ಉಡುಪಿ: ಬಸ್ ಚಾಲಕರಿಗೆ ಚೂರಿಯಿಂದ ಇರಿತ

ಉಡುಪಿ: ಬಸ್ ಚಾಲಕರಿಬ್ಬರಿಗೆ ರಿಕ್ಷಾದಲ್ಲಿ ಬಂದ ತಂಡವೊಂದು ಚೂರಿಯಲ್ಲಿ ಇರಿದ ಘಟನೆ ಗುರುವಾರ ರಾತ್ರಿ ಬನ್ನಂಜೆಯಲ್ಲಿ ನಡೆದಿದೆ. ಜೆಎಮ್‌ಟಿ ಬಸ್ ಚಾಲಕರಾದ ಸಂತೋಷ ಹಾಗೂ ಶಿಶರ್ ಕೆಲಸ ಮುಗಿಸಿ ಬನ್ನಂಜೆ ಕಡೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ರಿಕ್ಷಾದಲ್ಲಿ ಬಂದಿದ್ದ ಖಾಸಗಿ ಬಸ್ ಒಂದರ ಮ್ಯಾನೇಜರ್ ಹಾಗೂ ಚಾಲಕರಾದ ಬುರನ್ ಮತ್ತು ಸುದೀಪ್ ಅಡ್ಡಗಟ್ಟಿ ಚೂರಿಯಿಂದ ಇರಿದಿದ್ದಾರೆ ಎಂದು ತಿಳಿದು ಬಂದಿದೆ. ಪರ್ಯಾಯ ದಿನದಂದು ಉಡುಪಿ ಸಿಟಿ ಬಸ್ ಚಾಲಕರ ನಡುವೆ ಗಲಾಟೆ ನಡೆದಿತ್ತು. ಬಳಿಕ ನಗರ ಠಾಣೆಯಲ್ಲಿ […]
ಮಾಹೆ : ಐದು ಜನ ಸಾಧಕರಿಗೆ ಹೊಸ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ

ಮಣಿಪಾಲ : ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ಸಮೂಹ , ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್, ಮತ್ತು ಡಾ. ಟಿಎಂಎ ಪೈ ಫೌಂಡೇಶನ್ ಮಣಿಪಾಲವು ಸಮಾಜಕ್ಕೆ ಕಲೆ, ಸಂಸ್ಕೃತಿ,ವೈದ್ಯಕೀಯ ಮತ್ತು ಕೃಷಿ ಕ್ಕ್ಷೇತ್ರದಲ್ಲಿ ನೀಡಿದ ಅಪಾರ ಕೊಡುಗೆಗಳಿಗಾಗಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಗಣ್ಯ ವ್ಯಕ್ತಿಗಳಿಗೆ “ಹೊಸ ವರ್ಷದ ಪ್ರಶಸ್ತಿ 2024” ನೀಡಿ ಗೌರವಿಸಿತು. ಸಂಸ್ಕೃತಿ, ವೈದ್ಯಕೀಯ, ಕೃಷಿ, ಮತ್ತು ಸಾಹಿತ್ಯದಲ್ಲಿ ತಮ್ಮದೇ […]
ಧರ್ಮಸ್ಥಳದಲ್ಲಿ ಆತ್ಮಹತ್ಯೆಗೆ ಶರಣಾದ ಬೆಂಗಳೂರಿನ ವೃದ್ಧ; ಮೃತದೇಹ ಪಡೆಯಲು ಮಕ್ಕಳ ಹಿಂದೇಟು

