ಅಂತರಾಷ್ಟ್ರೀಯ ಡ್ರಗ್ಸ್ ಜಾಲದ ಕಿಂಗ್ ಪಿನ್ ತಮಿಳು ಚಿತ್ರ ನಿರ್ಮಾಪಕ ಜಾಫರ್ ಸಾದಿಕ್ ಬಂಧನ: ಎನ್‌ಸಿಬಿ ಕಾರ್ಯಾಚರಣೆ
ಚೆನ್ನೈ: 2,000 ಕೋಟಿ ರೂಪಾಯಿಗಳ ಮಾದಕವಸ್ತು ಕಳ್ಳಸಾಗಣೆ ದಂಧೆಯಲ್ಲಿ ಮಾಜಿ ಡಿಎಂಕೆ ನಾಯಕ ಮತ್ತು ತಮಿಳು ಚಲನಚಿತ್ರ ನಿರ್ಮಾಪಕ ಜಾಫರ್ ಸಾದಿಕ್ ನನ್ನು ಎನ್‌ಸಿಬಿ ಬಂಧಿಸಿದೆ. ಕಳೆದ ತಿಂಗಳು 2,000 ಕೋಟಿ ರೂ. ಮಾದಕ ವಸ್ತು ಕಳ್ಳಸಾಗಣೆ ದಂಧೆಗೆ ಸಂಬಂಧಿಸಿದಂತೆ ದ್ರಾವಿಡ ಮುನ್ನೇತ್ರ ಕಳಗಂ (DMK) ಮಾಜಿ ಪದಾಧಿಕಾರಿ ಮತ್ತು ತಮಿಳು ಚಲನಚಿತ್ರ ನಿರ್ಮಾಪಕ ಜಾಫರ್ ಸಾದಿಕ್ ನನ್ನು ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (NCB) ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. NCB ಉಪ ಮಹಾನಿರ್ದೇಶಕ (ಕಾರ್ಯಾಚರಣೆ) […]
ಮುಂಬೈನ ಧಾರಾವಿಯ ಹುಡುಗ ಇದೀಗ ಭಾರತೀಯ ಸೇನೆಯಲ್ಲಿ ಕಮಿಷನ್ಡ್ ಆಫೀಸರ್: ಲೆಫ್ಟಿನೆಂಟ್ ಉಮೇಶ್ ಕೀಲು ಸಾಧನೆ ಯುವಕರಿಗೆ ಮಾದರಿ
ಮುಂಬೈ: ಪ್ರಪ್ರಂಚದ ಅತಿದೊಡ್ಡ ಸ್ಲಮ್ ಎನ್ನುವ ಕುಖ್ಯಾತಿ ಪಡೆದ ಧಾರಾವಿಯ(Dharavi) ಕಠಿಣ ಪರಿಸರದಲ್ಲಿ ಬೆಳೆದ ಲೆಫ್ಟಿನೆಂಟ್ ಉಮೇಶ್ ಕೀಲು ಇಂದು ಭಾರತೀಯ ಸೇನೆಯಲ್ಲಿ(Indian Army) ಕಮಿಷನ್ಡ್ ಆಫೀಸರ್ ಆಗಿ ನಿಯುಕ್ತಿಗೊಂಡಿದ್ದಾರೆ. ಸಯಾನ್ ಕೋಳಿವಾಡದ ಕೊಳೆಗೇರಿಯಲ್ಲಿ ಹುಟ್ಟಿ ಬೆಳೆದ ಉಮೇಶ್, ಶನಿವಾರ ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಿಂದ ಭಾರತೀಯ ಸೇನೆಯಲ್ಲಿ ಕಮಿಷನ್ಡ್ ಆಫೀಸರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾರೆ. ಧಾರಾವಿಯ 10* 5 ಅಡಿಯ ಮನೆಯಲ್ಲಿ ನಾಲ್ಕು ಜನರ ಪರಿವಾರದಿಂದ ಬಂದ ಉಮೇಶ್ ಕೀಲು ಎಲ್ಲ ಸಂಕಷ್ಟಗಳನ್ನು ಮೀರಿ […]
ಜೆ.ಇ.ಇ ಮೈನ್-ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ ಮೊದಲ ಹಂತದ ಪರೀಕ್ಷೆಯಲ್ಲಿ ಜ್ಞಾನಸುಧಾದ 8 ಮಂದಿಗೆ 99ಕ್ಕೂ ಅಧಿಕ ಪರ್ಸಂಟೈಲ್, 3 ಮಂದಿಗೆ 99.9ಕ್ಕಿಂತ ಅಧಿಕ ಪರ್ಸಂಟೈಲ್, ಗಣಿತಶಾಸ್ತ್ರದಲ್ಲಿ ಪ್ರಿಯಾಂಶ್ ಗೆ 100 ಪರ್ಸಂಟೈಲ್.
