ಉಡುಪಿ: ನೀರಿನ ಹಾಹಾಕಾರ ತಪ್ಪಿಸಲು ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಉಡುಪಿ: ಭವಿಷ್ಯದಲ್ಲಿ ನೀರಿನ ಹಾಹಾಕಾರ ತಪ್ಪಿಸಲು ಪ್ರತಿಯೊಬ್ಬರೂ ತಮ್ಮ ಮನೆ ಹಾಗೂ ಜಮೀನುಗಳಲ್ಲಿ ಮಳೆ ನೀರಿನ ಕೊಯ್ಲು ಅಳವಡಿಸಿಕೊಳ್ಳುವುದು ಅತ್ಯಂತ ಸೂಕ್ತ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು. ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಅಟಲ್ ಬಿಹಾರಿ ವಾಜನೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಉದಯವಾಣಿ ಸಹಯೋಗದೊಂದಿಗೆ ನಡೆದ ಮಳೆ ನೀರು ಕೊಯ್ಲು ಕಾರ್ಯಗಾರವನ್ನು ಗಿಡಕ್ಕೆ ನೀರನ್ನು ಎರೆಯುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ಉಡುಪಿ ಜಿಲ್ಲೆಯು ಕರಾವಳಿ ಪ್ರದೇಶದಲ್ಲಿದ್ದು, ಸಮುದ್ರ […]

ಪರೀಕ್ಷೆಯಲ್ಲಿ ಕಾಪಿ ಹೊಡೆಯುವ ಫಜೀತಿಯ “ಲೋಕಲ್ ಬಾಯ್ಸ್” ಕಿರುಚಿತ್ರ ಯೂಟ್ಯೂಬ್ ನಲ್ಲಿ ಬಿಡುಗಡೆ

ಶಿವು-ಸೂಜಿ ಪ್ರೊಡಕ್ಷನ್ಸ್, ಸುಮಂತ್ ಆಚಾರ್ಯ ನಿರ್ದೇಶನದ “ಲೋಕಲ್ ಬಾಯ್ಸ್” ಕಿರುಚಿತ್ರ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಪ್ರತೀಕ್ ಶೆಟ್ಟಿ, ಕೃಷ್ಣ ಶೇಂದ್ರೆ, ಚಾರ್ಲಿ ಕುಮಾರ್, ಹೇಮಂತ್, ಸುಪ್ರೀತ್ ಕಾಟಿ, ವಿಶ್ವಾಸ್, ಕಡಕ್ ಬಾಬಿ, ಗುರು ತಾರಾಗಣದ ಚಿತ್ರವು ಕಾಲೇಜು ಹುಡುಗರ ಪರೀಕ್ಷಾ ಕೊಠಡಿಯಲ್ಲಿ ನಡೆಯುವ ಕಾಪಿ ಹೊಡೆಯುವ ಫಜೀತಿಯ ಚಿತ್ರಣವನ್ನು ಹೊಂದಿದೆ. ಡಿ.ಒ.ಪಿ ಮತ್ತು ಸಂಕಲನ ಕೂಲ್ ಮಗಾ ಸ್ಟುಡಿಯೋಸ್ ನದ್ದಾಗಿದ್ದರೆ ರೋಹಿತ್ ಸೋವರ್ ಸಂಗೀತ ನೀಡಿದ್ದಾರೆ.

ಆರ್‌ಎಸ್‌ಎಸ್ ನಾಯಕ ರುದ್ರೇಶ್ ಕೊಲೆಗಾರ ಮೊಹಮ್ಮದ್ ಘೌಸ್ ನಯಾಜಿ ಬಂಧನ: ದ. ಆಫ್ರಿಕಾದಿಂದ ಭಾರತಕ್ಕೆ ಹಸ್ತಾಂತರ

