ಜ್ಞಾನಸುಧಾದ ಇಬ್ಬರಿಗೆ ರಾಜ್ಯೋತ್ಸವ ಬಾಲ ಪ್ರಶಸ್ತಿ

ಉಡುಪಿ: ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ಮಂಗಳೂರಿನ ಇನ್ವೆಂಜರ್ ಫೌಂಡೇಶನ್, ಕಟಪಾಡಿಯ ಪ್ರಥಮ್ ಮ್ಯಾಜಿಕ್ ವಲ್ರ್ಡ್ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕಂತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಎಸ್.ವಿ.ಎಸ್ ಬಯಲು ರಂಗಮಂದಿರ ಕಟಪಾಡಿಯಲ್ಲಿ ನಡೆದ ಸಮಾರಂಭದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕು.ಸಮ್ಯಾ ಎಸ್. ಹೆಗ್ಡೆ ಹಾಗೂ ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಶಾಲೆಯ 8ನೇ ತರಗತಿಯ ಕು.ಅನ್ವಿ ಎಚ್. ಅಂಚನ್ ಇವರಿಗೆ 2023ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಬಾಲ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಕಾರ್ಕಳದ ಶ್ರೀ ಹರೀಶ್ ಮತ್ತು ಶ್ರೀಮತಿ ಶೋಭಾ ದಂಪತಿಗಳ ಸುಪುತ್ರಿಯಾಗಿರುವ ಕು.ಅನ್ವಿ ಎಚ್. ಅಂಚನ್ ಯೋಗಾಸನ, ಕರಾಟೆ, ನೃತ್ಯ, ಭಾಷಣ, ಒಲಿಂಪಿಯಾಡ್, ಸ್ಯಾಕ್ಸೋಫೋನ್, ಕೊಳಲುವಾದನ, ಚೆಸ್, ಅಬಾಕಸ್ ಮತ್ತು ವೇದಿಕ್ ಮ್ಯಾಥ್ಸ್ ನಲ್ಲಿನ ಬಹುಮುಖ ಪ್ರತಿಭೆಯನ್ನೂ ಗುರುತಿಸಿ ಹಾಗೂ ಹಿರಿಯಡ್ಕದ ಶ್ರೀ ಸಂದೀಪ ಹೆಗ್ಡೆ ಮತ್ತು ಶ್ರೀಮತಿ ಶೈಲಿನಿ ಹೆಗ್ಡೆ ದಂಪತಿಯ ಸುಪುತ್ರಿಯಾಗಿರುವ ಕು.ಸಮ್ಯಾ ಎಸ್. ಹೆಗ್ಡೆಯವರ ಭರತನಾಟ್ಯ, ಚಿತ್ರಕಲೆ, ಸಂಗೀತ ಕ್ಷೇತ್ರದಲ್ಲಿನ ಸಾಧನೆಗಾಗಿ 2023ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಬಾಲ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿ ಶುಭಹಾರೈಸಿದ್ದಾರೆ.