ಪುತ್ತಿಗೆ ಶ್ರೀಗಳ ಧರ್ಮ ಪ್ರಚಾರ ಕಾರ್ಯ ಅಭಿನಂದನೀಯ: ಶ್ರೀ ರವಿಶಂಕರ ಗುರೂಜಿ
ಉಡುಪಿ: ದೇಶ ವಿದೇಶಗಳಲ್ಲಿ ನಿರಂತರವಾಗಿ ಸಂಚರಿಸುತ್ತಾ ಧರ್ಮಪ್ರಚಾರ ಕಾರ್ಯವನ್ನು ಯಶಸ್ವಿಯಾಗಿ ನಡೆಸುತ್ತಿರುವ ಪುತ್ತಿಗೆ ಶ್ರೀಪಾದರ ಕಾರ್ಯಯೋಜನೆ ಅಭಿನಂದನೀಯವಾಗಿದೆ ಎಂದು ಅಂತಾರಾಷ್ಟ್ರೀಯ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮುಖ್ಯಸ್ಥರಾದ ಪೂಜ್ಯ ಶ್ರೀ ರವಿಶಂಕರ ಗುರೂಜಿ ಹೇಳಿದರು. ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣ ಮಠದ ಆಮಂತ್ರಣವನ್ನು ಪರಿಗಣಿಸಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ ಅವರು ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾರನ್ನು ಭೇಟಿಯಾಗಿ ಶ್ರೀಕೃಷ್ಣನ ದರ್ಶನ ಮಾಡಿ ಮಾತನಾಡಿದರು. ಆಹಾರ, ನಿಯಮ, ಅನುಷ್ಠಾನಗಳ ಆಚರಣೆಗಳಿಂದ ಯತಿಧರ್ಮದ ಕಠಿಣ ಆಚರಣೆಯನ್ನು ನಡೆಸುತ್ತಾ ಶ್ರೀಕೃಷ್ಣ […]
ರಾಜ್ಯಮಟ್ಟದ ಉದ್ಯೋಗ ಮೇಳ: ನೋಂದಣಿಗೆ ಸೂಚನೆ
ಉಡುಪಿ: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ (ಕೆ.ಎಸ್.ಡಿ.ಸಿ) ಬೆಂಗಳೂರು, ಇದರ ವತಿಯಿಂದ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗಾವಕಾಶವನ್ನು ನೀಡುವ ಸಲುವಾಗಿ ಫೆಬ್ರವರಿ 26 ಮತ್ತು 27 ರಂದು ರಾಜ್ಯ ಮಟ್ಟದ ಯುವ ಸಮೃದ್ಧಿ ಸಮ್ಮೇಳನ ಬೃಹತ್ ಉದ್ಯೋಗ ಮೇಳ-2024 ವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗುತ್ತಿದೆ. ಎಲ್ಲಾ ರೀತಿಯ ವಿದ್ಯಾರ್ಹತೆಯುಳ್ಳ ಉದ್ಯೋಗಾಕಾಂಕ್ಷಿಗಳು https://skillconnect.kaushalkar.com/ಲಿಂಕ್‌ನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಉದ್ಯೋಗ ಮೇಳದ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಮತ್ತು ಉಚಿತವಾಗಿ ನೋಂದಣಿ ಮಾಡಿಕೊಳ್ಳಲು ನಂ:201, […]
ಕೆ.ಎಂ.ಸಿ ಆಸ್ಪತ್ರೆಯ ಸಹಾಯಿತಾ ಪ್ರಜನನ ಕೇಂದ್ರದ 35ನೇ ವರ್ಷದ ವಾರ್ಷಿಕೋತ್ಸವ ಆಚರಣೆ: ಮೊದಲ ಪ್ರಣಾಳ ಶಿಶುವಿಗೆ ಈಗ 25 ರ ಹರೆಯ!
ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆ, ಮಾಹೆ ಮಣಿಪಾಲದ ಸಹಾಯಿತಾ ಪ್ರಜನನ ಕೇಂದ್ರವು (MARC) ಸಂತಾನಹೀನ ದಂಪತಿಗಳಿಗೆ ನೀಡುತ್ತಿರುವ ಯಶಸ್ವಿ ಸೇವೆಯ 35ನೇ ವಾರ್ಷಿಕೋತ್ಸವದ ಆಚರಣೆಯನ್ನು ಫೆಬ್ರವರಿ 18 ರಂದು ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡಾ. ಟಿಎಂಎ ಪೈ ಆಡಿಟೋರಿಯಂನಲ್ಲಿ ಆಚರಿಸಿತು. ಮಣಿಪಾಲದ ಪ್ರಥಮ ಮಹಿಳೆ ವಸಂತಿ ಆರ್ ಪೈ , ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಣಿಪಾಲ ಸಹಾಯಿತಾ ಪ್ರಜನನ ಕೇಂದ್ರ (ಮಾರ್ಕ್)ದ ಮೂಲಕ ಜನಿಸಿದ ಮೊದಲ ಇನ್ ವಿಟ್ರೋ ಫರ್ಟಿಲೈಸೇಶನ್ (IVF) ಮಗುವಿನ 25 ನೇ […]
ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಫಾಲಿ ಎಸ್ ನಾರಿಮನ್ ನಿಧನ
ನವದೆಹಲಿ: ಖ್ಯಾತ ಸಾಂವಿಧಾನಿಕ ನ್ಯಾಯಶಾಸ್ತ್ರಜ್ಞ ಮತ್ತು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಫಾಲಿ ಎಸ್ ನಾರಿಮನ್ (95) ಅವರು ಬುಧವಾರ ನವದೆಹಲಿಯಲ್ಲಿ ನಿಧನರಾಗಿದ್ದಾರೆ. ನವೆಂಬರ್ 1950 ರಲ್ಲಿ, ನಾರಿಮನ್ ಅವರು ಬಾಂಬೆ ಹೈಕೋರ್ಟ್‌ನ ವಕೀಲರಾದರು. ನಂತರ 1961 ರಲ್ಲಿ ಹಿರಿಯ ವಕೀಲರ ಹುದ್ದೆಯನ್ನು ಪಡೆದರು. ಆರಂಭದಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ಕೆಲಸ ಮಾಡಿದ ಅವರು, 1972 ರಲ್ಲಿ ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಅಭ್ಯಾಸ ಮಾಡಲು ನವದೆಹಲಿಗೆ ಸ್ಥಳಾಂತರಗೊಂಡರು. ಮೇ 1972 ರಿಂದ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ […]
ಸರ್ವಜ್ಞ ಜಯಂತಿ ಹಾಗೂ ಸಾಮಾಜಿಕ ನ್ಯಾಯ ದಿನಾಚರಣೆ
ಉಡುಪಿ: ಸರ್ವಜ್ಞ ಎಂದರೆ ಎಲ್ಲವನ್ನು ಬಲ್ಲವನು ಎನ್ನುವ ಅರ್ಥ ಇದೆ. ಯಾವುದೇ ವಿದ್ಯಾಲಯದಲ್ಲಿ ಪದವಿ ಪಡೆಯದೆ ತನ್ನ ಜೀವನ ಅನುಭವಗಳ ಮೂಲಕ ವಚನಗಳನ್ನು ರಚಿಸಿದ ಕವಿ ಸರ್ವಜ್ಞ, ಸಮಾಜದಲ್ಲಿ ಇದ್ದಂತಹ ಅಂಕು ಡೊಂಕುಗಳ ತಿದ್ದುವ ಕುರಿತು ಜನ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ತ್ರಿಪದಿಗಳ ಮೂಲಕ ವಚನಗಳನ್ನು ರಚಿಸಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್ ಹೇಳಿದರು. ಅಜ್ಜರಕಾಡು ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕಾಲೇಜಿನ […]