Kidzee ಮಣಿಪಾಲ್ ನಲ್ಲಿ ಟೀಚರ್ ಹುದ್ದೆಗಳು ಖಾಲಿ
ಮಣಿಪಾಲ: ಅನಂತನಗರದಲ್ಲಿರುವ Kidzee ಮಣಿಪಾಲ್ ನಲ್ಲಿ ಟೀಚರ್ ಹುದ್ದೆಗಳು ಖಾಲಿ ಇದ್ದು, ಅಭ್ಯರ್ಥಿಯು ಇಂಗ್ಲೀಷ್ ಬಲ್ಲವರಾಗಿರಬೇಕು. ಆಸಕ್ತರು ಸಿವಿ ಮತ್ತು ರೆಸ್ಯೂಮ್ ಅನ್ನು [email protected] ಗೆ ಇ ಮೇಲ್ ಮಾಡಬಹುದು. ಸಂಪರ್ಕ: 9591982777
ದೈವಂ ಶರಣಂ ಗಚ್ಛಾಮಿ ತಂಡದಿಂದ ಮತ್ತೊಂದು ಥ್ರಿಲ್ಲರ್ ‘ನಂಬಿಕೆ ಮಾತಾಡಿದಾಗ’: ಯೂಟ್ಯೂಬ್ ನಲ್ಲಿ ಟ್ರೈಲರ್ ರಿಲೀಸ್
ದೈವಂ ಶರಣಂ ಗಚ್ಛಾಮಿ ತಂಡದಿಂದ ಮತ್ತೊಂದು ಥ್ರಿಲ್ಲರ್ ಚಿತ್ರ ‘ನಂಬಿಕೆ ಮಾತಾಡಿದಾಗ’ ಇದರ ಟ್ರೈಲರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಚಿತ್ರವು ಹಾರರ್ ಕಥಾ ಹಂದರದಲ್ಲಿ ಮೂಡಿಬಂದಿದೆ. ಚಿತ್ರಕಥೆ ಮತ್ತು ನಿರ್ದೇಶನ ವಿಜಯ್ ಮಂಜುನಾಥ್ ಇವರದಾಗಿದ್ದು, ಭರ್ಗ ಸಿನಿಮಾಸ್ ಬ್ಯಾನರ್ ನಲ್ಲಿ ಸಿನಿಮಾ ಸೈಕಲ್ ಪ್ರೊಡಕ್ಷನ್ಸ್ ಪ್ರಸ್ತುತಪಡಿಸುತ್ತಿರುವ ಚಿತ್ರವನ್ನು ಹರೀಶ್ ಶೆಟ್ಟಿ ಮತ್ತು ಜೀವನ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ವಿನಯ್ ಸಹ ನಿರ್ದೇಶನದಲ್ಲಿ ಪ್ರತೀಕ್ ಶೆಟ್ಟಿ, ದೀಪಕ್ ರೈ, ಪುಷ್ಪರಾಜ್, ಪ್ರಜ್ವಲ್ ಗೌಡ, ದೀಕ್ಷಾ, ಕಿರಣ್, ಶ್ರೀನಿವಾಸ್, ಶಕ್ತಿ […]
ಫೆ.17 ರಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ವತಿಯಿಂದ ಜಿಲ್ಲಾ ರೈತ ಸಮಾವೇಶ
ಉಡುಪಿ: ಹಳ್ಳಿಗಳಲ್ಲಿ ಕೃಷಿಯಿಂದ ವಿಮುಖವಾಗುತ್ತಿರುವ ಕೃಷಿಕರಿಗೆ ಹಾಗೂ ಕೃಷಿ ಆಸಕ್ತರಿಗೆ ಕಡಿಮೆ ಖರ್ಚಿನಲ್ಲಿ ಸುಲಭದ ಕೃಷಿ, ಹೈನುಗಾರಿಕೆ, ಭಿನ್ನ ಕೃಷಿ ಬೆಳೆಗಳು, ಯಾಂತ್ರೀಕರಣ ವಿಷಯಗಳನ್ನು, ಜಿಲ್ಲೆ ಯಲ್ಲಿ ಗ್ರಾಮ ಸಮಿತಿಗಳ ಮೂಲಕ ಕೃಷಿ ತಜ್ಞರು -ವಿಜ್ಞಾನಿಗಳಿಂದ ಪ್ರಾತ್ಯಕ್ಷಿಕೆ ಸಹಿತ ಮಾಹಿತಿ ಮಾರ್ಗದರ್ಶನ ನೀಡುತ್ತಿರುವ ಉಡುಪಿ ಜಿಲ್ಲಾ ಕೃಷಿಕ ಸಂಘವು ಆಯೋಜಿಸಿರುವ ಜಿಲ್ಲಾ ರೈತ ಸಮಾವೇಶ ಇದೇ ಫೆ.17ರ ಶನಿವಾರ ಬೆಳಗ್ಗೆ 9:30ರಿಂದ ಸಂಜೆ 3 ಗಂಟೆಯವರೆಗೆ ಉಡುಪಿ ಕುಂಜಿಬೆಟ್ಟು ಶ್ರೀಶಾರದಾ ಮಂಟಪ ಆವರಣದಲ್ಲಿ ನಡೆಯಲಿದೆ. ಬ್ಯಾಂಕ್ ಆಫ್ […]
