ಪ್ರಾಂತ ಸಂಚಾರ ನಿಮಿತ್ತ ಪುತ್ತಿಗೆ ಶ್ರೀಗಳಿಂದ ಅಂಬಲಪಾಡಿ ಜನಾರ್ದನ ಮತ್ತು ಮಹಾಕಾಳಿ ಸನ್ನಿಧಾನಕ್ಕೆ ಭೇಟಿ
ಉಡುಪಿ: ಪರ್ಯಾಯ(Puttige Paryaya) ಪೂರ್ವ ಉಡುಪಿ ಪ್ರಾಂತ ಸಂಚಾರದ ಎರಡನೇ ದಿನದಂದು ಉಡುಪಿಯ ಅಂಬಲಪಾಡಿಯ ಇತಿಹಾಸ ಪ್ರಸಿದ್ಧ ಶ್ರೀ ಜನಾರ್ದನ ಮತ್ತು ಶ್ರೀ ಮಹಾಕಾಳಿ ಸನ್ನಿಧಾನ ದೇವಸ್ಥಾನದಲ್ಲಿ ಭಾವಿ ಪರ್ಯಾಯ ಸ್ವಾಮೀಜಿ ಪೂಜ್ಯ ಶ್ರೀ ಪುತ್ತಿಗೆ ಶ್ರೀಗಳು ವಂದಿಸಿದರು. ದೇವಸ್ಥಾನದ ಅಧಿಕಾರಿಗಳು ಸ್ವಾಮಿಜಿಗಳಿಗೆ ಗೌರವಾರ್ಪಣೆ ಸಲ್ಲಿಸಿದರು.
ಸುಬ್ರಹ್ಮಣ್ಯ ಮಠಕ್ಕೆ ಭಾವಿ ಪರ್ಯಾಯ ಪುತ್ತಿಗೆ ಉಭಯ ಶ್ರೀಪಾದರು ಭೇಟಿ; ದೇವರ ದರ್ಶನ
ಉಡುಪಿ: ಲೋಕ ಸಂಚಾರ ಪೂರೈಸಿರುವ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಸುಶ್ರೀಂದ್ರತೀರ್ಥ ಶ್ರೀಪಾದರು ಸ್ಥಳೀಯ ಧಾರ್ಮಿಕ, ತೀರ್ಥಕ್ಷೇತ್ರಗಳ ಸಂಚಾರ ಆರಂಭಿಸಿದ್ದಾರೆ. ಇದರ ಅಂಗವಾಗಿ ಮಂಗಳವಾರ ಕುಕ್ಕೆ ಸುಬ್ರಹ್ಮಣ್ಯ ಮಠಕ್ಕೆ ಭೇಟಿ ನೀಡಿ ಉಭಯ ಶ್ರೀಪಾದರು ದೇವರ ದರ್ಶನ ಪಡೆದರು. ಭಾವಿ ಪರ್ಯಾಯ ಪೀಠಾಧೀಶರಾದ ಶ್ರೀ ಸುಗುಣೇoದ್ರತೀರ್ಥ ಶ್ರೀಪಾದರು ಹಾಗೂ ಶಿಷ್ಯರಾದ ಸುಶ್ರೀoದ್ರತೀರ್ಥ ಶ್ರೀಪಾದರನ್ನು ದೇಗುಲದ ವತಿಯಿಂದ ಸಾಂಪ್ರದಾಯಿಕ ಗೌರವಗಳೊಂದಿಗೆ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಆ ಬಳಿಕ ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಷೇತ್ರದ ವಿಷ್ಣುತೀರ್ಥ ಸಂಸ್ಥಾನ ಸುಬ್ರಮಣ್ಯ […]
ಸಂಗೀತ ನಿರ್ದೇಶಕ ಗುರುಕಿರಣ್ ಅತ್ತೆ ಮನೆಯಲ್ಲಿ 2.50 ಲಕ್ಷ ರೂ ನಾಪತ್ತೆ
ಬೆಂಗಳೂರು: ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಅತ್ತೆ ಮನೆಯಲ್ಲಿ ಕಳ್ಳತನವಾಗಿದೆ. ಕಳ್ಳತನವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಡಿಸೆಂಬರ್ 31ರಂದು ಮಧ್ಯಾಹ್ನ ಚಂದ್ರ ಲೇಔಟ್ನಲ್ಲಿರುವ ತಮ್ಮ ಮನೆಯ ಕೋಣೆಯ ಕಪಾಟಿನಲ್ಲಿ 2.50 ಲಕ್ಷ ರೂ.