ಸರಸ್ವತಿಯ ಉಗಮ ಸ್ಥಾನದಿಂದ ಅಯೋಧ್ಯೆಗೆ ತೀರ್ಥ ಕಳುಹಿಸಿದ ಗೌಡಪಾದಾಚಾರ್ಯ ಮಠ: ಪಿ.ರಾಮಚಂದ್ರ ಕಾಮತ್ ಅವರಿಂದ ಹಸ್ತಾಂತರ
ಶ್ರೀಮದ್ ಗೌಡಪಾದಾಚಾರ್ಯ ಮಠವು ತನ್ನ ಪರಂಪರೆಯಲ್ಲಿ 77 ನೇ ಸ್ವಾಮೀಜಿಯನ್ನು ಹೊಂದಿರುವ ಭಾರತದ ಅತ್ಯಂತ ಹಳೆಯ ಮಠ ಪರಂಪರೆಯಾಗಿದೆ. ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜರು ದೈವಿಕ ಸಂಪ್ರದಾಯಗಳನ್ನು ಗೌರವಿಸಿ ಹಿಮಾಲಯದಲ್ಲಿರುವ ಗರ್ವಾಲ್ ಉತ್ತರಾಖಂಡದಿಂದ ಸರಸ್ವತಿ ನದಿಯ ಮೂಲದಿಂದ ಪಡೆದ ಮಂಗಳಕರವಾದ ಸರಸ್ವತಿ ನದಿಯ ಶುಭ ಉಗಮ ತೀರ್ಥವನ್ನು ಕಳುಹಿಸಿ ಕೃಪೆ ತೋರಿದ್ದಾರೆ. ಈ ಅಪರೂಪದ ಮತ್ತು ಪವಿತ್ರ ತೀರ್ಥವನ್ನು ಶ್ರೀ ಸರಸ್ವತಿ ಹೆರಿಟೇಜ್ ಪ್ರತಿಷ್ಠಾನದ ಜಗದೀಶ್ ಗಾಂಧಿಯವರ ಮೂಲಕ ಭಕ್ತಿಯಿಂದ ಸಂಗ್ರಹಿಸಲಾಗಿದೆ. ಪೂಜೆಯ ನಂತರ ಸ್ವಾಮೀಜಿಯವರು […]
ಜ. 22 ರಂದು ರಾಜ್ಯದಲ್ಲಿ ಶಾಲೆಗಳಿಗೆ ರಜೆ ಇಲ್ಲ: ಶಿಕ್ಷಣ ಇಲಾಖೆ ಸ್ಪಷ್ಟನೆ
ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಜನವರಿ 22 ರಂದು ಶಾಲೆಗಳಿಗೆ ರಜೆ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. “ನಾವು ಜನವರಿ 22 ರಂದು ಶಾಲೆಗಳಿಗೆ ರಜೆ ಘೋಷಿಸುತ್ತಿಲ್ಲ. ಅದು ಕೆಲಸದ ದಿನವಾಗಿರುತ್ತದೆ. (ಬೆಂಗಳೂರು) ನಗರ ಅಥವಾ ರಾಜ್ಯದಲ್ಲಿ ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಉಂಟಾದರೆ, ಆಯಾ ಜಿಲ್ಲಾಧಿಕಾರಿಗಳು ರಜೆ ಘೋಷಿಸಲು ಕರೆ ನೀಡುತ್ತಾರೆ” ಎಂದು ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಗುರುವಾರ ತಿಳಿಸಿರುವುದಾಗಿ ದ ಇಂಡಿಯನ್ ಎಕ್ಸ್ಪ್ರೆಸ್ ವರದಿ ಹೇಳಿದೆ. ಅಸೋಸಿಯೇಟೆಡ್ ಮ್ಯಾನೇಜ್ಮೆಂಟ್ ಆಫ್ ಸ್ಕೂಲ್ಸ್ […]
ಜ. 22 ರಂದು ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಅರ್ಧ ದಿನದ ರಜೆ ಘೋಷಣೆ
ನವದೆಹಲಿ: ದೇಶವೇ ಕಾಯುತ್ತಿರುವ ಅಮೃತ ಘಳಿಗೆ ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣಪ್ರತಿಷ್ಠೆ. ಅಂದು ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಆಚರಣೆಯಲ್ಲಿ ಭಾಗವಹಿಸಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಭಾರತ ಸರ್ಕಾರವು ಜನವರಿ 22 ರಂದು ಮಧ್ಯಾಹ್ನ 2.30 ರವರೆಗೆ ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳು, ಕೇಂದ್ರ ಸಂಸ್ಥೆಗಳು ಮತ್ತು ಕೇಂದ್ರೀಯ ಕೈಗಾರಿಕಾ ಸಂಸ್ಥೆಗಳಲ್ಲಿ ಅರ್ಧ ದಿನದ ರಜೆ ಘೋಷಿಸಿದೆ. ಈ ಬಗ್ಗೆ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯವು ಸುತ್ತೋಲೆ ಹೊರಡಿಸಿದೆ.
ರಾಮಮಂದಿರದ ಗರ್ಭಗೃಹ ಪ್ರವೇಶಿಸಿದ ‘ಬಾಲರಾಮ’ನ ವಿಗ್ರಹ: ಪ್ರಾಣಪ್ರತಿಷ್ಠೆಗೆ ಕ್ಷಣಗಣನೆ
ಅಯೋಧ್ಯೆ: ಗುರುವಾರ ಮುಂಜಾನೆ ಅಯೋಧ್ಯೆಯ ರಾಮಮಂದಿರಕ್ಕೆ ರಾಮಲಲ್ಲಾನ ವಿಗ್ರಹವನ್ನು ತರಲಾಯಿತು. ಗರ್ಭಗುಡಿಯೊಳಗೆ ವಿಶೇಷ ಪೂಜೆಯನ್ನು ನಡೆಸಲಾಯಿತು. ‘ಜೈ ಶ್ರೀ ರಾಮ್’ ಘೋಷಣೆಗಳೊಂದಿಗೆ ಕ್ರೇನ್ ಮೂಲಕ ವಿಗ್ರಹವನ್ನು ಒಳತರಲಾಯಿತು. ಮೂಲಗಳ ಪ್ರಕಾರ ರಾಮಲಲ್ಲಾ ಮೂರ್ತಿಯನ್ನು ಗರ್ಭಗೃಹದೊಳಗೆ ಇರಿಸಲಾಗಿದೆ. ಜ.22 ರಂದು ಪ್ರಾಣಪ್ರತಿಷ್ಠೆ ನಡೆಯಲಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ಕೃಷ್ಣಶಿಲೆಯ ಬಾಲರಾಮನ ವಿಗ್ರಹ ಆಯ್ಕೆಯಾಗಿದೆ. ರಾಮಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠೆಗೂ ಮುನ್ನ ಹಲವು ವಿಧಿ ವಿಧಾನಗಳನ್ನು ಕೈಗೊಳ್ಳಲಾಗುತ್ತಿದೆ.
ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳ ಅಂತಿಮ ವೇಳಾಪಟ್ಟಿ ಪ್ರಕಟ
ಬೆಂಗಳೂರು: SSLC ಮತ್ತು ದ್ವಿತೀಯ PUC ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಮಾರ್ಚ್ 25 ರಿಂದ ಏಪ್ರಿಲ್ 6 ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆಗಳು ಮತ್ತು ಮಾರ್ಚ್ 1 ರಿಂದ ಮಾರ್ಚ್ 22 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿವೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದೆ.