ತೆಲುಗು ಪ್ರಕಾಶನಕ್ಕೆ ದಂಡ : ಎಸ್.ಎಲ್.ಭೈರಪ್ಪನವರ ವಂಶವೃಕ್ಷ ಕೃತಿ ಅನಧಿಕೃತ ಅನುವಾದ

ಮೈಸೂರು: ಡಾ.ಎಸ್.ಎಲ್.ಭೈರಪ್ಪನವರ ವಂಶವೃಕ್ಷ ಕೃತಿಯನ್ನು ಅವರ ಅನುಮತಿಯಿಲ್ಲದೆ ಅನಧಿಕೃತವಾಗಿ ತೆಲುಗು ಭಾಷೆಗೆ ಅನುವಾದ ಮಾಡಿ ಪ್ರಕಟಿಸಿ ಕಾಪಿ ರೈಟ್ ಉಲ್ಲಂಘಿಸಿದ್ದ ಹೈದರಾಬಾದಿನ ಪ್ರಿಯದರ್ಶಿನಿ ಪ್ರಚುರಣಾಲು ಪ್ರಕಾಶನದ ವತ್ಸಲಾ ಅವರು ರೂ.5,05,000 ನಷ್ಟ ಪರಿಹಾರ ನೀಡಬೇಕೆಂದು ನಿರ್ದೇಶಿಸಿ ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ತೀರ್ಪು ‌ನೀಡಿದೆ. ಪ್ರಕರಣದ ವಿವರ: ಕನ್ನಡದ ಖ್ಯಾತ ಸಾಹಿತಿ,ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ ಅವರು 1960 ರ ದಶಕದಲ್ಲಿ ಪ್ರಕಟವಾದ ವಂಶವೃಕ್ಷ ಸೇರಿದಂತೆ 25 ಪ್ರಸಿದ್ಧ ಕಾದಂಬರಿಗಳನ್ನು ರಚಿಸಿದ್ದಾರೆ. ವಂಶವೃಕ್ಷ ಕಾದಂಬರಿಯು ಕಾದಂಬರಿಯು ಕನ್ನಡ […]

ಮೈಸೂರು ಏರ್‌ಪೋರ್ಟ್ : ರನ್‌ವೇ ವಿಸ್ತರಣೆಗೆ ಭೂಸ್ವಾಧೀನ ತೊಡಕು

ಮೈಸೂರು : ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರನ್ ವೇ ವಿಸ್ತರಣೆಗೆ ಏರ್ ಪೋರ್ಟ್ ಅಥಾರಿಟಿಯೂ 534 ಕೋಟಿ ರೂ. ಅನುದಾನ ನೀಡಲಿದೆ. ಮೈಸೂರು ಏರ್‌ಪೋರ್ಟ್ ರನ್ ವೇ ವಿಸ್ತರಣೆಗೆ ಭೂಸ್ವಾಧೀನ ಪ್ರಕ್ರಿಯೆ ತೊಡಕಾಗಿ ಪರಿಣಮಿಸಿದೆ ಎಂದು ಸಂಸದ ಪ್ರತಾಪ್‌ಸಿಂಹ ತಿಳಿಸಿದರು. ಆದರೆ ಭೂ ಸ್ವಾಧೀನ ಪ್ರಕ್ರಿಯೆ ನಾನಾ ಕಾರಣಗಳಿಗೆ ತಡವಾಗುತ್ತಿದೆ. ಹೀಗಾಗಿ ಅನುದಾನ ದೊರೆತಿದ್ದರೂ ರನ್ ವೇ ವಿಸ್ತರಣೆ ಕಾಮಗಾರಿ ಆರಂಭಿಸಲು ಸಾಧ್ಯವಾಗಿಲ್ಲ ಎಂದರು. ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ 240 […]

ದುಬೈ : ಕಣ್ಮನ ಸೆಳೆಯುವ ಫೌಂಟೇನ್‌

ಮಾನವ ನಿರ್ಮಿತ ಕೃತಕ ಸರೋವರದಲ್ಲಿ ಪ್ರತಿನಿತ್ಯ ರಾತ್ರಿ ಆರು ಗಂಟೆಯಿಂದ ರಾತ್ರಿ ಹನ್ನೊಂದು ಗಂಟೆಯವರೆಗೆ ಪ್ರತೀ ಮೂವತ್ತು ನಿಮಿಷದ ಅಂತರದಲ್ಲಿ ಬೆಂಕಿ, ನೀರು, ಸಂಗೀತ ಬೆಳಕಿನ ಆಕರ್ಷಕ ಚಮತ್ಕಾರಿಕಾ ಕಾರಂಜಿ ಪ್ರದರ್ಶನ ನಡೆಯುತ್ತದೆ. ಗಿನ್ನೆಸ್‌ ದಾಖಲೆಗಳ ನಗರಿ ಎಂದೇ ಪ್ರಖ್ಯಾತಿಯನ್ನು ಪಡೆದಿರುವ ವಿಶ್ವವಾಣಿಜ್ಯ ನಗರ ದುಬೈ ಫೌಂಟೇನ್‌ ಜಗತ್ತಿನ ಅತೀ ಎತ್ತರದ ಸಂಗೀತ ಕಾರಂಜಿ ಎಂಬ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. ದುಬೈಯ ಹೃದಯ ಭಾಗದಲ್ಲಿ ಪ್ರತಿಷ್ಠಿತ ದುಬೈ ಮಾಲ್‌ನ ಬಳಿ ವಿಶ್ವದ ಅತೀ ಎತ್ತರದ ವಾಸ್ತು ಶಿಲ್ಪ ಕಟ್ಟಡ […]

ಟರ್ಮಿನಲ್‌ 2ರಿಂದ ಬಸ್‌ ಸೇವೆ : ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

ದೇವನಹಳ್ಳಿ: ‘ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಿತ್ಯ ಬಂದು ಹೋಗುವ ಪ್ರಯಾಣಿಕರ ಸಂಖ್ಯೆ ಸುಮಾರು 1 ಲಕ್ಷದಷ್ಟಿದೆ. ಆ ಹಿನ್ನೆಲೆ ಎರಡನೇ ಟರ್ಮಿನಲ್‌ನಲ್ಲಿ ಕೆಎಸ್‌ ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳಿಗೆ ಶುಕ್ರವಾರ ಚಾಲನೆ ನೀಡಲಾಯಿತು. ‘ಮೈಸೂರು, ಮಡಿಕೇರಿ ಹಾಗೂ ಕುಂದಾಪುರ ಮಾರ್ಗದಲ್ಲಿ 13 ಫ್ಲೈಬಸ್‌ಗಳು 42 ಟ್ರಿಪ್‌ ಮಾಡುತ್ತಿವೆ. ಟರ್ಮಿನಲ್‌-2 ಪ್ರಯಾಣಿಕರಿಗೂ ಇನ್ನು ಮುಂದೆ ಉಪಯೋಗವಾಗ ಲಿದೆ. ದಿನದ 24 ಗಂಟೆಯೂ ಬಸ್ ಸೇವೆ ಇರಲಿದೆ’ ಎಂದು ವಿವರಿಸಿದರು. ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿ, ‘ಕೆಂಪೇಗೌಡ ಅಂತರರಾಷ್ಟ್ರೀಯ […]

ಮಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಚಾಲನೆ: 2 ಅಮೃತ್ ಭಾರತ್ 8 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಲೋಕಾರ್ಪಣೆಗೊಳಿಸಿದ ಪ್ರಧಾನಿ

ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ ಇಂದು ಒಟ್ಟು ಎಂಟು ಹೊಸ ರೈಲುಗಳಿಗೆ ಚಾಲನೆ ನೀಡಿದರು. ಇವುಗಳಲ್ಲಿ ಎರಡು ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಮತ್ತು ಆರು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗಳು ಸೇರಿವೆ. ಇಂದು ಅಯೋಧ್ಯೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ರೈಲುಗಳಿಗೆ ಚಾಲನೆ ನೀಡಿದ್ದಾರೆ. ಕೆಲವು ರೈಲುಗಳಿಗೆ ಅಯೋಧ್ಯೆಯಿಂದ ಚಾಲನೆ ದೊರೆತಿದ್ದರೆ ಇತರವುಗಳನ್ನು ಏಕಕಾಲದಲ್ಲಿ ವೀಡಿಯೊ ಲಿಂಕ್ ಮೂಲಕ ವರ್ಚುವಲ್ ಮೂಲಕ ಚಾಲನೆ ಮಾಡಲಾಯಿತು. ಅಮೃತ್ ಭಾರತ್ […]