ನವದೆಹಲಿ: ಬೆಂಗಳೂರಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪದಾಧಿಕಾರಿಯನ್ನು ಕೊಂದ ಆರೋಪಿ ಮೊಹಮ್ಮದ್ ಘೌಸ್ ನಯಾಜಿಯನ್ನು ಬಂಧಿಸಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ನಿಷೇಧಿತ ಉಗ್ರಗಾಮಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಕ್ರಿಯ ಸದಸ್ಯ ನಯಾಜಿ 2016ರಲ್ಲಿ ಬೆಂಗಳೂರಿನಲ್ಲಿ ಆರ್‌ಎಸ್‌ಎಸ್ ಮುಖಂಡ ರುದ್ರೇಶ್ ಆರ್ ರನ್ನು ಸಂಚು ರೂಪಿಸಿ ಹತ್ಯೆಗೈದಿದ್ದ. 35 ವರ್ಷದ ರುದ್ರೇಶ್ ಆರ್‌ಎಸ್‌ಎಸ್‌ನ ಶಿವಾಜಿನಗರ ಶಾಖೆಯ ಮಂಡಲ ಅಧ್ಯಕ್ಷ ಮತ್ತು ಬಿಜೆಪಿ ಶಿವಾಜಿನಗರ ಕಾರ್ಯದರ್ಶಿಯಾಗಿದ್ದರು. ಘಟನೆಯ ನಂತರ, […]

ಬಾಂಬ್ ಸ್ಪೋಟ ವಿಚಾರದಲ್ಲಿ ರಾಜಕೀಯವಿಲ್ಲ; ಸರ್ಕಾರ ತನಿಖೆಯಲ್ಲಿ ವಿಳಂಬ ತೋರುವುದು ತರವಲ್ಲ: ಬಿ.ವೈ ವಿಜಯೇಂದ್ರ

ಬೆಂಗಳೂರು: ಬಾಂಬ್ ಸ್ಫೋಟ ವಿಷಯದಲ್ಲಿ ಬಿಜೆಪಿ ರಾಜಕಾರಣ ಮಾಡುವುದಿಲ್ಲ. ಒಂದು ಜವಾಬ್ದಾರಿಯುತ ವಿಪಕ್ಷವಾಗಿ ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಸಹಕಾರ ಕೊಡುತ್ತೇವೆ ಎಂದು ಈಗಾಗಲೇ ಹೇಳಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಫ್ಎಸ್ಎಲ್ ವರದಿ ಬಂದಿದೆ. ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದು, ದೃಢಪಟ್ಟ ಮಾಹಿತಿ ನಮಗಿದೆ. ಎಲ್ಲೋ ಒಂದು ಕಡೆ ಈ ರಾಜ್ಯ ಸರ್ಕಾರದ ವಿಳಂಬ ನೀತಿ, ನಡವಳಿಕೆ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂಬಂತಿದೆ. ದೇಶದ್ರೋಹಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ […]

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ – ಮುಂಬೈ ಇಂಡಿಯನ್ಸ್‌ ಕದನ; ರಾಜಧಾನಿಯಲ್ಲಿ ತಪಾಸಣೆ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಂದು ಆರ್‌ಸಿಬಿ – ಮುಂಬೈ ಇಂಡಿಯನ್ಸ್‌ (RCB vs MI) ನಡುವೆ ಹೈವೋಲ್ಟೇಜ್‌ ಪಂದ್ಯ ನಡೆಯಲಿದ್ದು, ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ. ಸುಮಾರು 35 ಸಾವಿರ ಹಾಸನಗಳ ಸಾಮರ್ಥ್ಯವುಳ್ಳ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಸೇರಿವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಬಾಂಬ್‌ ನಿಷ್ಕ್ರಿಯ ದಳ ಸ್ಟೇಡಿಯಂನಲ್ಲಿ ತಪಾಸಣೆಗೆ ಮುಂದಾಗಿದೆ. ಅಲ್ಲದೆ, ಬೆಂಗಳೂರು ನಗರದ ಬಹುತೇಕ ಕಡೆಗಳಲ್ಲಿ ತಪಾಸಣೆ ನಡೆಯುತ್ತಿದೆ.