ರೈತರ ಮಕ್ಕಳಿಗೆ ತೋಟಗಾರಿಕೆ ತರಬೇತಿಗಾಗಿ ಅರ್ಜಿ ಆಹ್ವಾನ

ಉಡುಪಿ: ತೋಟಗಾರಿಕೆ ಇಲಾಖೆ ವತಿಯಿಂದ ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿ ಕಾರ್ಯಕ್ರಮವನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಕನಿಷ್ಠ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಯ ತಂದೆ, ತಾಯಿ, ಪೋಷಕರು ಕಡ್ಡಾಯವಾಗಿ ಕೃಷಿ ಜಮೀನು ಹೊಂದಿರುವುದರೊಂದಿಗೆ ಪಹಣಿ ನೀಡುವುದು ಕಡ್ಡಾಯವಾಗಿರುತ್ತದೆ. ಅರ್ಜಿ ಸಲ್ಲಿಸಲು ಏಪ್ರಿಲ್ 01 ಕೊನೆಯ ದಿನ. ಅರ್ಜಿ ನಮೂನೆಗಾಗಿ ಇಲಾಖಾ ವೆಬ್‌ಸೈಟ್ https://horticulturedir.karnataka.gov.in ಅಥವಾ ತೋಟಗಾರಿಕೆ ಉಪನಿರ್ದೇಶಕರು (ಜಿಪಂ) ಹಾಗೂ ಹಿರಿಯ ಸಹಾಯಕ […]
ಮಾರ್ಚ್ 4 ರಂದು ಅಸಂಘಟಿತ ಕಾರ್ಮಿಕರಿಗಾಗಿ ಪಡಿತರ ಚೀಟಿ ವಿತರಣೆ ಶಿಬಿರ

ಉಡುಪಿ: ಕೇಂದ್ರ ಸರ್ಕಾರವು ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ದತ್ತಾಂಶ ಕ್ರೋಢಿಕರಿಸುವ ಉದ್ದೇಶದಿಂದ 379 ವರ್ಗಗಳ ಎಲ್ಲಾ ಅಸಂಘಟಿತ ಕಾರ್ಮಿಕರನ್ನು ಇ-ಶ್ರಮ್ ಪೋರ್ಟಲ್ ಮೂಲಕ ನೋಂದಾಯಿಸಲಾಗುತ್ತಿದೆ. ಕಾರ್ಮಿಕ ಇಲಾಖೆ ಮತ್ತು ಆಹಾರ ಇಲಾಖೆಯ ವತಿಯಿಂದ ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಣಿಯಾಗಿ ಪಡಿತರ ಚೀಟಿ ಹೊಂದಿರದ ಅಸಂಘಟಿತ ಕಾರ್ಮಿಕರಿಗೆ ಪಡಿತರ ಚೀಟಿಯನ್ನು ಒದಗಿಸುವ ಸಲುವಾಗಿ ಮಾರ್ಚ್ 4 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಬನ್ನಂಜೆ ಗ್ರಾಹಕರ ವಿವಿದೋದ್ದೇಶ ಸಹಕಾರ ಸಂಘದಲ್ಲಿ ಕ್ಯಾಂಪ್ ಅನ್ನು ನಡೆಸಲಿದ್ದು, ಅಗತ್ಯ ದಾಖಲೆಗಳಾದ ಇ-ಶ್ರಮ್, […]
HACK-TECH 2.0 ಸ್ಪರ್ಧೆಯಲ್ಲಿ ಎಸ್.ಎಂ.ವಿ.ಐ.ಟಿ ಕಾಲೇಜಿಗೆ ದ್ವಿತೀಯ ಸ್ಥಾನ

