ಪರೀಕ್ಷೆಯಲ್ಲಿ ಕಾಪಿ ಹೊಡೆಯುವ ಫಜೀತಿಯ “ಲೋಕಲ್ ಬಾಯ್ಸ್” ಕಿರುಚಿತ್ರ ಯೂಟ್ಯೂಬ್ ನಲ್ಲಿ ಬಿಡುಗಡೆ

ಶಿವು-ಸೂಜಿ ಪ್ರೊಡಕ್ಷನ್ಸ್, ಸುಮಂತ್ ಆಚಾರ್ಯ ನಿರ್ದೇಶನದ “ಲೋಕಲ್ ಬಾಯ್ಸ್” ಕಿರುಚಿತ್ರ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ.

ಪ್ರತೀಕ್ ಶೆಟ್ಟಿ, ಕೃಷ್ಣ ಶೇಂದ್ರೆ, ಚಾರ್ಲಿ ಕುಮಾರ್, ಹೇಮಂತ್, ಸುಪ್ರೀತ್ ಕಾಟಿ, ವಿಶ್ವಾಸ್, ಕಡಕ್ ಬಾಬಿ, ಗುರು ತಾರಾಗಣದ ಚಿತ್ರವು ಕಾಲೇಜು ಹುಡುಗರ ಪರೀಕ್ಷಾ ಕೊಠಡಿಯಲ್ಲಿ ನಡೆಯುವ ಕಾಪಿ ಹೊಡೆಯುವ ಫಜೀತಿಯ ಚಿತ್ರಣವನ್ನು ಹೊಂದಿದೆ.

ಡಿ.ಒ.ಪಿ ಮತ್ತು ಸಂಕಲನ ಕೂಲ್ ಮಗಾ ಸ್ಟುಡಿಯೋಸ್ ನದ್ದಾಗಿದ್ದರೆ ರೋಹಿತ್ ಸೋವರ್ ಸಂಗೀತ ನೀಡಿದ್ದಾರೆ.