ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠೆ: ಕೊಡವೂರಿನಲ್ಲಿ ದೀಪೋತ್ಸವ
ಕೊಡವೂರು: ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆಯ ಪ್ರಯುಕ್ತ ಮಹತೋಬಾರ ಕೊಡವೂರು ಶ್ರೀ ಶಂಕರನಾರಾಯಣ ದೇವಳದಲ್ಲಿ ಪ್ರಧಾನ ಅರ್ಚಕ ಪ್ರಸಾದ್ ಭಟ್ ಅವರು ದೀಪ ಬೆಳಗಿಸಿ ದೀಪೋತ್ಸವಕ್ಕೆ ಚಾಲನೆ ನೀಡಿದರು. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸಾಧು ಸಾಲ್ಯಾನ್, ಸದಸ್ಯರಾದ ಸುಧೀರ್ ರಾವ್ ಕೊಡವೂರು, ಪೂರ್ಣಿಮಾ ಜನಾರ್ದನ್ ಗೋವಿಂದ ಐತಾಳ್, ಉಮೇಶ್ ರಾವ್, ವಾಸುದೇವ ಉಪಾಧ್ಯಾಯ, ಕಾಳು ಸೇರಿಗಾರ ಮತ್ತು ಊರಿನ ಹತ್ತು ಸಮಸ್ತರು ದೀಪವನ್ನು ಹಚ್ಚಿ ದೀಪೋತ್ಸವವನ್ನು ಆಚರಿಸಿದರು.
31ನೇ ವರ್ಷದ ಅಡ್ವೆ ನಂದಿಕೂರು “ಕೋಟಿ – ಚೆನ್ನಯ” ಜೋಡುಕರೆ ಕಂಬಳ ಕೂಟದ ಫಲಿತಾಂಶ
ಪಡುಬಿದ್ರೆ: ಶನಿವಾರ ನಡೆದ 31ನೇ ವರ್ಷದ ಅಡ್ವೆ ನಂದಿಕೂರು “ಕೋಟಿ – ಚೆನ್ನಯ” ಜೋಡುಕರೆ ಕಂಬಳ ಕೂಟದ ಫಲಿತಾoಶ ಹೀಗಿವೆ. ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ : ಕನೆಹಲಗೆ: 09 ಜೊತೆ ಅಡ್ಡಹಲಗೆ: 03 ಜೊತೆ ಹಗ್ಗ ಹಿರಿಯ: 17 ಜೊತೆ ನೇಗಿಲು ಹಿರಿಯ: 30 ಜೊತೆ ಹಗ್ಗ ಕಿರಿಯ: 21 ಜೊತೆ ನೇಗಿಲು ಕಿರಿಯ: 84 ಜೊತೆ ಒಟ್ಟು ಕೋಣಗಳ ಸಂಖ್ಯೆ: 164 ಜೊತೆ ಕನೆಹಲಗೆ: ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ ಹಲಗೆ ಮುಟ್ಟಿದವರು: […]
ಶ್ರೀರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಅನವರತ ದುಡಿದ ಕಾರ್ಮಿಕರ ಮೇಲೆ ಪ್ರಧಾನಿ ಮೋದಿ ಪುಷ್ಪವೃಷ್ಠಿ
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ದುಡಿದ ಕುಶಲಕರ್ಮಿ ಕಾರ್ಮಿಕರ ಮೇಲೆ ಪ್ರಧಾನಿ ಮೋದಿ ಪುಷ್ಪವೃಷ್ಠಿ ನಡೆಸಿ ಅವರೆಲ್ಲರನ್ನೂ ಗೌರವಿಸಿದರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮುಂದಿನ 1,000 ವರ್ಷಗಳವರೆಗಿನ ಭಾರತದ ಭದ್ರ ಬುನಾದಿ: ಪ್ರಧಾನಿ ಮೋದಿ
ಅಯೋಧ್ಯೆ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾ.ಸ್ವ.ಸಂಘದ ಮುಖ್ಯಸ್ಥ ಮೋಹನ್ ಭಾಗವತ್, ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಉಪಸ್ಥಿತಿಯಲ್ಲಿ ಪ್ರಧಾನಿ ಮೋದಿ ಇಂದು ಶ್ರೀರಾಮಲಲ್ಲಾ ‘ಪ್ರಾಣ ಪ್ರತಿಷ್ಠೆಯ’ ವಿಧಿಗಳನ್ನು ಕೈಗೊಂಡರು. ಪ್ರಧಾನಿಯವರು ಸುಮಾರು 8,000 ವಿಶೇಷ ಆಹ್ವಾನಿತರು ಮತ್ತು ದೇಶವನ್ನುದ್ದೇಶಿಸಿ ಮಾತನಾಡಿದರು. ನಮ್ಮ ರಾಮ ಬಂದಿದ್ದಾನೆ! ರಾಮ ಲಲ್ಲಾ ಈಗ ಟೆಂಟ್ನಲ್ಲಿ ಇರುವುದಿಲ್ಲ. ಆತ ದೊಡ್ಡ ದೇವಸ್ಥಾನದಲ್ಲಿರುತ್ತಾನೆ ಎಂದು ಭಾಷಣ ಪ್ರಾರಂಭಿಸಿದ ಅವರು ಜ.22 ಈ ಐತಿಹಾಸಿಕ ದಿನವು ಹೊಸ ಯುಗವೊಂದಕ್ಕೆ ನಾಂದಿಯಾಗಲಿದ್ದು ಕಾಲಚಕ್ರವನ್ನು ಬದಲಾಯಿಸಲಿದೆ ಎಂದರು. ನಮ್ಮ […]
ರಾಜ್ಯದ ಮುಜರಾಯಿ ಇಲಾಖೆಗೆ ಸೇರಿದ 34 ಸಾವಿರ ದೇಗುಲದಲ್ಲಿ ವಿಶೇಷ ಪೂಜೆ: ಸಚಿವ ರಾಮಲಿಂಗಾ ರೆಡ್ಡಿ
ಉಡುಪಿ: ವಡಭಾಂಡೇಶ್ವರ ದೇಗುಲ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದರು. ಮಲೈಯಲ್ಲಿರುವ ಪುರಾಣ ಪ್ರಸಿದ್ಧ ವಡಭಾಂಡೇಶ್ವರ ಬಲರಾಮನ ದೇಗುಲಕ್ಕೆ ಭಾನುವಾರ ಭೇಟಿ ನೀಡಿ, ಜೀರ್ಣೋದ್ಧಾರ ಕಾಮಗಾರಿ ಅವಲೋಕಿಸಿ ಮಾತನಾಡಿದರು. ಆಯೋಧ್ಯೆಯಲ್ಲಿ ರಾಮನ ಪ್ರತಿಷ್ಠಾ ಮಹೋತ್ಸವದ ಹಿನ್ನೆಯಲ್ಲಿ ರಾಜ್ಯದ ಮುಜರಾಯಿ ಇಲಾಖೆಗೆ ಸೇರಿದ 34 ಸಾವಿರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲು 15 ದಿನದ ಹಿಂದೆಯೇ ಆದೇಶ ಹೊರಡಿಸಿದ್ದೇನೆ. ರಾಜ್ಯ ಸರ್ಕಾರ ಸಿ ದರ್ಜೆಯ ಎಲ್ಲ ದೇಗುಲವನ್ನು ಅಭಿವೃದ್ಧಿ ಮಾಡಬೇಕಿದೆ. […]