ಅಯೋಧ್ಯೆ ಶ್ರೀರಾಮಮಂದಿರದ ಕಣ್ಗಾವಲಿಗೆ ಪರ್ಕಳದ ಮನೋಹರ್ ಆವಿಷ್ಕರಣೆ ಮಾಡಿ ನಿರ್ಮಿಸಿದ ದೂರದರ್ಶಕ ಆಯ್ಕೆ..!

ಉಡುಪಿ: ಉತ್ತರ ಪ್ರದೇಶ ಸರಕಾರ ಅಯೋಧ್ಯೆಯ ಶ್ರೀರಾಮ ಮಂದಿರದ ಕಣ್ಗಾವಲಿಗೆ ಮಣಿಪಾಲದ ಎಂಐಟಿ ಉದ್ಯೋಗಿ, ಪರ್ಕಳದ ನಿವಾಸಿ ಆರ್. ಮನೋಹರ್ ಆವಿಷ್ಕರಣೆ ಮಾಡಿ ನಿರ್ಮಿಸಿದ ದೂರದರ್ಶಕ ಆಯ್ಕೆ ಮಾಡಿದೆ. ಸುಮಾರು 50 ದೂರದರ್ಶಕಗಳನ್ನು ಖರೀದಿಸುವ ಆರ್ಡರ್ ಈಗಾಗಲೇ ಇವರಿಗೆ ಆನ್‌ಲೈನ್ ಮೂಲಕ ಬಂದಿದೆ. ಸದ್ಯ 25 ದೂರದರ್ಶಕಗಳನ್ನು ತಯಾರಿಸಿ ನೀಡಲಾಗುವುದು ಎಂದು ಆರ್.ಮನೋಹರ್ ತಿಳಿಸಿದ್ದಾರೆ.ನೇರವಾಗಿ ಪ್ರತಿಬಿಂಬವನ್ನು ನೋಡುವಂತಹ ದೂರದರ್ಶಕವನ್ನು ಆವಿಷ್ಕರಣೆ ಮಾಡಿರುವುದರಿಂದ ಇವರಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪೇಟೆಂಟ್ ಕೂಡ ದೂರದರ್ಶಕಕ್ಕೆ ಸಿಕ್ಕಿದೆ. ದೂರದರ್ಶಕವನ್ನು ಇನ್ನಷ್ಟು ಸರಳ […]

ಜ್ಞಾನಸುಧಾದ ಇಬ್ಬರಿಗೆ ರಾಜ್ಯೋತ್ಸವ ಬಾಲ ಪ್ರಶಸ್ತಿ

ಉಡುಪಿ: ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ಮಂಗಳೂರಿನ ಇನ್ವೆಂಜರ್ ಫೌಂಡೇಶನ್, ಕಟಪಾಡಿಯ ಪ್ರಥಮ್ ಮ್ಯಾಜಿಕ್ ವಲ್ರ್ಡ್ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕಂತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಎಸ್.ವಿ.ಎಸ್ ಬಯಲು ರಂಗಮಂದಿರ ಕಟಪಾಡಿಯಲ್ಲಿ ನಡೆದ ಸಮಾರಂಭದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕು.ಸಮ್ಯಾ ಎಸ್. ಹೆಗ್ಡೆ ಹಾಗೂ ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಶಾಲೆಯ 8ನೇ ತರಗತಿಯ ಕು.ಅನ್ವಿ ಎಚ್. ಅಂಚನ್ ಇವರಿಗೆ 2023ನೇ ಸಾಲಿನ ಕರ್ನಾಟಕ […]

