ಪಾಕಿಸ್ತಾನ ಅಸೆಂಬ್ಲಿ ಚುನಾವಣೆ: ಸ್ಪಷ್ಟ ಬಹುಮತದ ಕೊರತೆ; ಒಕ್ಕೂಟ ಸರ್ಕಾರ ರಚನೆ ಸಾಧ್ಯತೆ
ಕರಾಚಿ: ಉಗ್ರಗಾಮಿ ದಾಳಿಗಳು ಮತ್ತು ಚುನಾವಣಾ ದುಷ್ಕೃತ್ಯದ ಆರೋಪಗಳ ನಡುವೆ ಪಾಕಿಸ್ತಾನದಲ್ಲಿ ಗುರುವಾರ ಸಂಜೆ 5 ಗಂಟೆಗೆ ಮತದಾನ ಮುಕ್ತಾಯಗೊಂಡಿದೆ. ಮತಗಳ ಸಮಗ್ರತೆ ಮತ್ತು ಆಳವಾದ ರಾಜಕೀಯ ವಿಭಜನೆಗಳಿಂದಾಗಿ ಸಮ್ಮಿಶ್ರ ಸರ್ಕಾರ ರಚನೆಯ ಸಾಧ್ಯತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ. ವಿವಾದಾತ್ಮಕ ಚುನಾವಣೆಯ ಸುತ್ತಲಿನ ನಿರೀಕ್ಷಿತ ಅಶಾಂತಿಯ ನಡುವೆ ಸುವ್ಯವಸ್ಥೆಯನ್ನು ಕಾಪಾಡುವ ಅಗತ್ಯವನ್ನು ಉಲ್ಲೇಖಿಸಿ ಪಾಕಿಸ್ತಾನ ಸರ್ಕಾರ ಗುರುವಾರ ರಾಷ್ಟ್ರದಾದ್ಯಂತ ಮೊಬೈಲ್ ಫೋನ್ ಸೇವೆಗಳನ್ನು ಸ್ಥಗಿತಗೊಳಿಸಿದೆ. ಇದರ ನಂತರ, ಪಿಎಂಎಲ್-ಎನ್ ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ಶೆಹಬಾಜ್ ಷರೀಫ್ […]
ಪುರಂದರ ದಾಸರ ಆರಾಧನೆ ಪ್ರಯುಕ್ತ 600 ಸ್ತ್ರೀಯರಿಂದ ಶತಕಂಠ ಗಾಯನ
ಉಡುಪಿ: ಪುರಂದರದಾಸರ ಆರಾಧನೆ ಪ್ರಯುಕ್ತ ಶುಕ್ರವಾರ ಪರ್ಯಾಯ ಪುತ್ತಿಗೆ ಮಠದಿಂದ ಶತಕಂಠ ಗಾಯನ ಆಯೋಜಿಸಲಾಯಿತು. ಸುಗುಣ ಶ್ರೀ ಭಜನಾ ಮಂಡಳಿಯ ಶಾಂತ ಹೆಬ್ಬಾರ್ ಅವರ ನೇತೃತ್ವದಲ್ಲಿ, ರತ್ನ ಸಂಜೀವ ಕಲಾ ಮಂಡಲ ಸರಳೇ ಬೆಟ್ಟು ಇದರ ಸಂಯುಕ್ತ ಆಶ್ರಯದಲ್ಲಿ ಸುಮಾರು 600 ಸ್ತ್ರೀಯರು 3 ಗಂಟೆಗಳ ಕಾಲ ಶ್ರೀ ಪುರಂದರ ದಾಸರ ಕೀರ್ತನೆಗಳನ್ನು ಹಾಡಿದರು. ಶ್ರೀ ಕೃಷ್ಣ, ಮುಖ್ಯ ಪ್ರಾಣ ದೇವರಿಗೂ ಶ್ರೀ ಪುರಂದರದಾಸರಿಗೂ ವಿಶೇಷ ನಂಟು ಇದ್ದು ಉಡುಪಿ ಶ್ರೀ ಕೃಷ್ಣ ಮತ್ತು ಪ್ರಾಣ ದೇವರನ್ನು […]
ಉಡುಪಿ: ಇಂದು ಮಿಷನ್ ಆಸ್ಪತ್ರೆಯ ಹೊಸ ಕ್ಯಾಂಪಸ್ “ಲೋಂಬಾರ್ಡ್ ಕಾಲೇಜ್ ಆಫ್ ಪ್ಯಾರಾ ಮೆಡಿಕಲ್ ಆ್ಯಂಡ್ ಅಲೈಡ್ ಹೆಲ್ತ್ ಸೈಯನ್ಸ್” ಉದ್ಘಾಟನೆ.
