ಅಣ್ಣಾಮಲೈ ಕನ್ನಡ ಸಿನಿಮಾ ಒಂದರಲ್ಲಿ ನಟಿಸಿದ್ದರು. ಈಗ ಅದರ ಟ್ರೈಲರ್‌ ಬಿಡುಗಡೆಗೊಂಡಿದೆ. ಅಣ್ಣಾಮಲೈ ಕೆಲವು ಆಕ್ಷನ್ […]

ಮಾ: 16: ಇತಿಹಾಸ ಪ್ರಸಿದ್ಧ ಪೆರ್ಡೂರಿನ ಅನಂತಪದ್ಮನಾಭನಿಗೆ ಶ್ರೀಮನ್ಮಹಾರಥೋತ್ಸವದ ಸಂಭ್ರಮ

ಪೆರ್ಡೂರು: ಇತಿಹಾಸ ಪ್ರಸಿದ್ಧ ಪೆರ್ಡೂರಿನ ಅನಂತಪದ್ಮನಾಭನ ವಾರ್ಷಿಕ ಜಾತ್ರ ಮಹೋತ್ಸವಗಳು ವೈಭವದಿಂದ ಜರಗುತ್ತಿದ್ದು, ಮಾ.16 ರಂದು ಶ್ರೀಮನ್ಮಹಾರಥೋತ್ಸವದ ಕಾರ್ಯಗಳು ಜರಗಲಿವೆ. ಇತಿಹಾಸ ಪ್ರಸಿದ್ಧ ಪೆರ್ಡೂರಿನ ಅನಂತಪದ್ಮನಾಭ ಮೂರ್ತಿಯನ್ನು ಕಪ್ಪುಕಲ್ಲಿನಲ್ಲಿ ಕೆತ್ತಲಾಗಿದ್ದು, ಸುಮಾರು ಮೂರು ಅಡಿ ಎತ್ತರದ ಈ ಮೂರ್ತಿ ನಿಂತ ಭಂಗಿಯಲ್ಲಿದ್ದು ಶಂಖಚಕ್ರ ಗದಾಪದ್ಮಧಾರಿಯಾಗಿದೆ. ಹೊಕ್ಕುಳಿನ ಭಾಗದಲ್ಲಿ ಪದ್ಮದ ಚಿಹ್ನೆಗಳಿವೆ. ವಿಗ್ರಹದ ಮೇಲ್ಭಾಗದ ಸುತ್ತ ನಾಗದೇವರ ಹೆಡೆ ಚಿತ್ರಿಸಲಾಗಿದೆ. ಹಿಂದುಗಳ ಪವಿತ್ರ ಕ್ಷೇತ್ರವಾದ ತಿರುಮಲವಾಸ ತಿಮ್ಮಪ್ಪನ ಹರಕೆ, ಧರ್ಮಸ್ಥಳ ಮಂಜುನಾಥನಿಗೆ ತಪ್ಪು ಕಾಣಿಕೆಗಳನ್ನು ಇಲ್ಲಿಯೂ ಹಾಕಬಹುದು ಎಂಬ […]

ಅಡುಗೆ ಅನಿಲ ಬಳಿಕ ಪೆಟ್ರೋಲ್-ಡೀಸೆಲ್ ಬೆಲೆ 2 ರೂ ಇಳಿಕೆ: ಗ್ರಾಹಕರು ಕೊಂಚ ನಿರಾಳ

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ದರ ಪರಿಷ್ಕರಣೆ ಮಾಡಿದ್ದು, ಸುಮಾರು ಎರಡು ವರ್ಷಗಳ ಸುದೀರ್ಘ ಅವಧಿಯ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಲೀಟರ್‌ಗೆ 2 ರೂ. ಇಳಿಕೆ ಮಾಡಿದೆ. ಪರಿಷ್ಕೃತ ಬೆಲೆಯು ಮಾರ್ಚ್ 15ರ ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಅನ್ವಯವಾಗಲಿದೆ ಎಂದು ತೈಲ ಸಚಿವಾಲಯ ಗುರುವಾರ ಸಂಜೆ ತಿಳಿಸಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 96.72 ರೂ.ಗೆ ಹೋಲಿಸಿದರೆ ಈಗ 94.72 ರೂ. ಆಗಲಿದೆ. ಹಾಗೆಯೇ ಡೀಸೆಲ್ ಬೆಲೆ ಪ್ರಸ್ತುತ […]

ಆಟವಾಡುತ್ತಿದ್ದ ಮಕ್ಕಳಿಗೆ ದೊರೆಯಿತು ಚೋಳರ ಕಾಲದ 12 ನೇ ಶತಮಾನದ ಅಪರೂಪದ ಮುರುಗನ್ ವಿಗ್ರಹ!!