ಕಾರ್ಕಳ: ರಾಷ್ಟ್ರಮಟ್ಟದಲ್ಲಿ ಎನ್.ಟಿ.ಎ ನಡೆಸುವ ಜೆ.ಇ.ಇ.ಮೈನ್ – ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ – 2024 ಪ್ರಥಮ ಹಂತದ ಪರೀಕ್ಷೆಯ ಫಲಿತಾಂಶದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 8 ಮಂದಿ ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿರುತ್ತಾರೆ. ವಿದ್ಯಾರ್ಥಿಗಳಾದ ಕೇದಾರ್ ರಮೇಶ್ ಕುಲಕರ್ಣಿ 99.9670351 ಪರ್ಸಂಟೈಲ್, ಬಿಪಿನ್ ಜೈನ್.ಬಿ.ಎಂ. 99.9495831 ಪರ್ಸಂಟೈಲ್, ಪ್ರಣವ್ ಕುಮಾರ್ ಭಂಡಿ 99.9069226 ಪರ್ಸಂಟೈಲ್, ಚೈತನ್ಯ ಚಲಿತ್ 99.7905759 ಪರ್ಸಂಟೈಲ್, ಚಿರಂತನ ಜೆ.ಎ. 99.7498546 ಪರ್ಸಂಟೈಲ್, ಪ್ರಿಯಾಂಶ್ ಎಸ್.ಯು. 99.705255 ಪರ್ಸಂಟೈಲ್ (ಗಣಿತ […]
ವಿವೇಕಾನಂದ ರಸ್ತೆ, ವ್ಯಾಘ್ರ ಚಾಮುಂಡಿ ಕ್ಷೇತ್ರದ ಮೇಲ್ಛಾವಣಿ ಲೋಕಾರ್ಪಣೆ
ಉಡುಪಿ: ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ 2.50 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಗೊಂಡ ಕಿನ್ನಿಮುಲ್ಕಿ ಸ್ವಾಗತ ಗೋಪುರದಿಂದ ಬ್ರಹ್ಮಗಿರಿ ಜಂಕ್ಷನ್ ರಸ್ತೆ, ವಿವೇಕಾನಂದ ರಸ್ತೆ ಹಾಗೂ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಶ್ರೀ ವ್ಯಾಘ್ರ ಚಾಮುಂಡಿ ಗಡುವಾಡು ಕ್ಷೇತ್ರದ ಮೇಲ್ಛಾವಣಿಯ ಉದ್ಘಾಟನೆಯನ್ನು ಶಾಸಕ ಯಶ್ ಪಾಲ್ ಸುವರ್ಣ ನೆರವೇರಿಸಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ರಶ್ಮಿ ಸಿ. ಭಟ್, ಅಮೃತ ಕೃಷ್ಣಮೂರ್ತಿ ಆಚಾರ್ಯ, ಪಕ್ಷದ ಮುಖಂಡರಾದ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಭಗವಾನ್ ದಾಸ್, ದೇವದಾಸ್ ಶೆಟ್ಟಿಗಾರ್, ಆನಂದ ಕಾರ್ನಾಡ್, […]
ಜೆಇಇ ಮೈನ್ಸ್ B Arch ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ಉತ್ತಮ ಫಲಿತಾಂಶ.
ಕುಂದಾಪುರ: ರಾಷ್ಟ್ರಮಟ್ಟದಲ್ಲಿ ಜರುಗಿದ 2024 ನೇ ಸಾಲಿನ ಜೆಇಇ ಮೈನ್ಸ್ B-Arch ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆಧ್ಯಾ 92.301 ಪರ್ಸೆಂಟೈಲ್ (ಡ್ರಾಯಿಂಗ್ ಪರೀಕ್ಷೆ 97.884 ಪರ್ಸೆಂಟೈಲ್) ಪಡೆದು ಉತ್ತಮ ಸಾಧನೆ ಮೆರೆದಿದ್ದಾಳೆ. ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.