ಉಡುಪಿ, ಫೆ.10: ಲೋಂಬಾರ್ಡ್ ಮೆಮೋರಿಯಲ್ (ಮಿಷನ್) ಆಸ್ಪತ್ರೆಯ ಹೊಸ ಕ್ಯಾಂಪಸ್ “ಲೋಂಬಾರ್ಡ್ ಕಾಲೇಜ್ ಆಫ್ ಪ್ಯಾರಾ ಮೆಡಿಕಲ್ ಆ್ಯಂಡ್ ಅಲೈಡ್ ಹೆಲ್ತ್ ಸೈಯನ್ಸ್” ಫೆ.10 ರಂದು ಸಂಜೆ 4 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ನೂತನ ಸಂಸ್ಥೆಯನ್ನು ರೆ.ಫಾ.ಹೇಮಚಂದ್ರ ಕುಮಾರ್ ಬಿಷಪ್ ಅವರು ಉದ್ಘಾಟಿಸಲಿದ್ದಾರೆ. ಲೊಂಬಾರ್ಡೋ ಮೆಮೋರಿಯಲ್ ಆಸ್ಪತ್ರೆಯ ನಿರ್ದೇಶಕ ಡಾ.ಸುನಿಲ್ ಜತ್ತನ್ನ ಅಧ್ಯಕ್ಷತೆ ವಹಿಸಲಿದ್ದಾರೆ. ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ, ಜಿಲ್ಲಾ ಸರ್ಜನ್ ಡಾ.ವೀಣಾ ಕುಮಾರಿ ಎಂ, ಕಿನ್ನಿಮುಲ್ಕಿ ವಾರ್ಡ್‍ನ […]
ಮಣಿಪಾಲ: ಬಾಸಿಲ್ ಕೆಫೆ ರೆಸ್ಟೋರೆಂಟ್ ನಲ್ಲಿ ಉದ್ಯೋಗಾವಕಾಶ
ಮಣಿಪಾಲ: ಇಲ್ಲಿನ ವಿದ್ಯಾರತ್ನ ನಗರದಲ್ಲಿರುವ ಬಾಸಿಲ್ ಕೆಫೆ ರೆಸ್ಟೋರೆಂಟ್ (Basil Cafe) ನಲ್ಲಿ ಭಾರತೀಯ, ಚೈನೀಸ್, ಕಾಂಟಿನೆಂಟಲ್ ಅಡುಗೆ ಬಲ್ಲವರು, ಪ್ಯಾಂಟ್ರಿ, ವೈಟರ್, ಡೆಲಿವರಿ ಬಾಯ್ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ. ವೇತನ: 12000-15000ಆಹಾರ ಮತ್ತು ವಸತಿ ವ್ಯವಸ್ಥೆ ನೀಡಲಾಗುವುದು. 3 ತಿಂಗಳ ಬಳಿಕ ಖಾಯಂ ಸಿಬ್ಬಂದಿ ಸವಲತ್ತುಗಳನ್ನು ನೀಡಲಾಗುವುದು. ಆಸಕ್ತರು ಸಿವಿ ಅನ್ನು 8861245442 ಗೆ ಕಳುಹಿಸಬಹುದು ಅಥವಾ 8861980553 ಗೆ ಕರೆ ಮಾಡಬಹುದು.
ರಕ್ತದ ಕಾಂಡಕೋಶ ದಾನ ಜಾಗೃತಿ ಮೂಡಿಸಲು ಮಣಿಪಾಲ್ ಮ್ಯಾರಥಾನ್ ಜೊತೆಗೆ ಡಿಕೆಎಂಎಸ್-ಬಿಎಂಎಸ್‌ಟಿ ಸಹಭಾಗಿತ್ವ
ಬೆಂಗಳೂರು: ರಕ್ತದ ಕ್ಯಾನ್ಸರ್ ಮತ್ತು ರಕ್ತದ ಕಾಂಡಕೋಶ (ಬ್ಲಡ್ ಸ್ಟೆಮ್ ಸೆಲ್) ದಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ವಯಂಸೇವಾ ಸಂಸ್ಥೆ ಡಿಕೆಎಂಎಸ್ ಬಿಎಂಎಸ್‌ಟಿ (DKMS-BMST) ಫೌಂಡೇಶನ್ ಇಂಡಿಯಾ, ಮಣಿಪಾಲ್ ಮ್ಯಾರಥಾನ್ 2024ರ (manipal Marathon) ಜೊತೆಗೆ ಕೈಜೋಡಿಸಿದೆ. ಮ್ಯಾರಥಾನ್‌ನಲ್ಲಿ ಸುಮಾರು ಹತ್ತು ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಜೀವ ಉಳಿಸುವ ರಕ್ತಕಾಂಡ ಕೋಶದ ದಾನಿಗಳನ್ನು ನೋಂದಣಿ ಮಾಡಿಕೊಳ್ಳುವ ಗುರಿಯನ್ನು ಸಂಸ್ಥೆಯು ಹೊಂದಿದೆ. ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಶನ್‌ನ ಸಹಭಾಗಿತ್ವದಲ್ಲಿ ಮಣಿಪಾಲ ಅಕಾಡೆಮಿ ಆಫ್ […]