ಭಕ್ತರ ನೂಕುನುಗ್ಗಲು: ರಾಮಮಂದಿರ ಭೇಟಿಯನ್ನು ಮಾರ್ಚ್ ವರೆಗೆ ಮುಂದೂಡಲು ಕೇಂದ್ರ ಸಚಿವರಿಗೆ ಪ್ರಧಾನಿ ಮೋದಿ ಸಲಹೆ

ನವದೆಹಲಿ: ರಾಮಲಲ್ಲಾನನ್ನು ಕಣ್ತುಂಬಿಕೊಳ್ಳಲು ಅಯೋಧ್ಯೆಯ ರಾಮ ಮಂದಿರಕ್ಕೆ ಲಕ್ಷಾಂತರ ಜನರು ಆಗಮಿಸುತ್ತಿದ್ದು, ವಿಐಪಿ ಮತ್ತು ವಿವಿಐಪಿ ಸಂಬಂಧಿತ ಭಕ್ತರ ಅನಾನುಕೂಲತೆಯನ್ನು ತಪ್ಪಿಸಲು ದೇವಾಲಯಕ್ಕೆ ಭೇಟಿ ನೀಡುವುದನ್ನು ವಿಳಂಬಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸಚಿವರನ್ನು ಒತ್ತಾಯಿಸಿದ್ದಾರೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯ ನೇತೃತ್ವದ ವೇಳೆ ಪ್ರಧಾನಿ ಮೋದಿ, ದೇವಸ್ಥಾನದಲ್ಲಿ ಭಕ್ತರ ಭಾರೀ ನೂಕುನುಗ್ಗಲು ಮತ್ತು ದೇವಾಲಯದ ಪಟ್ಟಣಕ್ಕೆ ವಿವಿಐಪಿ ಮತ್ತು ವಿಐಪಿ ಭೇಟಿಗಳಿಂದ ಸಾರ್ವಜನಿಕರಿಗೆ ಉಂಟಾಗುವ ಅನಾನುಕೂಲತೆಗಳ ಬಗ್ಗೆ ಹಾಗೂ ಭದ್ರತೆಯ ಬಗ್ಗೆ ಕಳವಳ […]

ಕುಂದಾಪುರ: ಬೈಕ್ ಕಳ್ಳತನ ಪ್ರಕರಣ – ಬೈಕ್ ಸಹಿತ ಆರೋಪಿ ಪೋಲಿಸ್ ವಶಕ್ಕೆ

ಕುಂದಾಪುರ: ಕುಂದಾಪುರ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಬೈಕ್ ಕಳ್ಳತನ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ, ಬೈಕನ್ನು ವಶಪಡಿಸಿಕೊಳ್ಳುವಲ್ಲಿ ಕುಂದಾಪುರ ಠಾಣ ಪಿಐ ಮತ್ತು ತಂಡ ಯಶಸ್ವಿಯಾಗಿದ್ದಾರೆ. ಅನಂತ ಎಂಬವರು ಭಂಡಾರ್ಕಾರ್ಸ್ ಕಾಲೇಜು ರಸ್ತೆಯಲ್ಲಿಯಲ್ಲಿರುವ ಸರಕಾರಿ ನೌಕರರ ಸಂಘದ ಕಟ್ಟಡದ ಬಳಿಯಲ್ಲಿ ಹೀರೋ ಹೋಂಡಾ ಕಂಪೆನಿಯ ಸ್ಪ್ಲೆಂಡರ್ ಬೈಕನ್ನು ನಿಲ್ಲಿಸಿ ಕೆಲಸಕ್ಕೆ ತೆರಳಿದ್ದು ಸಂಜೆ ವೇಳೆಗೆ ವಾಪಾಸು ಬಂದು ನೋಡುವಾಗ ಬೈಕ್ ಪಾರ್ಕಿಂಗ್ ಮಾಡಿದ ಸ್ಥಳದಲ್ಲಿ ಇಲ್ಲದೇ ಇದ್ದು ಎಲ್ಲಾ ಕಡೆ ಹುಡುಕಾಡಿ ಸಿಕ್ಕಿರುವುದಿಲ್ಲ. ಬೈಕನ್ನು ಯಾರೋ ಕಳ್ಳರು […]

ಜ. 26ರಿಂದ 31ರ ವರೆಗೆ ಹೊಟೇಲ್ ಕಿದಿಯೂರು ತೃತೀಯ ಅಷ್ಟಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮ

ಉಡುಪಿ: ಇಲ್ಲಿನ ಪ್ರತಿಷ್ಠಿತ “ಕಿದಿಯೂರ್ ಹೊಟೇಲ್ಸ್‌” (Hotel Kidiyur) ಇದರ ಆವರಣದಲ್ಲಿರುವ ಕಾರಣಿಕ ಶ್ರೀ ನಾಗ ಸಾನ್ನಿಧ್ಯದಲ್ಲಿ ಜ. 26ರಿಂದ 31ರ ವರೆಗೆ ಅಷ್ಟಪವಿತ್ರ ನಾಗಮಂಡಲೋತ್ಸವ (Nagamandala) ನಡೆಯಲಿದೆ. ಜ. 26 ಬೆಳಗ್ಗೆ 6 ರಿಂದ ಜ. 30ರ ಬೆಳಗ್ಗೆ 7 ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಜ.29 ಬೆಳಗ್ಗೆ 7.30 ರಿಂದ ಮಹಾ ರುದ್ರಯಾಗ, ರಾತ್ರಿ 8 ರಿಂದ ವಾರಾಣಸಿಯಿಂದ ಆಗಮಿಸಿರುವ ಅರ್ಚಕ ವೃಂದದವರಿಂದ ಸಾಮೂಹಿಕ ಗಂಗಾರತಿ ಜರಗಲಿದೆ. ಜ.31ರ ಬೆಳಗ್ಗೆ 9.45ಕ್ಕೆ […]