ಜನತೆಯ ಸಮಸ್ಯೆಗೆ ಅಧಿಕಾರಗಳ ಸಕಾರಾತ್ಮಕ ಸ್ಪಂದನೆಯಿಂದ ಜನತಾ ದರ್ಶನ ಕಾರ್ಯಕ್ರಮ ಅರ್ಥಪೂರ್ಣ: ಯಶ್‌ಪಾಲ್ ಸುವರ್ಣ

ಬ್ರಹ್ಮಾವರ: ಜನ ಸಾಮಾನ್ಯರು ತಮ್ಮ ಸಮಸ್ಯೆಗಳು ಬಗೆಹರಿಯುತ್ತವೆ ಎಂಬ ನಿರೀಕ್ಷೆಯನ್ನು ಇಟ್ಟುಕೊಂಡು ಜನಸ್ಪಂದನ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸುತ್ತಾರೆ. ಅಂತಹ ಸಂದರ್ಭದಲ್ಲಿ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಿ, ಸಮಸ್ಯೆಗಳನ್ನು ಬಗೆಹರಿಸಲು ಮುಂದಾದಲ್ಲಿ ಮಾತ್ರ ಜನತಾ ದರ್ಶನ ಒಂದು ಅರ್ಥಪೂರ್ಣ ಕಾರ್ಯಕ್ರಮವಾಗುತ್ತದೆ ಎಂದು ಶಾಸಕ ಯಶ್‌ಪಾಲ್ ಎ ಸುವರ್ಣ ಹೇಳಿದರು. ಅವರು ಬುಧವಾರ ಬ್ರಹ್ಮಾವರದ ತಾಲೂಕು ಆಡಳಿತ ಸೌಧದ ಹಿಂಭಾಗದಲ್ಲಿರುವ ನಾರಾಯಣ ಗುರು ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ಹಾಗೂ ಬ್ರಹ್ಮಾವರ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯತ್ […]

ಭ್ರಷ್ಟಚಾರ ಆರೋಪಿಸಿ ಉಪಲೋಕಾಯುಕ್ತರಿಗೆ ದೂರು: ಉಡುಪಿ ನೋಂದಣಿ ಕಛೇರಿಯಲ್ಲಿ ಲೋಕಾಯುಕ್ತ ಪೋಲಿಸರಿಂದ ತನಿಖೆ

ಉಡುಪಿ: ಕರ್ನಾಟಕ ಲೋಕಾಯುಕ್ತದ ಉಪ ಲೋಕಾಯುಕ್ತರು ಉಡುಪಿ ಜಿಲ್ಲೆಗೆ ಭೇಟಿ ನೀಡಿ ಸಾರ್ವಜನಿಕ ಅಹವಾಲು, ಕುಂದುಕೊರತೆ, ದೂರು ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ವಿವಿಧ ಕಚೇರಿಗಳಿಗೆ ಅನೀರಿಕ್ಷಿತ ಭೇಟಿ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಕಾರ್ಯಕ್ರಮವೊಂದರಲ್ಲಿ ವಕೀಲರರೊಬ್ಬರು ಸಾರ್ವಜನಿಕರು ಉಡುಪಿ ನೋಂದಣಿ ಕಚೇರಿಯಲ್ಲಿ ಭ್ರಷ್ಟಚಾರ ನಡೆಯುತ್ತಿದೆ ಎಂದು ಮೌಖಿಕವಾಗಿ ದೂರಿದ ಹಿನ್ನಲೆ ಉಪ ಲೋಕಾಯುಕ್ತ, ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಇವರು ಉಡುಪಿ ನೋಂದಣಿ ಕಚೇರಿಯ ತನಿಖೆಗೆ ಸರ್ಚ್ ವಾರೆಂಟ್ ಅನ್ನು ಹೊರಡಿಸಿ ತನಿಖೆಗೆ ಮಂಗಳೂರು ವಿಭಾಗ ಲೋಕಾಯುಕ್ತ […]

2,000 ಮರಗಳನ್ನು ಕಡಿಯಲು 48 ಗಂಟೆಯಲ್ಲಿ ಅರ್ಜಿ ಸಲ್ಲಿಸಿದ ಬೆಂಗಳೂರು ನಾಗರಿಕರು!!