ಗಳನ್ನು ಗುರುಕಿರಣ್ ಅತ್ತೆ ಕಸ್ತೂರಿ ಶೆಟ್ಟಿ ಇಟ್ಟಿದ್ದರು. ಜ.5 ರಂದು ಹಣಕ್ಕಾಗಿ ಹುಡುಕಿದಾಗ ಹಣ ಅಲ್ಲಿರಲಿಲ್ಲ. ಎಷ್ಟು ಹುಡುಕಾಡಿದರೂ ಹಣ ಸಿಗದೇ ಇದ್ದಾಗ ಜನವರಿ 7 ರಂದು ಚಂದ್ರಲೇಔಟ್ ಪೊಲೀಸ್ ಠಾಣೆಗೆ ಗುರುಕಿರಣ್ ಅತ್ತೆ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸ್ […]
ಸಿಇಟಿ ಪರೀಕ್ಷಾ ವೇಳಾಪಟ್ಟಿ ಪ್ರಕಟ: ಏಪ್ರಿಲ್ 18 ಮತ್ತು 19ರಂದು ಪರೀಕ್ಷೆ
ಬೆಂಗಳೂರು: ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ದಿನಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಎರಡು ದಿನಗಳ ಮಟ್ಟಿಗೆ ಹಿಂದೂಡಿದ್ದು, ಏಪ್ರಿಲ್ 18 ಮತ್ತು 19ರಂದು ಪರೀಕ್ಷೆಗಳು ನಡೆಯಲಿವೆ. ಈ ಮೊದಲು ಏಪ್ರಿಲ್ 20 ಮತ್ತು 21ರಂದು ಪರೀಕ್ಷೆ ನಿಗದಿಯಾಗಿತ್ತು. ‘ಏಪ್ರಿಲ್ 21ರಂದು ಎನ್‌ಡಿಎ ಪರೀಕ್ಷೆ ನಡೆಯುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕನ್ನಡ ಪರೀಕ್ಷೆ ಏಪ್ರಿಲ್ 20ರಂದು ನಡೆಯಲಿದೆ’ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ತಿಳಿಸಿದ್ದಾರೆ. ವೃತ್ತಿಪರ ಕೋರ್ಸುಗಳಿಗೆ ಸೇರಲು ಬಯಸುವ ಅಭ್ಯರ್ಥಿಗಳು ಸಿಇಟಿ ಪರೀಕ್ಷೆಗೆ […]
ಥಾಣೆ ಘೋಡ್ ಬಂದರ್ ರೋಡ್ ಕನ್ನಡ ಅಸೋಸಿಯೇಷನ್ ನ ದಶಮಾನೋತ್ಸವ ಹಾಗೂ ಸಾಂಸ್ಕೃತಿಕ ವೈಭವ ಕಾರ್ಯಕ್ರಮ
ಥಾಣೆ: ಥಾಣೆ ಪರಿಸರದ ಅಲ್ಲಿರುವ ಕನ್ನಡ ಮನಸುಗಳನ್ನು ಒಗ್ಗೂಡಿಸಿ ಘೋಡ್ ಬಂದರ್ ಕನ್ನಡ ಅಸೋಸಿಯೇಷನ್ ಸ್ಥಾಪಿಸುವ ಮೂಲಕ ಕನ್ನಡ ಪರ ಸೇವೆಯು ಈ ಸಂಘದ ಮುಖೇನ ನಡೆದಿದೆ. ಜನ್ಮ ಭೂಮಿಯ ಭಾಷೆ ಸಂಸ್ಕೃತಿ ಸಂಸ್ಕಾರವನ್ನು ಕರ್ಮ ಭೂಮಿ ಮೇಲೆ ಸಾದರಪಡಿಸುವ ಮಹೋನ್ನತ ಕಾರ್ಯ ಈ ಸಂಘದ ವತಿಯಿಂದ ನಡೆದಿದೆ. 10 ವರ್ಷಗಳ ಹಿಂದೆ ಸ್ಥಾಪಕರು ಪಟ್ಟ ಶ್ರಮ ಶ್ರದ್ಧೆ ಸಂಘಟನೆಯು ಇಂದು ದೊಡ್ಡ ಮಟ್ಟಕ್ಕೆ ಬೆಳೆಯಲು ಕಾರಣವಾಗಿದೆ ಎಂದು ಸಂಘದ ಅಧ್ಯಕ್ಷ ಹರೀಶ್ ಡಿ. ಸಾಲ್ಯಾನ್ ಹೇಳಿದರು. […]