ಪೆರ್ಡೂರು: ಫೆ. 11 ರಂದು ಶ್ರೀಮತಿ ಸರ್ವಾಣಿ ಪಳ್ಳಿ ಶ್ರೀನಿವಾಸ ಹೆಗ್ಡೆ ಬಂಟರ ಸಮುದಾಯ ಭವನ ಉದ್ಘಾಟನೆ
ಪೆರ್ಡೂರು: ಬಂಟರ ಸಂಘ(ರಿ) ಪೆರ್ಡೂರು ಮಂಡಲ ಶ್ರೀಮತಿ ಸರ್ವಾಣಿ ಪಳ್ಳಿ ಶ್ರೀನಿವಾಸ ಹೆಗ್ಡೆ ಬಂಟರ ಸಮುದಾಯ ಭವನದ (Smt Sarvani Palli Srinivasa Hegde Bunts Community Hall) ಉದ್ಘಾಟನಾ ಸಮಾರಂಭವು ಫೆ.11 ರಂದು ಜರುಗಲಿದೆ. ಬಳಿಕ ಸಭಾಕಾರ್ಯಕ್ರಮ ನಡೆಯಲಿದ್ದು ಅಧ್ಯಕ್ಷತೆಯನ್ನು ಪೆರ್ಡೂರು ಬಂಟರ ಸಂಘದ ಅಧ್ಯಕ್ಷ ಶಾಂತರಾಮ ಸೂಡ ವಹಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ರಾಮಕೃಷ್ಣ ಗ್ರೂಪ್ ಆಫ್ ಹೋಟೆಲ್, ವಿಲೇಪಾರ್ಲೆ ಮುಂಬೈ ಸುಬ್ಬಯ್ಯ ಶೆಟ್ಟಿ, ಮಾಹೆ ಮಣಿಪಾಲದ ಸಹಕುಲಾಧಿಪತಿ ಡಾ. ಹೆಚ್.ಎಸ್ ಬಲ್ಲಾಳ್, ಬಂಟರ ಯಾನೆ […]
ಕರಾವಳಿ ಹಾಗೂ ಮಲೆನಾಡಿನಲ್ಲಿ ನಕ್ಸಲರ ಓಡಾಟ: ಕಟ್ಟೆಚ್ಚರ ವಹಿಸಲು ನಕ್ಸಲ್ ನಿಗ್ರಹ ದಳಕ್ಕೆ ಸೂಚನೆ
ಉಡುಪಿ: ನಕ್ಸಲ್ ತಂಡದ ನಾಯಕ ವಿಕ್ರಮ್ ಗೌಡ ಹಾಗೂ ಆತನ ಸಹಚರರರು ಉಡುಪಿ ಹಾಗೂ ಚಿಕ್ಕಮಗಳೂರಿನಲ್ಲಿ ಓಡಾಟ ನಡೆಸಿದ್ದಾರೆ ಎಂಬ ಮಾಹಿತಿಯ ಮೇರೆಗೆ ಈ ಎರಡು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಐದು ದಿನಗಳ ಕಾಲ ಹೈ ಅಲರ್ಟ್ ಘೋಷಿಸಲಾಗಿದ್ದು, ತೀವ್ರ ಕಟ್ಟೆಚ್ಚರ ವಹಿಸುವಂತೆ ಎಎನ್‍ಎಫ್‍ಗೆ ಸೂಚನೆ ನೀಡಲಾಗಿದೆ. ನಕ್ಸಲ್ ಮುಖಂಡ ಸಾಕೇತ್ ರಾಜನ್ ಸಾವಿನ ಬಳಿಕ ವಿಕ್ರಮ್ ಗೌಡ ತಲೆಮರೆಸಿಕೊಂಡಿದ್ದು, ಈಗ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ವಿಕ್ರಮ್ ಗೌಡ ಓಡಾಟದ ಸುಳಿವು ಸಿಕ್ಕಿದೆ. ಈ ಭಾಗದಲ್ಲಿ ನಕ್ಸಲರ […]
ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಪಡೆಯುತ್ತಿದ್ದ ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಪಟು ಸಾವು
