ಪರ್ಯಾಯ ಮಹೋತ್ಸವಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ; ಝಗಮಗಿಸುತ್ತಿದೆ ಕೃಷ್ಣನೂರು ಉಡುಪಿ…..

ಉಡುಪಿ: 252ನೆಯ ಪರ್ಯಾಯದ ಮಹೋತ್ಸವದಲ್ಲಿ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ನಾಲ್ಕನೇ ಬಾರಿಗೆ ಪರ್ಯಾಯಕ್ಕೆ ಅಣಿಯಾಗುತ್ತಿದ್ದಾರೆ. ಜ. 18 ರ ಬೆಳಗ್ಗೆ ಪರ್ಯಾಯ ಮೆರವಣಿಗೆ ಹಾಗೂ ದರ್ಬಾರ್‌ ನಡೆಯಲಿದ್ದು, ಬುಧವಾರ ಬೆಳಗ್ಗೆ ಭಕ್ತರು ನಗರಕ್ಕೆ ಆಗಮಿಸುತ್ತಿದ್ದು, ಹಬ್ಬದ ಸಂಭ್ರಮ ಕಳೆಗಟ್ಟಿದೆ. ನಗರದ ಎಲ್ಲಾ ರಸ್ತೆಗಳೂ ಶ್ರೀಕೃಷ್ಣನ ಮಠದತ್ತ ಮುಖಮಾಡಿದ್ದು, ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಿಕೊಂಡಿದೆ. ಕಾಪು ದಂಡತೀರ್ಥದಿಂದ ಉಡುಪಿವರೆಗಿನ ರಾಷ್ಟ್ರೀಯ ಹೆದ್ದಾರಿ, ಉಡುಪಿ ನಗರದೊಳಗಿನ ಎಲ್ಲ ರಸ್ತೆಗಳೂ ಝಗಮಗಿಸುತ್ತಿದ್ದು ಭಕ್ತರನ್ನು ಕೈಬೀಸಿ ಕರೆಯುತ್ತಿದೆ. ಮಧ್ಯರಾತ್ರಿ 1.30ಕ್ಕೆ ದಂಡತೀರ್ಥ ಮಠದಲ್ಲಿ […]

ಉಡುಪಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ; ರಿಕ್ಷಾ ಚಾಲಕನಿಗೆ 20 ವರ್ಷ ಜೈಲು ಶಿಕ್ಷೆ

ಉಡುಪಿ: ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಎಸಗಿ ಗರ್ಭಿಣಿಯನ್ನಾಗಿಸಿದ ಪ್ರಕರಣದ ಆರೋಪಿಗೆ ಉಡುಪಿ ಹೆಚ್ಚುವರಿ ಜಿಲ್ಲಾ ಪೋಕ್ಸೊ ವಿಶೇಷ ನ್ಯಾಯಾಲಯವು 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ನೀಡಿದೆ. ಬ್ರಹ್ಮಾವರ ತಾಲೂಕಿನ ರಿಕ್ಷಾ ಚಾಲಕ ಕೇಶವ ನಾಯ್ಕ್(27) ಶಿಕ್ಷೆಗೆ ಗುರಿಯಾಗಿರುವ ಆರೋಪಿ. 13 ವರ್ಷದ ನೊಂದ ಬಾಲಕಿಯು ಶಾಲೆಗೆ ಆರೋಪಿಯ ರಿಕ್ಷಾದಲ್ಲಿ ಹೋಗಿ ಬರುತ್ತಿದ್ದು, ಇದರಿಂದ ಆತ ಬಾಲಕಿಯ ಮನೆಯವರೆಗೂ ಪರಿಚಯಸ್ಥನಾಗಿದ್ದನು. ನೊಂದ ಬಾಲಕಿಯನ್ನು ಪ್ರೀತಿಸುವುದಾಗಿ ತಿಳಿಸಿದ ಆತ, 2023ರ ಫೆ.17 ರಂದು ಆಕೆಯನ್ನು ಪುಸಲಾಯಿಸಿ […]

ಇರಾನ್ ಕ್ಷಿಪಣಿ ದಾಳಿಗೆ ಪಾಕಿಸ್ತಾನದ ಎರಡು ಪ್ರಮುಖ ಉಗ್ರನೆಲೆಗಳು ಧ್ವಂಸ: ಇರಾನ್ ವಿರುದ್ದ ಹರಿಹಾಯ್ದ ಪಾಕಿಸ್ತಾನ

