ಮಲ್ಪೆ: ಜಿಲ್ಲಾ ಮಟ್ಟದ ಸಿರಿಧಾನ್ಯ ನಡಿಗೆ ಮತ್ತು ಆಹಾರ ಮಳಿಗೆ ಪ್ರದರ್ಶನ

ಉಡುಪಿ: ಅಂತರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳ – 2024 ರ ಅಂಗವಾಗಿ ಗ್ರಾಹಕರಲ್ಲಿ ಮುಂದಿನ ಪೀಳಿಗೆಗೆ ಸಿರಿಧಾನ್ಯ ಬೆಳೆಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜಿಲ್ಲಾ ಮಟ್ಟದ ಸಿರಿಧಾನ್ಯ ನಡಿಗೆ ಹಾಗೂ ಸಿರಿಧಾನ್ಯ ಆಹಾರ ಮಳಿಗೆಗಳ ಪ್ರದರ್ಶನ ಕಾರ್ಯಕ್ರಮವು ಡಿಸೆಂಬರ್ 31 ರಂದು ಸಂಜೆ 4.30 ಕ್ಕೆ ಮಲ್ಪೆ ಬೀಚ್ ನಲ್ಲಿ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವವರು ನಿಯೋಜಿತ ಸ್ಥಳದಲ್ಲಿ ಹಾಜರಿರುವಂತೆ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.