ಚಿಕ್ಕಮಗಳೂರು: ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಪಟು, ಚಿಕ್ಕಮಗಳೂರು ತೇಗೂರು ಗ್ರಾಮದ ನಿವಾಸಿ ವಿನೋದ್ ರಾಜ್ (24) ಸಾವನ್ನಪ್ಪಿದ್ದಾರೆ. ವಿನೋದ್ ರಾಜ್ ಇತ್ತೀಚೆಗಷ್ಟೇ ತನ್ನದೇ ಊರಿನ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಈ ಬಗ್ಗೆ ಎರಡೂ ಮನೆಯವರ ನಡುವೆ ತಕಾರಾರುಗಳಿದ್ದವು. ಈ ನಡುವೆ ಯುವತಿ ತವರು ಮನೆಗೆಂದು ತೆರಳಿದ್ದು, ಬಳಿಕ ಹಿಂದಿರುಗಿ ಬಂದಿರಲಿಲ್ಲ. ಈ ಘಟನೆಯಾದ ಬಳಿಕ ವಿನೋದ್ ರಾಜ್ ಖಿನ್ನತಗೆ ಜಾರಿದ್ದು, ನೇಣುಬಿಗಿದುಕೊಂಡಿದ್ದರು. ತಕ್ಷಣವೇ ಅವರನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ […]
ಉಡುಪಿ: ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಮಹಿಳಾ ಮೀಸಲಾತಿ ಪಟ್ಟಿ ಪ್ರಕಟ
ಉಡುಪಿ: ಈಗಾಗಲೇ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ನ ಮತದಾರರ ಪಟ್ಟಿ ಅಂತಿಮವಾಗಿದೆ. ಇದರ ಬೆನ್ನಿಗೇ ಉಡುಪಿ ಜಿಲ್ಲಾ ಪಂಚಾಯತ್‌ನ 28 ಕ್ಷೇತ್ರಗಳ ಪೈಕಿ 14 ಹಾಗೂ ತಾಲೂಕು ಪಂಚಾಯತ್‌ನ 95 ಕ್ಷೇತ್ರಗಳ ಪೈಕಿ 49 ಸ್ಥಾನಗಳು ಮಹಿಳೆಯರಿಗೆ ಮೀಸಲಿರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಜಿ.ಪಂ ಹಾಗೂ ತಾ.ಪಂ. ಚುನಾಯಿತ ಸದಸ್ಯರ ಕ್ಷೇತ್ರಗಳ ಸೀಮಾ ಗಡಿ ಹಾಗೂ ಚುನಾಯಿತರಾಗಬೇಕಾದ ಸದಸ್ಯರ ಸಂಖ್ಯೆಯನ್ನು ನಿರ್ಧರಿಸಿ ಆಯೋಗ ಶಿಫಾರಸು ಮಾಡಿರುವ ವರದಿಯನ್ನು ಅಂಗೀಕರಿಸಿರುವ ರಾಜ್ಯ ಸರಕಾರ ಮೀಸಲು […]
ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟಿ ಭಾವನಾ
ಉಡುಪಿ: ನಟಿ ಹಾಗೂ ಭರತನಾಟ್ಯ ಕಲಾವಿದೆ ಭಾವನಾ ಕೃಷ್ಣಮಠಕ್ಕೆ ಆಗಮಿಸಿ ಕೃಷ್ಣದೇವರ ದರ್ಶನ ಪಡೆದು ಪುತ್ತಿಗೆ ಶ್ರೀಗಳಿಂದ ಕೋಟಿ ಗೀತಾಲೇಖನ ಯಜ್ಞ ದೀಕ್ಷೆ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಖ್ಯಾತ ಸಂಗೀತ ವಿದ್ವಾನ್ ನಾರಾಯಣ ಶರಳಾಯ ಉಪಸ್ಥಿತರಿದ್ದರು.