ಅಯೋಧ್ಯೆ ಶ್ರೀರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪಣೆ: ನಾಳೆ ಉಡುಪಿಯಲ್ಲಿ ಮೂರು ಬಸ್ಸುಗಳಿಂದ ಉಚಿತ ಸೇವೆ
ಉಡುಪಿ: ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪಣೆಯ ಅಂಗವಾಗಿ ದೇಶದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಸಹ ವಿವಿಧ ಸಂಘಟನೆಗಳು ವಿವಿಧ ರೀತಿಯಲ್ಲಿ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದು, ಹಾಗೆಯೇ ನಾಳೆ ಉಡುಪಿಯಿಂದ ಹೆಬ್ರಿಗೆ ತೆರಳುವ ಎಸ್ ಆರ್ ಎಮ್, ಎಸ್ ಡಿ ಎಮ್, ಮುಟ್ಲುಪಾಡಿಯಿಂದ ಉಡುಪಿಗೆ ತೆರಳುವ ಎಸ್ ಎಮ್ ಎಮ್ ಎಸ್ ಬಸ್ಸಿನವರು ದಿನವಿಡೀ ಉಚಿತ ಪ್ರಯಾಣವನ್ನು ನಾಗರಿಕರಿಗೆ ಒದಗಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಸಚಿವ ರಾಮಲಿಂಗಾ ರೆಡ್ಡಿ ಇಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ
ಉಡುಪಿ: ಸಾರಿಗೆ ಮತ್ತು ಮುಜರಾಯಿ ಸಚಿವರಾದ ಡಾ.ರಾಮಲಿಂಗಾ ರೆಡ್ಡಿ ಅವರು ಇಂದು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದರು. ಶ್ರೀ ಕೃಷ್ಣ ಮತ್ತು ಮುಖ್ಯಪ್ರಾಣ ದೇವರ ದರ್ಶನ ಮಾಡಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೆಂದ್ರ ತೀರ್ಥ ಶ್ರೀಪಾದರನ್ನು ಭೇಟಿಯಾದರು. ಹಾಗೂ ಶ್ರೀಪಾದರು ಅವರನ್ನು ಗೌರವಿಸಿದರು.
ಹೊಸ ಪೆಟ್ರೋಲ್ ಇಂಜಿನ್ ಮೀನುಗಾರಿಕಾ ದೋಣಿಗಳಿಗೆ ಸಹಾಯಧನ ಸೌಲಭ್ಯ
ಉಡುಪಿ: ಮೀನುಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ 20 ವರ್ಷಗಳ ಹಳೆಯ ಮೀನುಗಾರಿಕಾ ದೋಣಿಗಳ ಸೀಮೆಎಣ್ಣೆ ಇಂಜಿನ್ ಅನ್ನು ನಿಷ್ಕ್ರಿಯಗೊಳಿಸಿ, ಹೊಸ ಪೆಟ್ರೋಲ್ ಇಂಜಿನ್ ಅನ್ನು ಖರೀದಿಸಿ ಅಳವಡಿಸಿಕೊಂಡವರಿಗೆ ರೂ. 50,000 ಸಹಾಯಧನ ವಿತರಿಸುವ ಯೋಜನೆ ಜಾರಿಗೊಳಿಸಲಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ 2,000 ಮೋಟಾರೀಕೃತ ನಾಡದೋಣಿಗಳಿಗೆ ಪೆಟ್ರೋಲ್ ಇಂಜಿನ್ ಅಳವಡಿಸಲು ಗುರಿ ನೀಡಲಾಗಿದ್ದು, ಇದರಲ್ಲಿ ಉಡುಪಿ, ಬ್ರಹ್ಮಾವರ ಹಾಗೂ ಕಾಪು ತಾಲೂಕಿಗೆ ಒಟ್ಟು 900 ಮತ್ತು ಕುಂದಾಪುರ ಹಾಗೂ ಬೈಂದೂರು ತಾಲೂಕಿಗೆ ಒಟ್ಟು 1100 ಗುರಿಗಳನ್ನು ಮರುಹಂಚಿಕೆ […]
ಚಿಟ್ಪಾಡಿ ಹೊಸಮಠ ಶ್ರೀ ಪ್ರಸನ್ನ ಸೋಮೇಶ್ವರ ದೇವಸ್ಥಾನದ ಶಿಲಾಮಯ ಗರ್ಭಗುಡಿಯ ಶಿಲಾನ್ಯಾಸ
ಉಡುಪಿ: ಚಿಟ್ಪಾಡಿ ಹೊಸಮಠ ಶ್ರೀ ಪ್ರಸನ್ನ ಸೋಮೇಶ್ವರ ದೇವಸ್ಥಾನ ಟ್ರಸ್ಟ ವತಿಯಿಂದ ಶ್ರೀ ಪ್ರಸನ್ನ ಸೋಮೇಶ್ವರ ದೇವಸ್ಥಾನ, ಶ್ರೀದೇವಿ ಭೂದೇವಿ ಸಹಿತ ಶ್ರೀನಿವಾಸ ದೇವರು, ಪಂಜುರ್ಲಿ ಮತ್ತು ಪರಿವಾರ ದೈವಸ್ಥಾನ ಜೀರ್ಣೋದ್ದಾರದ ಅಂಗವಾಗಿ ಶಿಲಾನ್ಯಾಸ ಕಾರ್ಯಕ್ರಮವು ಜ. 17 ರಂದು ನಡೆಯಿತು. ಸಮಿತಿಯ ಗೌರವಾಧ್ಯಕ್ಷ ವಾಸುದೇವ ಆಚಾರ್ಯ ಮತ್ತು ರಾಧಿಕಾ ಮನೋಹರ ರಾವ್ ಉಪಸ್ಥಿಯಲ್ಲಿ ಹಯವದನ ತಂತ್ರಿಯವರ ನೇತೃತ್ವದಲ್ಲಿ ಶಿಲಾಮಯ ಗರ್ಭಗುಡಿಯ ಶಿಲಾನ್ಯಾಸದ ಧಾರ್ಮಿಕ ಪೂಜಾ ವಿಧಿ ವಿಧಾನಗಳು ಜರಗಿತು. ಶಿಲಾನ್ಯಾಸ ಸಮಾರಂಭದ ಮುಖ್ಯ ಅತಿಥಿಗಳಾಗಿ ವಾಮನ […]
ವಜ್ರನಗರಿಯಲ್ಲಿ 9,999 ವಜ್ರಗಳಿಂದ ಮೂಡಿಬಂತು ಅಪೂರ್ವ ರಾಮಮಂದಿರ ಕಲಾಕೃತಿ!!
ಸೂರತ್: ವಜ್ರನಗರಿಯೆಂದೇ ಜಗದ್ವಿಖ್ಯಾತವಾಗಿರುವ ಗುಜರಾತಿನ ಸೂರತ್ ನಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆಗೆ ಮುಂಚಿತವಾಗಿ 9,999 ವಜ್ರಗಳಿಂದ ರಾಮಮಂದಿರದ ಚಿತ್ರವನ್ನು ಕುಶಲಕರ್ಮಿಯೊಬ್ಬರು ತಯಾರಿಸಿದ್ದಾರೆ. 9,999 ವಜ್ರಗಳಿಂದ ಕೂಡಿದ ಸುಂದರವಾದ ಸೂರತ್ ಕಸೂತಿಯ ಗೋಡೆಯ ಚೌಕಟ್ಟನ್ನು ಸಿದ್ಧಪಡಿಸಲಾಗಿದೆ. ಈ ಗೋಡೆಯ ಚೌಕಟ್ಟಿನಲ್ಲಿ ಶ್ರೀ ರಾಮನನ್ನು ಚಿತ್ರಿಸಲಾಗಿದೆ ಮತ್ತು ಜೈ ಶ್ರೀ ರಾಮ್ ಎಂದು ಬರೆಯಲಾಗಿದೆ.