ಬೆಳ್ತಂಗಡಿ: ಮಕ್ಕಳ ಜೊತೆಗಿನ ಮುನಿಸಿನಿಂದ ಮನೆ ಬಿಟ್ಟು ಬಂದಿದ್ದ 89 ವರ್ಷದ ವೃದ್ಧರೊಬ್ಬರು ಧರ್ಮಸ್ಥಳದ ಖಾಸಗಿ ವಸತಿಗೃಹದಲ್ಲಿ ಆತ್ಮಹತ್ಯೆಗೆ ಯತ್ನಿಸಿ ಬಳಿಕ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ತಂದೆ ಮೃತ ಪಟ್ಟ ವಿಚಾರವನ್ನು ಪೊಲೀಸರ ಮೂಲಕ ಮಕ್ಕಳಿಗೆ ತಿಳಿಸಿಲಾಗಿದೆ. ಆದರೆ ತಂದೆಯ ಮೃತದೇಹವನ್ನು ಪಡೆದುಕೊಳ್ಳಲು ಮಕ್ಕಳು ನಿರಾಕರಿಸಿದ್ದಾರೆ. ಮೂಲತಃ ಬೆಂಗಳೂರಿನ ಹೊಯ್ಸಳ ನಗರದ ಸುಂಕದ ಕಟ್ಟೆ ನಿವಾಸಿಯಾಗಿರುವ ಹೆಚ್.ವಿ.ಚಂದ್ರ ಶೇಖರ್ ಧರ್ಮಸ್ಥಳಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡವರು. ಐವರು ಮಕ್ಕಳನ್ನು ಹೊಂದಿರುವ ಇವರು ಮನೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ […]
ಫೆ.6 ರಂದು ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ; ರಾಜ್ಯಮಟ್ಟದ ಯಕ್ಷಗಾನ ಸ್ಪರ್ಧೆ

ಮೂಡಬಿದ್ರೆ: ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ 2023-24 ಕಾರ್ಯಕ್ರಮವು ಫೆ.6 ರಂದು ಆಳ್ವಾಸ್ ಕಾಲೇಜಿನಲ್ಲಿ ನಡೆಯಲಿದೆ. ಆ ಪ್ರಯುಕ್ತ ರಾಜ್ಯಮಟ್ಟದ ಯಕ್ಷಗಾನ ಸ್ಪರ್ಧೆಯನ್ನು ಆಯೋಜಿಸಲಾಗುವುದು. 6 ನೇ ತರಗತಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಪರ್ಧೆಗಳಲ್ಲಿ ರಾಜ್ಯದ ಯಾವುದೇ ಸರಕಾರಿ, ಅನುದಾನಿತ, ಖಾಸಗಿ ಶಾಲಾ ವಿದ್ಯಾರ್ಥಿಗಳಿಗೆ ಭಾಗವಹಿಸಲು ಮುಕ್ತ ಅವಕಾಶವಿದೆ. ಕಾಸರಗೋಡು ಸಹಿತ ಇತರ ಹೊರ ರಾಜ್ಯಗಳ ಶಾಲಾ ವಿದ್ಯಾರ್ಥಿಗಳಿಗೂ ಈ ಸ್ಪರ್ಧೆಯಲ್ಲಿ ಭಾಗವಹಿಸಲು […]
21008 ಬಾರಿ ‘ರಾಮ’ ನಾಮದಿಂದ ಮೂಡಿಬಂತು ಸೀತಾರಾಮ ಪಟ್ಟಾಭಿಷೇಕದ ಸುಂದರ ಭಾವಚಿತ್ರ!

ಉಡುಪಿ: ಅಯೋಧ್ಯೆಯಲ್ಲಿ ರಾಮಮಂದಿರದ ಅನಾವರಣ ಹಾಗೂ ಶ್ರೀರಾಮನ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ಅಪಾರ ಸಂತೋಷ ಮತ್ತು ಭಕ್ತಿಯಿಂದ ಸ್ವಾಗತಿಸಲು ಜನವರಿ 22 ಸಿದ್ಧವಾಗಿದೆ. ದೇವಾಲಯಗಳ ಊರೆಂದೇ ಪ್ರಸಿದ್ಧಿಯಾಗಿರುವ ಉಡುಪಿ ಭಕ್ತಿ, ಕಲೆ ಹಾಗೂ ಸಂಸ್ಕೃತಿಯ ನೆಲೆಬೀಡಾಗಿದೆ. ಉಡುಪಿಯ ಪೂರ್ಣಪ್ರಜ್ಞಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿರುವ ಶಶಾಂಕ್ ಪೈ ಅವರು ಭಗವಾನ್ ಶ್ರೀ ರಾಮಚಂದ್ರನ ಪಟ್ಟಾಭಿಷೇಕವನ್ನು ಸ್ಪಷ್ಟವಾಗಿ ವರ್ಣಿಸಿರುವ ಭಾವಚಿತ್ರವನ್ನು “ರಾಮ” ಎಂಬ ಪವಿತ್ರ ಪದವನ್ನು 21,008 ಬಾರಿ ಬರೆಯುವ ಮೂಲಕ ಈ ಕಲಾಕೃತಿಯನ್ನು ರಚಿಸಿರುತ್ತಾರೆ. […]