ಕೃಷಿ ಇಲಾಖೆಯಲ್ಲಿ ತಾಂತ್ರಿಕ ಸಹಾಯಕರ ಹುದ್ದೆಗಾಗಿ ಅರ್ಜಿ ಆಹ್ವಾನ

ಉಡುಪಿ: ಕೃಷಿ ಇಲಾಖೆಯ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ಆಹಾರ ಮತ್ತು ಪೌಷ್ಠಿಕ ಭದ್ರತೆಯೋಜನೆಯಡಿ ತಾಂತ್ರಿಕ ಸಹಾಯಕರ ಹುದ್ದೆಯನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಬಿ.ಎಸ್.ಸಿ (ಕೃಷಿ) ಪದವಿ ಹೊಂದಿರುವ, ಕಂಪ್ಯೂಟರ್ ಜ್ಞಾನ ಮತ್ತು ಕೃಷಿ ಸಂಶೋಧನೆ ಹಾಗೂ ಕೃಷಿ ವಿಸ್ತರಣಾ ಕಾರ್ಯಕ್ರಮದಲ್ಲಿ ಅನುಭವವುಳ್ಳವರು ಡಿಸೆಂಬರ್ 26 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಂಟಿ ಕೃಷಿ ನಿರ್ದೇಶಕರು, ಸಿ ಬ್ಲಾಕ್, ಎರಡನೇ ಮಹಡಿ, ಕೊಠಡಿ ಸಂಖ್ಯೆ ಸಿ-304, […]

5000 ಅಮೇರಿಕನ್ ಡೈಮಂಡ್ ವಜ್ರಗಳಿಂದ ಅಯೋಧ್ಯಾ ರಾಮಮಂದಿರ ನೆಕ್ಲೇಸ್ ತಯಾರಿಸಿದ ಸೂರತ್ ಜ್ಯುವೆಲರಿ ಸಂಸ್ಥೆ!!

ಸೂರತ್: ನಗರದ ಆಭರಣ ಸಂಸ್ಥೆಯೊಂದು ಅಯೋಧ್ಯೆಯ ಶ್ರೀ ರಾಮಜನ್ಮಭೂಮಿ ಮಂದಿರದ ವಾಸ್ತುಶಿಲ್ಪದ ವೈಶಿಷ್ಟ್ಯಗಳಿಂದ ಪ್ರೇರಿತವಾದ 5000 ಅಮೇರಿಕನ್ ಡೈಮಂಡ್ ವಜ್ರಗಳು ಮತ್ತು 2 ಕೆಜಿ ಬೆಳ್ಳಿಯನ್ನು ಹೊಂದಿರುವ ನೆಕ್ಲೇಸ್ ಅನ್ನು ತಯಾರಿಸಿದೆ. ಸೂರತ್ ಮೂಲದ ರಸೇಶ್ ಜ್ಯುವೆಲರ್ಸ್, ವಜ್ರಗಳು ಮತ್ತು ಚಿನ್ನವನ್ನು ಬಳಸಿ ರಾಮ, ಲಕ್ಷ್ಮಣ, ಸೀತಾ ಮತ್ತು ಹನುಮಾನ್ ವಿಗ್ರಹಗಳೊಂದಿಗೆ ರಾಮ್ ದರ್ಬಾರ್ ಜೊತೆಗೆ ಸಂಕೀರ್ಣ ವಿನ್ಯಾಸದ ನೆಕ್ಲೇಸ್ ಅನ್ನು ತಯಾರಿಸಿದೆ. ಎರಡು ಕಿಲೋಗ್ರಾಂ ತೂಕದ ಕಲಾಕೃತಿಯು 5,000 ವಜ್ರಗಳು, ಚಿನ್ನ ಮತ್ತು ಬೆಳ್ಳಿಯನ್ನು ಹೊಂದಿದೆ. […]

ವಾಯುವ್ಯ ಚೀನಾದಲ್ಲಿ 6.2 ತೀವ್ರತೆಯ ಪ್ರಬಲ ಭೂಕಂಪ: ಕನಿಷ್ಠ 116 ಸಾವು; 400 ಗಾಯಾಳು

ಬೀಜಿಂಗ್: ವಾಯುವ್ಯ ಚೀನಾದ ದೂರದ ಪರ್ವತ ಪ್ರದೇಶದಲ್ಲಿ 6.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 400 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಭೂಕಂಪ ಪರಿಹಾರ ಕೇಂದ್ರ ಮಂಗಳವಾರದಂದು ತಿಳಿಸಿದೆ. ಚೀನಾ ಭೂಕಂಪ ನೆಟ್‌ವರ್ಕ್ ಸೆಂಟರ್ (ಸಿಇಎನ್‌ಸಿ) ಪ್ರಕಾರ ಸೋಮವಾರ ರಾತ್ರಿ 11.59 ಕ್ಕೆ ಗನ್ಸು ಮತ್ತು ಕಿಂಗ್ಹೈ ಪ್ರಾಂತ್ಯಗಳಲ್ಲಿ ಭಾರಿ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರ 10 ಕಿಲೋಮೀಟರ್ ಆಳದಲ್ಲಿತ್ತು. 6.2 ತೀವ್ರತೆಯ ಪ್ರಬಲ ಕಂಪನದ ಬಳಿಕ ನೆರೆಯ […]

60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರ: ಕೋವಿಡ್ ಹೆಚ್ಚಳ ಹಿನ್ನೆಲೆ ಮುಂಜಾಗರೂಕತಾ ಕ್ರಮ

ಬೆಂಗಳೂರು: ಕೇರಳದಲ್ಲಿ ಕೋವಿಡ್-19 ಉಪತಳಿ ಜೆಎನ್.1 ಪ್ರಕರಣಗಳ ಹೆಚ್ಚಳ ಭೀತಿಯ ನಡುವೆ, ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು 60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಸಹವರ್ತಿ ರೋಗಗಳನ್ನು ಹೊಂದಿರುವವರು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಕೋವಿಡ್-19 ಉಪತಳಿ ಜೆಎನ್.1 ರ ರೋಗಲಕ್ಷಣಗಳನ್ನು ವರದಿ ಮಾಡಿರುವ ಜನರಲ್ಲಿ ಪರೀಕ್ಷೆಗಳನ್ನು ಹೆಚ್ಚಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಕೇರಳದ ಗಡಿ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರ ಕಣ್ಗಾವಲು ಹೆಚ್ಚಿಸಿದೆ ಎಂದು ಸಚಿವರು ಮಾಹಿತಿ ನೀಡಿದರು. ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ಸದ್ಯಕ್ಕೆ […]