ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ದರ 14 ರೂಪಾಯಿ ಏರಿಕೆ.
ನವದೆಹಲಿ: ಕೇಂದ್ರ ಬಜೆಟ್ ಮಂಡನೆಗೂ ಮುನ್ನವೇ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ಮಾಡಿದೆ. ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ದರ 14 ರೂಪಾಯಿ ಏರಿಕೆ ಮಾಡಲಾಗಿದೆ. ಗೃಹಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಪರಿಷ್ಕೃತ ಬೆಲೆ ಇಂದಿನಿಂದ (ಫೆ.1) ಅನ್ವಯವಾಗಲಿದೆ. ಕಳೆದ ತಿಂಗಳು ಕೂಡ ತೈಲ ಕಂಪನಿಗಳು ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ತುಸು ಹೆಚ್ಚಳ ಮಾಡಿದ್ದವು. ಬೆಲೆ ಹೆಚ್ಚಳದ ಬಳಿಕ ದೆಹಲಿಯಲ್ಲಿ ವಾಣಿಜ್ಯ […]
ಕಾಪು: ಸಮುದ್ರ ಮಧ್ಯದಲ್ಲೇ ಮೀನುಗಾರರ ಮೇಲೆ ಹಲ್ಲೆ; 2 ಲ.ರೂ ಮೌಲ್ಯದ ಮೀನು ದರೋಡೆ
ಕಾಪು: ಮಂಗಳೂರಿನಿಂದ ಮೀನುಗಾರಿಕೆಗೆ ಬಂದಿದ್ದ ಬೋಟನ್ನು ತಡೆದು ಮೀನುಗಾರರಿಗೆ ಹಲ್ಲೆ ನಡೆಸಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಮೀನು ಹಾಗೂ ಮೀನುಗಾರರ ಬಳಿಯಿದ್ದ ಮೊಬೈಲ್ ಫೋನ್ ಸಹಿತ ಸೊತ್ತುಗಳನ್ನು ದರೋಡೆಗೈದಿರುವ ಘಟನೆ ಕಾಪು ಲೈಟ್ ಹೌಸ್ ಸಮೀಪದಲ್ಲಿ ಮಂಗಳವಾರ ನಡೆದಿದೆ. ಆಂಧ್ರಪ್ರದೇಶದ ಮೀನುಗಾರರಾದ ಪರ್ವತಯ್ಯ, ಕೊಂಡಯ್ಯ, ರಘು ರಾಮಯ್ಯ, ಶಿವರಾಜ್, ಕೆ. ಶೀನು, ಏಳುಮಲೆ, ಚಿನ್ನೋಡು, ರಾಜು ಅವರು ಜ. 27ರಂದು ಮಹಮ್ಮದ್ ಮುಸ್ತಫ್ ಬಾಷಾ ಅವರಿಗೆ ಸೇರಿದ ಮಿರಾಶ್ – 2 ಟ್ರಾಲ್ ಬೋಟ್‌ನಲ್ಲಿ ಮಂಗಳೂರು ಬಂದರಿನಿಂದ […]
30 ವರ್ಷಗಳ ಬಳಿಕ ಜ್ಞಾನವಾಪಿ ಮಂದಿರದ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಿದ ಅರ್ಚಕರು
ವಾರಣಾಸಿ: ಜ್ಞಾನವಾಪಿ ಮಂದಿರದ ನೆಲಮಾಳಿಗೆಯಲ್ಲಿ ಸೀಲ್ ಮಾದುವ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಆದೇಶದ 30 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಹಿಂದೂ ಅರ್ಚಕರು ‘ವ್ಯಾಸರ ನೆಲಮಾಳಿಗೆ’ಯಲ್ಲಿ ಪೂಜಾ ವಿಧಿ ವಿಧಾನಗಳನ್ನು ಕೈಗೊಂಡರು. ಬುಧವಾರದಂದು ಜಿಲ್ಲಾ ನ್ಯಾಯಾಲಯವು ಸೀಲ್ ಮಾಡಲಾದ ಪ್ರದೇಶವನ್ನು ಭಕ್ತರ ಪ್ರವೇಶಕ್ಕೆ ಮುಕ್ತಗೊಳಿಸುವಂತೆ ಮತ್ತು ಪೂಜಾ ವಿಧಿ ವಿಧಾನಗಳನ್ನು ಜಿಲ್ಲಾಡಳಿತದ ಸುಪರ್ದಿಯಲ್ಲಿ ನಡೆಸುವಂತೆ ಆದೇಶ ನೀಡಿತ್ತು. ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಂದಿರದ ಸಮೀಪವಿರುವ ಪ್ರದೇಶವು ನಿನ್ನೆ […]
ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ 55 ಲಕ್ಷ ಉದ್ಯೋಗಾವಕಾಶ ಸೃಜನೆ; ಐದು ಇಂಟಿಗ್ರೇಟೆಡ್ ಅಕ್ವಾ ಪಾರ್ಕ್ ಸ್ಥಾಪನೆ
ನವದೆಹಲಿ: ಗುರುವಾರದಂದು ಸಂಸತ್ತಿನಲ್ಲಿ ಮಧ್ಯಂತರ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮೀನುಗಾರಿಕಾ ಕ್ಷೇತ್ರಕ್ಕೆ ನೀಡಲಾದ ಪ್ರೋತ್ಸಾಹದ ಬಗ್ಗೆ ಸದನಕ್ಕೆ ತಿಳಿಸಿದರು. “ಮೀನುಗಾರರಿಗೆ ಸಹಾಯ ಮಾಡುವ ಮಹತ್ವವನ್ನು ಅರಿತು ಮೀನುಗಾರಿಕೆಗಾಗಿ ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸಿದ್ದು ನಮ್ಮ ಸರ್ಕಾರ. ಇದು ಒಳನಾಡು ಮತ್ತು ಜಲಚರಗಳ ಉತ್ಪಾದನೆಯನ್ನು ದ್ವಿಗುಣಗೊಳಿಸಿದೆ. 2013-14 ರಿಂದ ಸಮುದ್ರಾಹಾರ ರಫ್ತು ಕೂಡ ದ್ವಿಗುಣಗೊಂಡಿದೆ. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (PMMSY) ಅನುಷ್ಠಾನವನ್ನು ಪ್ರತಿ ಹೆಕ್ಟೇರ್‌ಗೆ 3 ರಿಂದ 5 ಟನ್ ಗಳವರೆಗೆ ಜಲಕೃಷಿ […]
2014 ರ ಮೊದಲಿನ ಆರ್ಥಿಕತೆಯ ದುರುಪಯೋಗದ ಬಗ್ಗೆ ಶ್ವೇತಪತ್ರ ಮಂಡನೆ; ಆದಾಯ ತೆರಿಗೆ ಯಥಾಸ್ಥಿತಿ, ಆವಾಸ್ ಯೋಜನೆ-ಆಯುಷ್ಮಾನ್ ಭಾರತ್ ವಿಸ್ತರಣೆ
ನವದೆಹಲಿ: ಆರನೇ ಬಾರಿ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕಳೆದ 10 ವರ್ಷಗಳಲ್ಲಿ ಭಾರತದ ಆರ್ಥಿಕತೆಯು ಆಳವಾದ ಪ್ರಸರಣವನ್ನು ಕಂಡಿದೆ. ಅತ್ಯದ್ಭುತ ಕೆಲಸದ ಆಧಾರದ ಮೇಲೆ, ನಮ್ಮ ಸರ್ಕಾರವು ಮತ್ತೊಮ್ಮೆ ಜನಾದೇಶದೊಂದಿಗೆ ಜನರಿಂದ ಆಶೀರ್ವದಿಸಲ್ಪಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದರು. ಹಿಂದಿನ ಬದ್ಧತೆಯನ್ನು ಪುನರುಚ್ಚರಿಸಿದ ಸಚಿವೆ 2047 ರ ವೇಳೆಗೆ ವಿಕಸಿತ ಭಾರತವನ್ನಾಗಿ ಮಾಡಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದರು. 2014 ರ ಮೊದಲು ಆರ್ಥಿಕತೆಯ ದುರುಪಯೋಗದ ಬಗ್ಗೆ ಮೋದಿ ಸರ್ಕಾರವು ಸಂಸತ್ತಿನಲ್ಲಿ […]