ಪಲಿಮಾರು ಶ್ರೀಗಳಿಂದ ಪೆರ್ಣಂಕಿಲ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
ಹಿರಿಯಡ್ಕ: ಇಲ್ಲಿನ ಪೆರ್ಣಂಕಿಲ ಗ್ರಾಮದಲ್ಲಿ ಸಮಗ್ರ ಜೀರ್ಣೋದ್ಧಾರಗೊಂಡು ಲೋಕಾರ್ಪಣೆಗೆ ಸಿದ್ಧವಾಗುತ್ತಿರುವ ಶ್ರೀ ಮಹಾಲಿಂಗೇಶ್ವರ – ಶ್ರೀ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ – ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿದರು. ಬಳಿಕ ಆಶೀರ್ವಚನ ನೀಡಿದ ಶ್ರೀಪಾದರು, ದೇವಾಲಯಗಳಿಗೆ ಉಳ್ಳವರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದವರೇ ಶಕ್ತಿಮೀರಿ ದೇಣಿಗೆ ಸಮರ್ಪಿಸುತ್ತಿದ್ದಾರೆ. ಇದಕ್ಕೆ ಅವರು ಕ್ಷೇತ್ರ ಸಾನಿಧ್ಯದಲ್ಲಿಟ್ಟಿರುವ ಭಕ್ತಿಯೇ ಕಾರಣ. ಧಾರ್ಮಿಕ ಕ್ಷೇತ್ರಗಳಿಗೆ ನೀಡುವ ಕಿಂಚಿತ್ ದೇಣಿಗೆಯೂ ಸದ್ಬಳಕೆಯಾಗುತ್ತದೆ. ಅದು ಧರ್ಮರಕ್ಷಣೆ, ಲೋಕೋಪಕಾರದ ಜೊತೆಗೆ ವೈಯುಕ್ತಿಕ […]
ವಿಶ್ವ ಏಕತೆಯ ಪ್ರತೀಕ ಯುಎಇ ಯ ಪ್ರಥಮ ಹಿಂದೂ ಮಂದಿರ: ಪ್ರಧಾನಿ ಮೋದಿ
ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್‌ನ ಮೊದಲ ಹಿಂದೂ ದೇವಾಲಯವಾದ ಅಬುಧಾಬಿಯಲ್ಲಿ ಬೋಚಸನ್‌ವಾಸಿ ಅಕ್ಷರ ಪುರುಷೋತ್ತಮ್ ಸ್ವಾಮಿನಾರಾಯಣ ಸಂಸ್ಥಾ (BAPS) ಹಿಂದೂ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಉದ್ಘಾಟಿಸಿದರು. ದೇವಾಲಯದ ಆವರಣದಲ್ಲಿ ಗಂಗಾ ಮತ್ತು ಯಮುನಾ ನದಿಗಳಲ್ಲಿ ನೀರನ್ನು ಅರ್ಪಿಸಿದ ಪ್ರಧಾನಿ ಮೋದಿ ನಂತರ ದೇವಾಲಯದೊಳಗೆ ಪ್ರಾರ್ಥನೆ ಸಲ್ಲಿಸಿದರು. ಅಬುಧಾಬಿಯಲ್ಲಿನ BAPS ಹಿಂದೂ ದೇವಾಲಯದ ಲೋಕಾರ್ಪಣೆ ಸಮಾರಂಭ ಗುರುವಾರ ನಡೆಯಿತು. ಉದ್ಘಾಟನೆಗೂ ಮುನ್ನ ಅರ್ಚಕರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಯುಎಇಯಲ್ಲಿ ಮೊದಲ ಹಿಂದೂ ದೇವಾಲಯದ ಕುರಿತು ಮಾತನಾಡಿದ […]