ಶ್ರೀ ಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನ ಮೂರನೇ ವರ್ಷದ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಗಣೇಶ ಕಾಮತ್, ಮಕ್ವಿನ್ ಹರ್ಶೆಲ್ ಡಿಸೋಜಾ, ದೇವೋನಾ ಥೆಲ್ಮಾ ಪಿಂಟೋ, ದಿನೇಶ್ ಶೆಟ್ಟಿ ಕೊಯಮತ್ತೂರಿನ ಶ್ರೀ ಕೃಷ್ಣ ಆರ್ಟ್ ಎಂಡ್ ಸೈನ್ಸ್ ಕಾಲೇಜು ಫೆ. 20 ರಿಂದ 24 ರ ವರೆಗೆ ಆಯೋಜಿಸಿದ್ದ “HACK-TECH 2.0” ಆನ್ ಲೈನ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳು ಗ್ಲುಕೋಮಾ ಪತ್ತೆ ವ್ಯವಸ್ಥೆಯನ್ನು ಯಶಸ್ವಿಯಾಗಿ […]
ಹೆಬ್ರಿ ಬಸ್ ನಿಲ್ದಾಣದಲ್ಲಿ ಕಸದ ರಾಶಿಯ ಸ್ವಾಗತ: ಪಂಚಾಯತ್ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ದ ಸಾರ್ವಜನಿಕರ ಆಕ್ರೋಶ

ಹೆಬ್ರಿ: ಹೆಬ್ರಿ ಪಂಚಾಯತ್ ವ್ಯಾಪ್ತಿಯ ಬಸ್ಸು ನಿಲ್ದಾಣದ ಒಳಗೆ ಕಸದ ರಾಶಿ ಪ್ರಯಾಣಿಕರನ್ನು ಸ್ವಾಗತಿಸುತ್ತಿದ್ದು, ಈ ಬಗ್ಗೆ ಇಲ್ಲಿನ ನಾಗರಿಕರು ಅಸಮಾಧಾನ ಹೊರಹಾಕಿದ್ದಾರೆ. ಸ್ವಚ್ಛ ಭಾರತ ಅಭಿಯಾನದಡಿ ಸ್ವಚ್ಛತಾ ವಾಹನ ಮನೆ ಮನೆಯಿಂದ ಕಸ ಸಂಗ್ರಹಣೆ ಮಾಡುತ್ತಿದ್ದರೂ ಬಸ್ಸು ನಿಲ್ದಾಣದ ಬಳಿ ಕಸದ ರಾಶಿ ಬಿದ್ದಿರುತ್ತದೆ. ದಿನನಿತ್ಯ ನೂರಾರು ಪ್ರಯಾಣಿಕರು ಬಳಸುವ ಈ ಬಸ್ಸು ತಂಗುದಾಣದಲ್ಲಿ ಕಸದ ರಾಶಿ, ಪ್ಲಾಸ್ಟಿಕ್, ಸಾರಾಯಿ ಮತ್ತು ತಂಬಾಕು ಪ್ಯಾಕೆಟ್ ಗಳು ಎಲ್ಲೆಂದರಲ್ಲಿ ಹರಡಿರುತ್ತವೆ. ಸಾರ್ವಜನಿಕರೇ ಇದನ್ನು ಸ್ವಚ್ಛ ಮಾಡಬೇಕಾದ ಪರಿಸ್ಥಿತಿ […]
ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ರೂ.25 ರಷ್ಟು ಏರಿಕೆ.

ಹೊಸದಿಲ್ಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ತಕ್ಷಣವೇ ಜಾರಿಗೆ ಬರುವಂತೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ರೂ.25 ರಷ್ಟು ಹೆಚ್ಚಳ ಮಾಡಿದೆ. ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಏರಿಕೆಗೆ ಅನುಗುಣವಾಗಿ ಈ ಬದಲಾವಣೆ ಮಾಡಲಾಗಿದೆ ಎಂದು ಕಂಪನಿಗಳು ತಿಳಿಸಿವೆ. ದಿಲ್ಲಿಯಲ್ಲಿ ವಾಣಿಜ್ಯ ಬಳಕೆಯ 19 ಕೆ.ಜಿ. ತೂಕದ ಸಿಲಿಂಡರ್ ದರವು ರೂ. 1,795ಕ್ಕೆ ಏರಿಕೆ ಆಗಿದ್ದು, ಮುಂಬೈನಲ್ಲಿ ರೂ. 1,749ಕ್ಕೆ ಏರಿಕೆಯಾಗಿದೆ.