ರಾಮಲಲ್ಲಾನ ದರ್ಶನ ಪಡೆದು ರಾಮೈಕ್ಯರಾದ ಸಂಘ ಕಾರ್ಯಕರ್ತ ಪಾಂಡುರಂಗ ಶಾನುಭಾಗ್

ಉಡುಪಿ: ಅಯೋಧ್ಯೆಯಲ್ಲಿ ರಾಮನ ದರ್ಶನ ಮಾಡಿದ ಉಡುಪಿಯ ಸಂಘದ ಹಿರಿಯರು, ರಾಷ್ಟ್ರ ಭಕ್ತರಾದ ಪಾಂಡುರಂಗ ಶಾನುಭಾಗ್ ಅವರು ಇಹ ಯಾತ್ರೆ ಮುಗಿಸಿದ್ದಾರೆ. ಈ ಸುದ್ದಿ ಕಾರ್ಯಕರ್ತರಿಗೆ ಅತೀವ ದುಃಖ ಉಂಟು ಮಾಡಿದೆ. ಬೆಳಿಗ್ಗೆ ಅಯೋಧ್ಯೆಯಲ್ಲಿ ರಾಮ ದೇವರ ದರ್ಶನ‌ ಪಡೆದು ಅತ್ಯಂತ ಧನ್ಯತೆ ವ್ಯಕ್ತಪಡಿಸಿ ಪೇಜಾವರ ಶ್ರೀಗಳಿಂದ ಕಲಶಾಭಿಷೇಕದ ತೀರ್ಥ ಪ್ರಸಾದ ಸ್ವೀಕರಿಸಿ ತೆರಳಿದ್ದ ಅವರು ಅಪರಾಹ್ನದ ಪಲ್ಲಕ್ಕಿ ಉತ್ಸವಕ್ಕೆ ಬರುವವರಿದ್ದರು. ಸಂಘದಲ್ಲಿ ಅತ್ಯಂತ ಸಕ್ರಿಯರಾಗಿದ್ದ ಶಾನುಭಾಗ್ ಅವರು ಅಪೂರ್ವ ಚಿಂತಕರೂ, ರಾಷ್ಟ್ರ ಭಕ್ತರೂ ಆಗಿದ್ದರು. ಅಯೋಧ್ಯೆಯಲ್ಲಿ […]

ಹಿರೋ ಶಕ್ತಿ ಮೋಟಾರ್ಸ್ ವತಿಯಿಂದ ‘ಬ್ರೇಕ್ಫಾಸ್ಟ್ ರೈಡ್’ ಗೆ ಚಾಲನೆ

ಉಡುಪಿ: ಇಲ್ಲಿನ ಕರಾವಳಿ ಬೈಪಾಸ್ ಬಳಿ ಇರುವ ಹಿರೋ ಶಕ್ತಿ ಮೋಟಾರ್ಸ್ (Hero Shakti Motors) ವತಿಯಿಂದ ಉಡುಪಿಯಿಂದ ಕುಂದಾಪುರದ ಯುವಾ ಮೆರಿಡಿಯನ್ ಬೇ ವರೆಗಿನ ‘ಬ್ರೇಕ್ಫಾಸ್ಟ್ ರೈಡ್’ ಗೆ ಭಾನುವಾರದಂದು ಚಾಲನೆ ನೀಡಲಾಯಿತು. ಹಿರೋ ಶಕ್ತಿ ಮೋಟಾರ್ಸ್ ನ ಮ್ಯಾನೇಜಿಂಗ್ ಡೈರೆಕ್ಟರ್ ವಿಜಯ್ ಕರ್ಣೆ, ರಾಹುಲ್ ಮತ್ತು ಹಾರ್ಲೆ ಡೇವಿಡ್ಸನ್ ಕಂಪನಿಯ ಪ್ರಶಾಂತ್ ಡಿಕೆ ಬ್ರೇಕ್ಫಾಸ್ಟ್ ರೈಡ್ ಗೆ ಚಾಲನೆ ನೀಡಿದರು.

ಆಸ್ಕರ್ 2024 : ಓಪನ್‌ಹೈಮರ್‌ ಗೆ ಏಳು ಪ್ರಶಸ್ತಿ; ನಟ ಸಿಲಿಯನ್ ಮರ್ಫಿ; ನಿರ್ದೇಶಕ ಕ್ರಿಸ್ಟೋಫರ್‌ ನೋಲನ್‌ ಗೂ ಆಸ್ಕರ್ ಗರಿ

ಓಪನ್‌ಹೈಮರ್‌ನ ನಾಯಕ, ಪ್ರಸಿದ್ಧ ಹಾಲಿವುಡ್ ನಟ ಸಿಲಿಯನ್ ಮರ್ಫಿಗೆ 2024ನೇ ಸಾಲಿನ ಆಸ್ಕರ್‌ (Oscar Awards) ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಓಪನ್‌ಹೈಮರ್‌ನಲ್ಲಿನ (OPPENHEIMER) ಪಾತ್ರಕ್ಕಾಗಿ ಸಿಲಿಯನ್ ಮರ್ಫಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದರೊಂದಿಗೆ ಓಪನ್‌ಹೈಮರ್‌ನ ಸಿನಿಮಾ ಮತ್ತೊಂದು ದಾಖಲೆ ಬರೆದಿದೆ. ಈ ಬಾರಿ ಒಪೆನ್‌ಹೈಮರ್‌ನ ಚಿತ್ರವು ಏಳು ಆಸ್ಕರ್‌ ಪ್ರಶಸ್ತಿಗಳನ್ನ ಪಡೆದುಕೊಂಡಿದೆ. ಓಪನ್‌ಹೈಮರ್‌ ಸಿನಿಮಾ ನಿರ್ದೇಶಕ ಕ್ರಿಸ್ಟೋಫರ್‌ ನೋಲನ್‌ ಕೂಡ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಕ್ರಿಸ್ಟೋಫರ್‌ ನೋಲನ್‌ ಅತ್ಯುತ್ತಮ ನಿರ್ದೇಶಕ […]

ದೇಶದ ಹೆಗ್ಗುರುತಾದ ದ್ವಾರಕಾ ಎಕ್ಸ್‌ಪ್ರೆಸ್‌ವೇಯ ಹರಿಯಾಣ ವಿಭಾಗವನ್ನು ಉದ್ಘಾಟಿಸಲಿರುವ ಪ್ರಧಾನಿ ಮೋದಿ

ಚಂಡೀಗಢ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುರುಗ್ರಾಮ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 1 ಲಕ್ಷ ಕೋಟಿ ರೂ. ಮೊತ್ತದ 112 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅಧಿಕೃತ ಹೇಳಿಕೆಯ ಪ್ರಕಾರ, ಪ್ರಧಾನ ಮಂತ್ರಿ ಇಂದು ದ್ವಾರಕಾ ಎಕ್ಸ್‌ಪ್ರೆಸ್‌ವೇಯ (Dwarka Expressway) ಹರಿಯಾಣ ವಿಭಾಗವನ್ನು ಉದ್ಘಾಟಿಸಲಿದ್ದಾರೆ. ಇದು ಸಂಚಾರ ಹರಿವನ್ನು ಸುಧಾರಿಸಲು ಮತ್ತು ರಾಷ್ಟ್ರೀಯ ಹೆದ್ದಾರಿ-48 ರಲ್ಲಿ ದೆಹಲಿ ಮತ್ತು ಗುರುಗ್ರಾಮ್ ನಡುವಿನ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಎಂಟು ಪಥಗಳ ದ್ವಾರಕಾ […]