ಸಂದೇಶ್ಖಾಲಿ ಹಿಂಸಾಚಾರ: ಮಮತಾ ಬ್ಯಾನರ್ಜಿ ಸರಕಾರಕ್ಕೆ ಹೈ ಕೋರ್ಟ್ ತರಾಟೆ; ಶಹಜಹಾನ್ ಶೇಖ್ ಶರಣಾಗತಿಗೆ ಸೂಚನೆ
ಕೊಲ್ಕತ್ತ: ಸಂದೇಶ್ಖಾಲಿ (Sandeshkhali ) ಹಿಂಸಾಚಾರ ಕುರಿತು ಕಲ್ಕತ್ತಾ ಹೈಕೋರ್ಟ್ ಮಂಗಳವಾರ ಪಶ್ಚಿಮ ಬಂಗಾಳ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಒಬ್ಬ ವ್ಯಕ್ತಿಯು ಎಲ್ಲವನ್ನೂ ಸುಲಿಗೆ ಮಾಡುತ್ತಿರಲು ಸಾಧ್ಯವಿಲ್ಲ ಮತ್ತು ಹಲವಾರು ಮಹಿಳೆಯರಿಂದ ಲೈಂಗಿಕ ದೌರ್ಜನ್ಯ ಮತ್ತು ಭೂಹಗರಣದ ಆರೋಪ ಹೊತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕ ಶಹಜಹಾನ್ ಶೇಖ್ ನನ್ನು ರಾಜ್ಯವು ಬೆಂಬಲಿಸಬಾರದು ಎಂದು ಹೇಳಿದೆ. ರಾಜ್ಯ ಸರ್ಕಾರವು ಆತನನ್ನು ಪ್ರೋತ್ಸಾಹಿಸಲು ಸಾಧ್ಯವಿಲ್ಲ. ಆತ ಹಾನಿ ಮಾಡಿದ್ದಾನೆ ಎಂದು ತೋರಿಸಲು ಪ್ರಾಥಮಿಕ ಸಾಕ್ಷ್ಯಗಳಿವೆ. ಒಬ್ಬ ವ್ಯಕ್ತಿಯು ಇಡೀ ಜನಸಂಖ್ಯೆಯನ್ನು […]
ಜೆರೋಸಾ ಶಾಲೆ ಪ್ರಕರಣದಲ್ಲಿ ಶಾಸಕರ ನಡೆ ಖಂಡನೀಯ: ವೆರೋನಿಕಾ ಕರ್ನೆಲಿಯೋ
ಮಂಗಳೂರು: ಇಲ್ಲಿನ ಸಂತ ಜೆರೋಸಾ ಶಾಲೆಯ ಪ್ರಕರಣದಲ್ಲಿ ಬಿಜೆಪಿ ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಭರತ್ ಶೆಟ್ಟಿಯವರು ನಡೆದುಕೊಂಡ ರೀತಿ ನಾಚಿಕೇಗೇಡಿನದ್ದು ಎಂದು ಸಮಾಜ ಸೇವಕಿ ವೆರೋನಿಕಾ ಕರ್ನೆಲಿಯೋ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಯಲ್ಲಿ ಏನೋ ಒಂದು ವಿಚಾರ ನಡೆದಿದ್ದು ಅದನ್ನೆ ನೆಪವಾಗಿಟ್ಟುಕೊಂಡು ಶಾಸಕ ವೇದವ್ಯಾಸ್ ಕಾಮತ್ ಅವರು ಶಾಲೆಯ ಗೇಟಿನ ಹೊರಗಡೆ ಮುಗ್ದ ಮಕ್ಕಳನ್ನು ಬಳಸಿಕೊಂಡು ಪ್ರತಿಭಟನೆ ಮಾಡಿದ್ದು ಅಲ್ಲದೆ ಘೋಷಣೆಗಳನ್ನು ಕೂಗಲು ಪ್ರೇರಿಪಿಸಿರುವುದು ಖಂಡನೀಯ. ಅವರು ಒರ್ವ ಶಾಸಕರು ಎಂಬುದನ್ನು ಮರೆತು ನಡೆದುಕೊಂಡ ವರ್ತನೆ ನಾಗರೀಕ […]
SpaceX ರಾಕೆಟ್ ಮೂಲಕ ಅಂತರಿಕ್ಷಕ್ಕೆ ಚಿಮ್ಮಲಿದೆ ಟಾಟಾ ನಿರ್ಮಿತ ಮೊದಲ ಗೂಢಾಚಾರ ಉಪಗ್ರಹ: ಏಪ್ರಿಲ್ ನಲ್ಲಿ ಉಡಾವಣೆ ನಿರೀಕ್ಷೆ
