ಉಡುಪಿ: ಸಂಭ್ರಮದ ಗಣರಾಜ್ಯೋತ್ಸವ ದಿನಾಚರಣೆ; ಸಾಧಕರಿಗೆ ಸನ್ಮಾನ

ಉಡುಪಿ: ಜಿಲ್ಲಾಡಳಿತದ ವತಿಯಿಂದ ಜ.26ರಂದು ಇಲ್ಲಿನ ಮಹಾತ್ಮಗಾಂಧಿ ಜಿಲ್ಲಾ ಮೈದಾನ ಅಜ್ಜರಕಾಡಿನಲ್ಲಿ 75ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ನಂತರ ಜಿಲ್ಲಾ ಪೊಲೀಸ್ ಪಡೆ, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಗೌರವ ರಕ್ಷೆ ಸ್ವೀಕರಿಸಿದರು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಜಿಲ್ಲೆಯಲ್ಲಿ ಸರಕಾರ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು. ರಾಜ್ಯ ಸರಕಾರದಿಂದ ಜನಸ್ನೇಹಿ ಆಡಳಿತ ಸರ್ವತೋಮುಖ ಅಭಿವೃದ್ಧಿಗೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ನೆರವು […]

ಅಮೃತಕಾಲದ ಗಣರಾಜ್ಯೋತ್ಸವದಲ್ಲಿ ‘ನಾರಿ ಶಕ್ತಿ’ಯ ಠೇಂಕಾರ!! ಮಹಿಳಾ ಸಬಲೀಕರಣಕ್ಕೆ ಸಾಕ್ಷಿಯಾದ ಕರ್ತವ್ಯ ಪಥ

ನವದೆಹಲಿ: ಭಾರತವು ತನ್ನ 75 ನೇ ಗಣರಾಜ್ಯೋತ್ಸವದ ಆಚರಣೆಯೊಂದಿಗೆ ಐತಿಹಾಸಿಕ ಮೈಲಿಗಲ್ಲನ್ನು ಗುರುತಿಸಿದೆ. ರಾಷ್ಟ್ರದ ರಾಜಧಾನಿಯ ಕರ್ತವ್ಯ ಪಥದಲ್ಲಿ ಭವ್ಯವಾದ ಪರೇಡ್ ಭಾರತದ ಮಿಲಿಟರಿ ಪರಾಕ್ರಮ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸಿದ್ದಲ್ಲದೆ, ನಾರಿ ಶಕ್ತಿ ಮತ್ತು ಮಹಿಳಾ ಸಬಲೀಕರಣವನ್ನು ಅನಾವರಣಗೊಳಿಸಿದೆ. ಇದೇ ಮೊದಲ ಬಾರಿಗೆ, ಎಲ್ಲಾ ಮಹಿಳಾ ತ್ರಿ-ಸೇವಾ ದಳವು ಪರೇಡ್‌ನಲ್ಲಿ ಭಾಗವಹಿಸಿತು. ಆರ್ಮಿ ಡೆಂಟಲ್ ಕಾರ್ಪ್ಸ್‌ನ ಕ್ಯಾಪ್ಟನ್ ಅಂಬಾ ಸಮಂತ್, ಭಾರತೀಯ ನೌಕಾಪಡೆಯ ಸರ್ಜ್ ಲೆಫ್ಟಿನೆಂಟ್ ಕಾಂಚನಾ, ಭಾರತೀಯ ವಾಯುಪಡೆಯ ಫ್ಲಿಟ್ ಲೆಫ್ಟಿನೆಂಟ್ ದಿವ್ಯ ಪ್ರಿಯಾ […]

ಜ. 28 ರಂದು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಲಿಖಿತ ಪರೀಕ್ಷೆ: ವಸ್ತ್ರಸಂಹಿತೆ ಜಾರಿ

ಉಡುಪಿ: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (ಸಿಎಆರ್/ಡಿಎಆರ್ ಪುರುಷ ಮತ್ತು ತೃತೀಯ ಲಿಂಗ ಪುರುಷ) -3064 ಹುದ್ದೆಗಳಿಗೆ ಲಿಖಿತ ಪರೀಕ್ಷೆಯು ಜನವರಿ 28 ರಂದು ಬೆಳಗ್ಗೆ 11 ರಿಂದ 12.30 ರ ವರೆಗೆ ರಾಜ್ಯದಾದ್ಯಂತ ನಡೆಯಲಿದ್ದು, ಪರೀಕ್ಷಗೆ ಹಾಜರಾಗುವ ಪುರುಷ ಮತ್ತು ತೃತೀಯ ಲಿಂಗ ಪುರುಷ ಅಭ್ಯರ್ಥಿಗಳು ಅರ್ಧ ತೋಳಿನ ಶರ್ಟ್ಗಳನ್ನು ಕಡ್ಡಾಯವಾಗಿ ಧರಿಸಬೇಕು. ಸಾಧ್ಯವಾದಷ್ಟು ಕಾಲರ್ ರಹಿತ ಶರ್ಟ್ಗಳನ್ನು ಧರಿಸಬಹುದಾಗಿದ್ದು, ಝಿಪ್ ಪ್ಯಾಕೆಟ್‌ಗಳು, ದೊಡ್ಡ ಬಟನ್‌ಗಳು ಇರುವ ಶರ್ಟ್ಗಳನ್ನು ಹಾಗೂ […]

