ಪುತ್ತಿಗೆ ಪರ್ಯಾಯ: ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿದ ಪುತ್ತಿಗೆ ಯತಿದ್ವಯರು

ಉಚ್ಚಿಲ: ಪುತ್ತಿಗೆ ಪರ್ಯಾಯ (Puttige Paryaya) ಪೂರ್ವಾಭಾವಿ ಪ್ರಾಂತ ಸಂಚಾರ ನಿಮಿತ್ತ ಇಲ್ಲಿನ ಐತಿಹಾಸಿಕ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಪುತ್ತಿಗೆ ಶ್ರೀ ಹಾಗೂ ಅವರ ಶಿಷ್ಯ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದರು. ಬಳಿಕ ಯತಿದ್ವಯರು ರಾತ್ರಿ ಪೂಜೆ, ತೊಟ್ಟಿಲ ಸೇವೆ, ಅನುಗ್ರಹ ಸಂದೇಶ ನೀಡಿದರು. ವಿಶ್ವ ಗೀತಾ ಪರ್ಯಾಯಕ್ಕೆ ಆಹ್ವಾನ ನೀಡಿ ಫಲ ಮಂತ್ರಾಕ್ಷತೆ ನೀಡಿದರು.

ಹೆಬ್ರಿ: ವರಂಗ ಗ್ರಾಮದ ಮಹಿಳೆಯೋರ್ವರು ನೇಣು ಬಿಗಿದು ಆತ್ಮಹತ್ಯೆ..!

ಹೆಬ್ರಿ: ಹೆಬ್ರಿ ತಾಲೂಕಿನ ವರಂಗ ಗ್ರಾಮದಲ್ಲಿ ಮಹಿಳೆಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪುಟ್ಟು (63) ಎಂಬವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಕಳೆದ ಒಂದು ತಿಂಗಳಿನಿಂದ ಜ. 14ರ ಸಂಜೆ 5 ಗಂಟೆಯ ಮಧ್ಯಾವಧಿಯಲ್ಲಿ ವರಂಗ ಗ್ರಾಮದ ಮುನಿಯಾಲು ನೀರಪಲ್ಕೆಯಲ್ಲಿರುವ ಅವರ ಮನೆಯ ಹತ್ತಿರದ ಸರಕಾರಿ ಹಾಡಿಯಲ್ಲಿ ಮರದ ಕೊಂಬೆಗೆ ಸೀರೆಯನ್ನು ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶವ ಜ. 14ರಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಕುರಿತು ಹೆಬ್ರಿ […]

ಹಿರಿಕಿರಿಯರೆನ್ನದೆ ಎಲ್ಲರ ಮನಸೂರೆಗೊಳ್ಳುತ್ತಿದೆ “ಅಂತರ್ಜಲ ಮೀನು ಸುರಂಗ” ಪ್ರದರ್ಶನ: ಇದೇ ಮೊದಲ ಬಾರಿಗೆ “ಉಡುಪಿ ಉತ್ಸವ”ದಲ್ಲಿ ಮೀನುಗಳ ಲೋಕ ಅನಾವರಣ!!

ಉಡುಪಿ: ನ್ಯಾಶನಲ್ ಕನ್ಸ್ಯೂಮರ್ ಫೇರ್ (ಎನ್ ಸಿಎಫ್) ಉಡುಪಿ ವತಿಯಿಂದ ಕರಾವಳಿ ಬೈಪಾಸ್ ಬಳಿಯ ರಾ.ಹೆ. 66ರ ಸನಿಹದ ಶಾರದಾ ಇಂಟರ್ ನ್ಯಾಶನಲ್ ಹೋಟೆಲ್ ಸಮೀಪದ 10 ಎಕರೆ ಜಾಗದಲ್ಲಿ ಆರಂಭಗೊಂಡ ಬೃಹತ್ ವಸ್ತು ಪ್ರದರ್ಶನ, ಮನೋರಂಜನೆ ಮತ್ತು ಸಾಂಸ್ಕೃತಿಕ ಮೇಳವನ್ನು ಒಳಗೊಂಡ “ಉಡುಪಿ ಉತ್ಸವ”ದಲ್ಲಿ ನೀರೊಳಗಿನ “ಮೀನು ಸುರಂಗ ಪ್ರದರ್ಶನ” ಜನಾಕರ್ಷಣೆಯ ಕೇಂದ್ರವಾಗಿದ್ದು, ನಿತ್ಯವೂ ಸಾವಿರಾರು ಜನರನ್ನು ಆಕರ್ಷಿಸುತ್ತಿದೆ. ಇಲ್ಲಿ ಎಲ್ಲರಿಗೂ ಆಟವಾಡಲು ಇಟಾಲಿಯನ್ ಟೊರಾಟೊರಾ, ಡ್ರ್ಯಾಗನ್ ಕಾರ್, ತ್ರಿಡಿ ಸಿನಿಮಾ, ಜಾಯಿಂಟ್ ವ್ಹೀಲ್, ಡ್ರ್ಯಾಗನ್ […]

Kidzee ಮಣಿಪಾಲ್ ನಲ್ಲಿ ಉದ್ಯೋಗಾವಕಾಶ

ಮಣಿಪಾಲ: ಅನಂತನಗರದಲ್ಲಿರುವ Kidzee ಮಣಿಪಾಲ್ ನಲ್ಲಿ ಕೋರ್ಡಿನೇಟರ್ ಹಾಗೂ ಟೀಚರ್ ಹುದ್ದೆಗಳು ಖಾಲಿ ಇದ್ದು, ಅಭ್ಯರ್ಥಿಯು ಇಂಗ್ಲೀಷ್ ಬಲ್ಲವರಾಗಿರಬೇಕು. ಆಸಕ್ತರು ಸಿವಿ ಮತ್ತು ರೆಸ್ಯೂಮ್ ಅನ್ನು kidzee4685@kidzee.com ಗೆ ಇ ಮೇಲ್ ಮಾಡಬಹುದು. ಸಂಪರ್ಕ: 9591982777

Angels Zumba Fitness ನ ಪ್ರಥಮ ವರ್ಷದ ವಾರ್ಷಿಕೋತ್ಸವ ಸಮಾರಂಭ

ಉಡುಪಿ: ಇಲ್ಲಿನ ರಾಜ್ ಟವರ್ಸ್ ನಲ್ಲಿರುವ Angels Zumba Fitness ನ ಪ್ರಥಮ ವರ್ಷದ ವಾರ್ಷಿಕೋತ್ಸವ ಜ.14 ರಂದು ಉಡುಪಿಯ ಪ್ರಸಿದ್ದ ಮಣಿಪಾಲ್ ಇನ್ ಹೋಟಲಿನಲ್ಲಿ ಜರಗಿತು. Angels Zumba Fitness ನ ಮಾಲಕಿ ಹಾಗೂ ಟ್ರೈನರ್ ಪೂರ್ಣಿಮಾ ಪೆರ್ಗಣ್ಣ ದಂಪತಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು, ಕುಟುಂಬಿಕರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮ ನಿರೂಪಣೆ ದಿವ್ಯ ಹಾಗೂ ಫಾರಿನ್ ವಂದಿಸಿದರು.