ಟೆಹರಾನ್: ಇರಾಕ್ ಮತ್ತು ಸಿರಿಯಾವನ್ನು ಗುರಿಯಾಗಿಸಲು ಗಣ್ಯ ಕ್ರಾಂತಿಕಾರಿ ಗಾರ್ಡ್‌ಗಳು ದಾಳಿ ನಡೆಸಿದ ಒಂದು ದಿನದ ಬಳಿಕ ಇರಾನ್ ಬುಧವಾರ ಡ್ರೋನ್ ಮತ್ತು ಕ್ಷಿಪಣಿಗಳ ಮೂಲಕ ಪಾಕಿಸ್ತಾನದ ಜೈಶ್ ಅಲ್-ಅದ್ಲ್ ಭಯೋತ್ಪಾದಕ ಗುಂಪಿಗೆ ಸೇರಿದ ಎರಡು ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಬಲವಾದ ಪದಗಳ ಖಂಡನೆಯಲ್ಲಿ, “ತನ್ನ ವಾಯುಪ್ರದೇಶದ ಅಪ್ರಚೋದಿತ ಉಲ್ಲಂಘನೆ” ಯನ್ನು ಪಾಕಿಸ್ತಾನವು ಖಂಡಿಸಿದೆ ಮತ್ತು “ಪರಿಣಾಮಗಳ” ಬಗ್ಗೆ ಇರಾನ್ ಅನ್ನು ಎಚ್ಚರಿಸಿದೆ. ಇರಾನ್ ದಾಳಿಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ […]

ವ್ಯಕ್ತಿಗಳ ಪಾಸ್‌ಪೋರ್ಟ್ ಅಥವಾ ಓಸಿಐ ಕಾರ್ಡ್ ಗಳನ್ನು ಬ್ಯಾಂಕ್ ಗಳು ಇಟ್ಟುಕೊಳ್ಳುವುದು ಕಾನೂನುಬಾಹಿರ: ಕರ್ನಾಟಕ ಹೈಕೋರ್ಟ್

ಬೆಂಗಳೂರು: ವ್ಯಕ್ತಿಗಳ ಪಾಸ್‌ಪೋರ್ಟ್ ಅಥವಾ ಓಸಿಐ ಕಾರ್ಡ್ಗಳನ್ನು ಬ್ಯಾಂಕ್‌ ಗಳು ತಮ್ಮ ಬಳಿ ಇಟ್ಟುಕೊಳ್ಳುವುದು ಕಾನೂನುಬಾಹಿರ ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ಹೇಳಿದೆ. ಬ್ಯಾಂಕ್‌ನಿಂದ ಯಾವುದೇ ವ್ಯಕ್ತಿಯ ಪಾಸ್‌ಪೋರ್ಟ್ ಮತ್ತು ಒಸಿಐ ಕಾರ್ಡ್ ಅನ್ನು ಉಳಿಸಿಕೊಳ್ಳುವುದು ಕಾನೂನುಬಾಹಿರ ಎಂದು ತಿಳಿಸಿದ ಕರ್ನಾಟಕ ಹೈಕೋರ್ಟ್, ವಿಡಿಬಿ ಪ್ರಾಪರ್ಟಿ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಲ್ಲಿ ಒಬ್ಬರಾದ ಅರ್ಜಿದಾರ ಕೋಶಿ ವರ್ಗೀಸ್‌ ಅವರ ಪಾಸ್‌ಪೋರ್ಟ್ ಮತ್ತು ಓವರ್‌ಸೀಸ್ ಸಿಟಿಜನ್ ಆಫ್ ಇಂಡಿಯಾ (ಓಸಿಐ) ಕಾರ್ಡ್ ಅನ್ನು ಅವರಿಗೆ ವಾಪಸ್ ಮರಳಿಸುವಂತೆ ಬ್ಯಾಂಕಿಗೆ […]

ಜ್ಞಾನವಾಪಿ ಪ್ರಕರಣ: ‘ಶಿವಲಿಂಗ’ದಾಕೃತಿ ಸ್ಥಳದ ಸ್ವಚ್ಛತೆಗೆ ‘ಸುಪ್ರೀಂ’ ಆದೇಶ

ನವದೆಹಲಿ: ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಸೀದಿ ಅವರಣದಲ್ಲಿರುವ ಶಿವಲಿಂಗದಾಕೃತಿ ಸ್ಥಳದ ಸಂಪೂರ್ಣ ಸ್ವಚ್ಛತೆಗೆ ‘ಸುಪ್ರೀಂ ಕೋರ್ಟ್’ ಮಂಗಳವಾರ ಆದೇಶ ನೀಡಿದೆ. ವಾರಣಾಸಿಯ ಜ್ಞಾನವಾಪಿ ‘ವಜುಖಾನಾ’ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಮಸೀದಿ ಸಂಕೀರ್ಣದ ವಜುಖಾನಾದ ಸಂಪೂರ್ಣ ಪ್ರದೇಶವನ್ನು ಸ್ವಚ್ಛಗೊಳಿಸಲು ಸುಪ್ರೀಂ ಕೋರ್ಟ್ ಆದೇಶ ಹೇಳಿದೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ಜೆ.ಬಿ. ಪರ್ದೀವಾಲಾ ಹಾಗೂ ನ್ಯಾ. ಮನೋಜ್ ಮಿಶ್ರಾ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿದೆ. ವಾರಣಾಸಿ […]