ಆತ್ರಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75 ನೇ ಗಣರಾಜ್ಯೋತ್ಸವ ಆಚರಣೆ: ಲಯನ್ ಜಗದೀಶ್ ಆಚಾರ್ಯರಿಂದ ಧ್ವಜಾರೋಹಣ

ಆತ್ರಾಡಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆತ್ರಾಡಿಯಲ್ಲಿ ಇಂದು 75 ನೇ ಗಣರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು. ಕಾರ್ಯಕ್ರಮದ ಅದ್ಯಕ್ಷತೆಯನ್ನು SDMC ಉಪಾಧ್ಯಕ್ಷೆ ಶ್ರೀಮತಿ ಕೀರ್ತಿಯವರು ವಹಿಸಿಕೊಂಡಿದ್ದರು. ಧ್ವಜಾರೋಹಣವನ್ನು ಮಾಡಿದ ಲಯನ್ಸ್ ಕ್ಲಬ್ ಚೇತನ ಉಡುಪಿಯ ಅಧ್ಯಕ್ಷ ಲಯನ್ ಜಗದೀಶ್ ಆಚಾರ್ಯರವರು ಪ್ರಜಾಪ್ರಭುತ್ವದಿನದ ಮಹತ್ವ ಮತ್ತು ದೇಶಕ್ಕೆ ಅದರ ಅಗತ್ಯತೆಯನ್ನು ತಿಳಿಸಿದರು. ಜತೆಗೆ ಲಯನ್ಸ್ ಕ್ಲಬ್ ಚೇತನದ ಸೇವಾ ಚಟುವಟಿಕೆಗಳನ್ನು ತಿಳಿಸುತ್ತಾ ಆತ್ರಾಡಿ ಶಾಲೆಯಲ್ಲಿ ಚೇತನ ಕ್ಲಬ್ ಮಾಡಿರುವ ಕಾರ್ಯಕ್ರಮಗಳನ್ನು ನೆನಪಿಸಿಕೊಂಡರು. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಚೇತನಾದ […]

ಜ್ಞಾನವಾಪಿ ಪ್ರಕರಣ: ಅಸ್ತಿತ್ವದಲ್ಲಿರುವ ಕಟ್ಟಡ ನಿರ್ಮಾಣದ ಮೊದಲು ದೊಡ್ಡ ಹಿಂದೂ ದೇವಾಲಯವಿತ್ತೆಂದ ಎ.ಎಸ್.ಐ ವರದಿ

ವಾರಣಾಸಿ: ಜ್ಞಾನವಾಪಿ ಪ್ರಕರಣದಲ್ಲಿ, ಅಸ್ತಿತ್ವದಲ್ಲಿರುವ ಕಟ್ಟಡವನ್ನು ನಿರ್ಮಿಸುವ ಮೊದಲಿಗೂ ಅಲ್ಲೊಂದು ದೊಡ್ಡ ಹಿಂದೂ ದೇವಾಲಯವಿತ್ತು ಎಂದು ಭಾರತೀಯ ಪುರಾತತ್ವ ಇಲಾಖೆಯ ಸರ್ವೆಯ ವರದಿ ತಿಳಿಸಿದೆ ಹಿಂದೂ ಪಕ್ಷದ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ. ಪುರಾತತ್ವ ಇಲಾಖೆಯ ಸಮೀಕ್ಷೆಯು ಶಿವಲಿಂಗ-ಕಾರಂಜಿ ಚರ್ಚೆಗೆ ಪೂರ್ಣವಿರಾಮ ನೀಡಲಿದೆ ಎಂದು ಹಿಂದೂ ಅರ್ಜಿದಾರರ ಪಕ್ಷವನ್ನು ಪ್ರತಿನಿಧಿಸುವ ವಕೀಲರು ಹೇಳಿದ್ದಾರೆ. ವಾರಣಾಸಿ ನ್ಯಾಯಾಲಯವು ಈ ವಾರದ ಆರಂಭದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ವರದಿಯನ್ನು ಸಾರ್ವಜನಿಕಗೊಳಿಸುವಂತೆ ಮತ್ತು ಎರಡೂ ಕಡೆಯವರಿಗೆ ಅದರ ಪ್ರತಿಗಳನ್ನು […]