ಕೊರಗ ಸಮುದಾಯ ಹಾಡಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಉಡುಪಿ: ಕೊರಗ ಸಮುದಾಯದ ಹಾಡಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ವಿದ್ಯುತ್, ಆರೋಗ್ಯ ಸೇವೆ, ಸಂಪರ್ಕ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಒದಗಿಸಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಸೂಚನೆ ನೀಡಿದರು. ಅವರು ಮಂಗಳವಾರ ಮಣಿಪಾಲ ರಜತಾದ್ರಿಯ ತಮ್ಮ ಕಛೇರಿ ಸಭಾಂಗಣದಲ್ಲಿ ನಡೆದ ಪ್ರಧಾನ ಮಂತ್ರಿ-ಜನ್ ಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ ಯೋಜನೆ ಅನುಷ್ಠಾನ ಕುರಿತ ಅಂತರ್ ಇಲಾಖೆಯ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದರು. ಸರ್ಕಾರ ಆದಿವಾಸಿ ಹಾಗೂ ಬುಡಕಟ್ಟುಗಳ ಜನಾಂಗದವರ ಸಮಗ್ರ […]

ಲಕ್ಷದ್ವೀಪದಲ್ಲಿ ಸ್ನಾರ್ಕ್ಲಿಂಗ್ ಸಾಹಸ ನಡೆಸಿದ ಪ್ರಧಾನಿ ಮೋದಿ!!

ಲಕ್ಷದ್ವೀಪ: ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತದ ಚಿಕ್ಕ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದ ಭೇಟಿಯ ಸಂದರ್ಭದಲ್ಲಿ ಸ್ನಾರ್ಕ್ಲಿಂಗ್ ಅನ್ನು ಪ್ರಯತ್ನಿಸಿದ್ದಾರೆರು. ಹವಳಗಳು ಮತ್ತು ಮೀನಿನ ಚಿತ್ರಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ, ಸಾಹಸ ಪ್ರಿಯರಿಗೆ ಖಂಡಿತವಾಗಿಯೂ ತಮ್ಮ ಬಕೆಟ್ ಪಟ್ಟಿಗೆ ಸ್ಥಳವನ್ನು ಸೇರಿಸಲು ಸಲಹೆ ನೀಡಿದ್ದಾರೆ. “ತಮ್ಮಲ್ಲಿರುವ ಸಾಹಸಿಗಳನ್ನು ಅಪ್ಪಿಕೊಳ್ಳಲು ಬಯಸುವವರಿಗೆ, ಲಕ್ಷದ್ವೀಪವು ನಿಮ್ಮ ಪಟ್ಟಿಯಲ್ಲಿರಬೇಕು. ನನ್ನ ವಾಸ್ತವ್ಯದ ಸಮಯದಲ್ಲಿ, ನಾನು ಸ್ನಾರ್ಕ್ಲಿಂಗ್ ಅನ್ನು ಸಹ ಪ್ರಯತ್ನಿಸಿದೆ. ಇದು ಎಂತಹ ರೋಮಾಂಚನಕಾರಿ ಅನುಭವ” ಎಂದು ಅವರು ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ. […]

ಜನವರಿ 9 ರಂದು ಯುವಕರಿಗಾಗಿ ಜಿಲ್ಲಾ ಮಟ್ಟದ ಭಾಷಣ ಸ್ಫರ್ಧೆ

ಉಡುಪಿ, ಜನವರಿ 03 (ಕವಾ): ಜಿಲ್ಲೆಯ ಯುವಜನರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ನೆಹರು ಯುವ ಕೇಂದ್ರವು “ನನ್ನ ಭಾರತ- ವಿಕಸಿತ ಭಾರತ @ 2047” ಕುರಿತ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯು ಜನವರಿ 9 ರಂದು ಬೆಳಗ್ಗೆ 10 ಗಂಟೆಗೆ ನಗರದ ಎಂ.ಜಿ.ಎಂ ಕಾಲೇಜಿನಲ್ಲಿ ಆಯೋಜಿಸಲಾಗಿದ್ದು, ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದ ಅಭ್ಯರ್ಥಿಗಳು ರಾಜ್ಯ ಮಟ್ಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ. ಸ್ಪರ್ಧೆಯಲ್ಲಿ 15 ರಿಂದ 29 ವರ್ಷದೊಳಗಿನ ಜಿಲ್ಲೆಯ ನಿವಾಸಿಗಳು ಭಾಗವಹಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಸುಚಿತ್ ಕೋಟ್ಯಾನ್ ಮೊ.ನಂ: […]