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಪಾಯ ಹಾಗೂ ಅಡೆತಡೆಗಳನ್ನು ಉಂಟುಮಾಡುವ ಮರಗಳನ್ನು ಕಡಿಯಲು ಸಾರ್ವಜನಿಕರಿಗೆ ಅರ್ಜಿ ಹಾಕುವಂತೆ ಹೇಳಿತ್ತು. ಆಶ್ಚರ್ಯವೆಂದರೆ ಬರೀ 48 ಗಂಟೆಯಲ್ಲಿ 2,000 ಮರಗಳನ್ನು ಕಡಿಯಲು ಅರ್ಜಿಗಳು ಬಂದಿವೆ.ಆದರೆ ಈ ಎಲ್ಲ ಮರಗಳನ್ನು ಕಡಿಯುವುದಿಲ್ಲ. ಸಂಚಾರಿ ಇಲಾಖೆಯೊಂದಿಗೆ ಸಮೀಕ್ಷೆ ಹಾಗೂ ಸಮಾಲೋಚನೆ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ವಿಭಾಗದ ಅಧಿಕಾರಿಗಳು ಹೇಳಿದ್ದಾರೆ. ಮರಗಳನ್ನು ಕಡಿಯುವ ಬದಲು, ಕೆಲ ಕೊಂಬೆಗಳನ್ನು ಕಡಿದು ಮರಗಳನ್ನು ಉಳಿಸುಕೊಳ್ಳುವ ಬಗ್ಗೆ ಆಲೋಚನೆ ಮಾಡಲಾಗುತ್ತಿದೆ. ಸತ್ತ ಮರಗಳು […]

ಫೆ.11ರಂದು ಮಣಿಪಾಲ ಮ್ಯಾರಥಾನ್ ನ ಆರನೇ ಆವೃತ್ತಿ: ದಿವ್ಯಾಂಗರ ಸಹಿತ 8 ದೇಶಗಳ ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ

ಮಣಿಪಾಲ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (MAHE) ಸಂಸ್ಥೆಯು ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್‌ನ ಸಹಭಾಗಿತ್ವದಲ್ಲಿ ಆಯೋಜಿಸಿರುವ ಮಣಿಪಾಲ ಮ್ಯಾರಥಾನ್‌ನ ಆರನೇ ಆವೃತ್ತಿ ಫೆ.11ರಂದು ಮಣಿಪಾಲದಲ್ಲಿ ನಡೆಯಲಿದೆ. ಈ ಬಾರಿ ವಿವಿಧ ವಿಭಾಗಗಳಲ್ಲಿ ದೇಶ- ವಿದೇಶಗಳ ಸುಮಾರು 15,000ದಷ್ಟು ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂದು ಮಣಿಪಾಲ ಮಾಹೆಯ ಪ್ರೊ. ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ್ ತಿಳಿಸಿದ್ದಾರೆ. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಅಮೆರಿಕ, ಜಪಾನ್, ಫ್ರಾನ್ಸ್, ಟರ್ಕಿ ಸೇರಿ ಒಟ್ಟು ಎಂಟು ದೇಶಗಳ […]

ಕರ್ನಾಟಕ ಡಿಜಿಟಲ್ ಇಕಾನಮಿ ಮಿಷನ್ ಜೊತೆ ಉನ್ನತಿ ಕೆರಿಯರ್ ಅಕಾಡೆಮಿ ಒಪ್ಪಂದ

ಉಡುಪಿ: ಕೌಶಲ್ಯ ಶಿಕ್ಷಣಕ್ಕೆ ಈಗಾಗಲೇ ಪ್ರಸಿದ್ಧಿ ಪಡೆದಿರುವ ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿಯು ಇದೀಗ ಕರಾವಳಿ ಕರ್ನಾಟಕದ ಯುವಕ ಯುವತಿಯರಿಗೆ ಉತ್ತಮ ಉದ್ಯೋಗಾವಕಾಶ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಡಿಜಿಟಲ್ ಇಕಾನಮಿ ಮಿಷನ್ ( ಕೆ-ಡೆಮ್) ನೊಂದಿಗೆ ಮಂಗಳೂರಿನಲ್ಲಿ ಆಯೋಜನೆಗೊಂಡಿದ್ದ “ಟೆಕ್ನೋವಾಂಜ 3.0” ಮೇಳದಲ್ಲಿ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದಂತೆ ಕರಾವಳಿ ಕರ್ನಾಟಕದಲ್ಲಿ ಅನೇಕ ಐಟಿ, ಬಿಟಿ, ಫಿನ್ ಟೆಕ್ ತಂತ್ರಜ್ಞಾನ ಸಂಬಂಧಿತ ಕಂಪೆನಿಗಳನ್ನು ಸ್ಥಾಪಿಸಲು ಕೆ-ಡೆಮ್ ಪ್ರಯತ್ನಿಸುತ್ತಿದ್ದು, ಈ ಕಂಪೆನಿಗಳಲ್ಲಿ ಸ್ಥಳೀಯರಿಗೆಉತ್ತಮ ಉದ್ಯೋಗಾವಕಾಶ ಸೃಷ್ಟಿಸಲು ಉನ್ನತಿ ಸಂಸ್ಥೆಯ […]