ಚೆನ್ನೈ: ತಮಿಳುನಾಡಿನ ತಿರುವಲಂಗಾಡು ಎಂಬ ಪ್ರದೇಶದ ಬಳಿ ಕೊಸಸ್ತಲೈಯಾರ್ ನದಿಪಾತ್ರದಲ್ಲಿ ಆಟವಾಡುತ್ತಿದ್ದ ಚಿಕ್ಕ ಹುಡುಗರ ಗುಂಪೊಂದಕ್ಕೆ 12 ನೇ ಶತಮಾನದ ಅಪರೂಪದ ಮುರುಗನ್ ಪ್ರತಿಮೆ ದೊರೆತಿದೆ. 150 ಕೆಜಿ ತೂಕ ಮತ್ತು 3.5 ಅಡಿ ಎತ್ತರದ ಮೂರ್ತಿ ವಿಶಿಷ್ಟ ಲಕ್ಷಣಗಳು ಮತ್ತು ಹತ್ತಿರದ ಕಲಾಕೃತಿಗಳೊಂದಿಗೆ ಮುರುಗನನ್ನು ‘ಬ್ರಹ್ಮಶಾಸ್ತ’ ಎಂದು ಚಿತ್ರಿಸುತ್ತದೆ. ಪುರಾತತ್ವ ಇಲಾಖೆಯು ವಿಗ್ರಹವನ್ನು ಸಂರಕ್ಷಿಸಿ ಸಾರ್ವಜನಿಕ ವೀಕ್ಷಣೆಗೆ ಇಟ್ಟಿದೆ. ಬ್ರಹ್ಮಶಾಸ್ತ ಎಂದು ಕರೆಯಲ್ಪಡುವ ದೇವತೆಯ ಅಪರೂಪವಾಗಿ ಕಾಣುವ ಅಭಿವ್ಯಕ್ತಿಯನ್ನು ಚಿತ್ರಿಸುವ ಜಪಮಾಲೆ ಮತ್ತು ಕಮಂಡಲದಿಂದ ಅಲಂಕರಿಸಲ್ಪಟ್ಟ […]

ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಇ-ತ್ರಿಚಕ್ರ ವಾಹನಕ್ಕಾಗಿ ಅರ್ಜಿ ಆಹ್ವಾನ

ಉಡುಪಿ: ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯ ಮತ್ಸ್ಯವಾಹಿನಿ ಯೋಜನೆಯಡಿ ತಾಜಾ ಮೀನು ಮಾರಾಟಕ್ಕಾಗಿ ಹಾಗೂ ಮೀನು ಉತ್ಪನ್ನಗಳ ಮಾರಾಟಕ್ಕಾಗಿ ಇ-ತ್ರಿಚಕ್ರ ವಾಹನಗಳನ್ನು ಗುತ್ತಿಗೆ ಪರವಾನಗಿ ಆಧಾರದಲ್ಲಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯ ಮೀನುಗಾರಿಕೆ ಅಭಿವೃದ್ಧಿ ನಿಗಮದ ಫ್ರಾಂಚೈಸಿಗಳು ಮೀನು ಮಾರಾಟ ಜಾಲವನ್ನು ವಿಸ್ತರಿಸಲು ಬಯಸಿದ್ದಲ್ಲಿ, ಸರ್ಕಾರದ ವಿವಿಧ ಕೌಶಲ್ಯ ಅಭಿವೃದ್ಧಿ ಯೋಜನೆಗಳಡಿ ತರಬೇತಿ ಪಡೆದವರು, ಮೀನುಗಾರಿಕೆ ಇಲಾಖೆಯಿಂದ ಅನುಮೋದಿತ ಮೀನುಗಾರರ ಉತ್ಪಾದಕಸಂಸ್ಥೆಗಳು, ಮೀನು ಮಾರಾಟ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಮೀನುಗಾರಿಕೆ ಸಹಕಾರ ಸಂಘ/ ಒಕ್ಕೂಟಗಳು, ಮಹಿಳಾ ಸ್ವ- […]