ನವದೆಹಲಿ: ಭಾರತದ ಸ್ಥಳೀಯ ಖಾಸಗಿ ಸಂಸ್ಥೆ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ನಿಂದ ತಯಾರಿಸಲಾದ ಮೊದಲ ಗೂಢಚಾರ ಉಪಗ್ರಹವನ್ನು ಏಪ್ರಿಲ್ನಲ್ಲಿ ಸ್ಪೇಸ್ಎಕ್ಸ್ ರಾಕೆಟ್ನ ಮೂಲಕ ಉಡಾವಣೆ ಮಾಡಲು ನಿರ್ಧರಿಸಲಾಗಿದೆ. ವಿವೇಚನಾಯುಕ್ತ ಮಾಹಿತಿಯನ್ನು ಪಡೆಯಲು ಸಶಸ್ತ್ರ ಪಡೆಗಳು ಈ ಉಪಗ್ರಹದ ಮಾಹಿತಿಯನ್ನು ಬಳಸುತ್ತವೆ ಎಂದು ದಿ ಎಕನಾಮಿಕ್ ಟೈಮ್ಸ್ (ಇಟಿ) ಸೋಮವಾರ ವರದಿ ಮಾಡಿದೆ. ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (TASL) ನಿರ್ಮಿಸಿದ ಉಪಗ್ರಹವನ್ನು ಉಡಾವಣೆಗಾಗಿ ಫ್ಲೋರಿಡಾಕ್ಕೆ ಕಳುಹಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ. ಇದಕ್ಕೂ ಮುನ್ನ, ಸಶಸ್ತ್ರ ಪಡೆಗಳು […]
ಅನುಪಮಾ ಧಾರಾವಾಹಿ ನಟ ರಿತುರಾಜ್ ಸಿಂಗ್ ಹೃದಯಾಘಾತದಿಂದ ನಿಧನ
ಮುಂಬೈ: ಅನುಪಮಾ ಧಾರವಾಹಿಯ ಜನಪ್ರಿಯ ಟಿವಿ ನಟ ರಿತುರಾಜ್ ಸಿಂಗ್ ಫೆಬ್ರವರಿ 20 ರ ಮುಂಜಾನೆ 59 ನೇ ವಯಸ್ಸಿನಲ್ಲಿ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಅವರ ಸಹೋದ್ಯೋಗಿ ಮತ್ತು ಆತ್ಮೀಯ ಸ್ನೇಹಿತ ಅಮಿತ್ ಬೆಹ್ಲ್ ದುಃಖದ ಸುದ್ದಿಯನ್ನು ಖಚಿತಪಡಿಸಿದ್ದಾರೆ. ನಟ ಅಮಿತ್ ಬೆಹ್ಲ್, ರಿತುರಾಜ್ ಸಿಂಗ್ ಅವರ ಉತ್ತಮ ಸ್ನೇಹಿತರಾಗಿದ್ದು ಸುದ್ದಿಯನ್ನು ದೃಢಪಡಿಸಿದ್ದಾರೆ. ಫೆಬ್ರವರಿ 20 ರಂದು ಬೆಳಿಗ್ಗೆ12:30 ಕ್ಕೆ ರಿತುರಾಜ್ ಹೃದಯಾಘಾತ ಹೊಂದಿದ್ದಾರೆ. ರಿತುರಾಜ್ ಮೇದೋಜ್ಜೀರಕ ಗ್ರಂಥಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು […]
ಜ್ಞಾನ ಮಂಥನ: ವಾಣಿಜ್ಯ ವೃತ್ತಿಪರ ವಿದ್ಯಾರ್ಥಿಗಳ ವಿಶೇಷ ಅಧಿವೇಶನ
ಉಡುಪಿ: ಜಿಲ್ಲೆಯಲ್ಲಿ ಮೊದಲ ಬಾರಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಸಿದ್ಧಾಂತ್ ಫೌಂಡೇಶನ್ (ರಿ.), ತ್ರಿಶಾ ಸಮೂಹ ಸಂಸ್ಥೆಗಳ ಸಹ ಪ್ರಾಯೋಜಕತ್ವದಲ್ಲಿ, ವೃತ್ತಿಪರ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ “ಜ್ಞಾನ ಮಂಥನ” ಎನ್ನುವ ವಿಶೇಷ ಅಧಿವೇಶನವು ಫೆಬ್ರವರಿ 18 ಆದಿತ್ಯವಾರದಂದು ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅದ್ವಿತ್ ಐ.ಟೆಕ್ ಸಂಸ್ಥಾಪಕ ಸಿ.ಎ ಕೃಷ್ಣ ಉಪಾಧ್ಯಾಯ ಮಾತನಾಡಿ, ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯು, ತಂತ್ರಜ್ಞಾನಗಳೊಂದಿಗೆ ಒಗ್ಗಿಕೊಂಡಾಗ ಮಾತ್ರ ಹೊಸತನವನ್ನು ಕಾಣಲು ಸಾದ್ಯ ಎಂದರು. […]