ಸಪ್ತಸಾಗರದಾಚೆ ಪುತ್ತಿಗೆ ಶ್ರೀಗಳ ದೈವಿಕ ಸಚಿತ್ರ ದಿನಚರಿ ಛಾಯಾಚಿತ್ರ ಪ್ರದರ್ಶನ ಉದ್ಘಾಟನೆ

ಉಡುಪಿ: ಪರ್ಯಾಯ ಶ್ರೀಪುತ್ತಿಗೆ ಮಠ ಮತ್ತು ಕೊಡವೂರಿನ ಉಡುಪರತ್ನ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಪಾದರ ಚತುರ್ಥ ವಿಶ್ವಗೀತಾ ಪರ್ಯಾಯದ ಅಂಗವಾಗಿ “ಸಪ್ತಸಾಗರದಾಚೆ ಪುತ್ತಿಗೆ ಶ್ರೀಗಳ ದೈವಿಕ ಸಚಿತ್ರ ದಿನಚರಿ “ಛಾಯಾಚಿತ್ರ ಪ್ರದರ್ಶನವನ್ನು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜ. 18 ರಂದು ಉದ್ಘಾಟನೆಗೊಂಡಿತು.

ಜಪಾನಿನ ರಿಸ್ಸೋ ಕೊಸೈ ಕೋಯ್ ಸಂಸ್ಥೆಯ ನಿಯೋಜಿತ ಅಧ್ಯಕ್ಷೆ ರೆ. ಕೋಶೊ ನಿವಾನೋ ಪ್ರದರ್ಶನವನ್ನು ಉದ್ಘಾಟಿಸಿದರು.

ಆಸ್ಟ್ರೇಲಿಯಾ, ವಿಕ್ಟೋರಿಯಾದ ಮಾಜಿ ಸಚಿವ, ಲ್ಯೂಕ್ ಡನೆಲನ್ , ಮಣಿಪಾಲ ಮೀಡಿಯ ನೆಟ್ ವರ್ಕ್ ಕಾರ್ಯನಿರ್ವಾಹಕ ನಿರ್ದೇಶಕ ಅಧ್ಯಕ್ಷ ಸತೀಶ್ ಯು ಪೈ, ತರಂಗ ವಾರ ಪತ್ರಿಕೆಯ ಸಂಪಾದಕ ಸಂಧ್ಯಾ ಎಸ್ ಪೈ, ಮಾಜಿ ಸಚಿವ ಬಸನ ಗೌಡ ಯತ್ನಾಳ್, ಗಾಲಿ ಜನಾರ್ದನ್ ರೆಡ್ಡಿ, ಮಾಜಿ ಶಾಸಕ ರಘುಪತಿ ಭಟ್, ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ರಂಜನ್ ಕಲ್ಕೂರ ಕೊಡವೂರಿನ ಉಡುಪ ರತ್ನ ಪ್ರತಿಷ್ಠಾನದ ವಿಶ್ವಸ್ಥ ಜನಾರ್ದನ ಕೊಡವೂರ್ ಮತ್ತಿತರು ಉಪಸ್ಥಿತರಿದ್ದರು.

ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಕಿರಿಯಪಟ್ಟದ ಯತಿಗಳಾದ ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರು ಆಶೀರ್ವದಿಸಿದರು.

ಉದಯವಾಣಿ ಪತ್ರಿಕೆಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಅವರು ತಮ್ಮ ಅಮೆರಿಕ ಪ್ರವಾಸದಲ್ಲಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಕುರಿತು ನಿರ್ಮಿಸಿದ ಛಾಯಾ ಚಿತ್ರಗಳನ್ನು ಇಲ್ಲಿ ಪ್ರಸ್ತುತ ಪಡಸಲಾಗಿದೆ. ಫಿನಿಕ್ಸ್ ವೆಂಕಟ ಕೃಷ್ಣ ದೇವಸ್ಥಾನದಲ್ಲಿ ಯತಿಗಳ ನಿತ್ಯ ಪೂಜೆಯನ್ನು ಇಲ್ಲಿ ಛಾಯಾಚಿತ್ರಗಳ ಮೂಲಕ ಸೆರೆ ಹಿಡಿಯಲಾಗಿದ್ದು ಒಟ್ಟು 36 ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ.

ಸಾರ್ವಜನಿಕರು ಜ. 24ರ ವರೆಗೆ ಪ್ರದರ್ಶನವನ್ನು ವೀಕ್ಷಿಸ ಬಹುದಾಗಿದೆ. ಗೋಪಾಲ ಆಚಾರ್ಯ ನಿರೂಪಿಸಿ, ಮೋಹನ ಉಡುಪ ವಂದಿಸಿದರು. ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ನಿರ್ವಹಿಸಿದರು.