13 ಮಂದಿ ಸಾವು, 178 ಜನರಿಗೆ ಗಾಯ : ಗಿನಿಯಾ ರಾಜಧಾನಿಯಲ್ಲಿ ಬೃಹತ್ ತೈಲ ಟರ್ಮಿನಲ್ನಲ್ಲಿ ಸ್ಫೋಟ
ಕೊನಾಕ್ರಿ (ಗಿನಿಯಾ): ಭಾನುವಾರ ಮಧ್ಯರಾತ್ರಿಯ ನಂತರ ಗಿನಿಯನ್ ಪೆಟ್ರೋಲಿಯಂ ಕಂಪನಿಯ ಟರ್ಮಿನಲ್ನಲ್ಲಿ ಸ್ಫೋಟ ಸಂಭವಿಸಿದೆ ಎಂದು ಗಿನಿಯಾ ಪ್ರೆಸಿಡೆನ್ಸಿ ತಿಳಿಸಿದೆ. ಸ್ಫೋಟದಿಂದ ಕಲೂಮ್ ಜಿಲ್ಲೆಯ ಹೃದಯಭಾಗದಲ್ಲಿ ತುಂಬಾ ಹಾನಿ ಉಂಟಾಗಿದೆ. ಈ ಭಾಗದಲ್ಲಿ ಸರ್ಕಾರಿ ಕಚೇರಿಗಳು ಹೆಚ್ಚಿವೆ. ಗಾಯಗೊಂಡ 178 ಜನರಲ್ಲಿ ಕನಿಷ್ಠ 89 ಜನರು ಚಿಕಿತ್ಸೆ ಪಡೆದು ಡಿಶ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ. ಹತ್ಯೆಗೀಡಾದ 13 ಜನರಲ್ಲಿ ವಿದೇಶಿಯರು ಸೇರಿದ್ದಾರೆ ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಆಫ್ರಿಕನ್ ದೇಶವಾದ ಗಿನಿಯಾದ ರಾಜಧಾನಿ ಕೊನಾಕ್ರಿಯಲ್ಲಿ ಬೃಹತ್ […]
ಮುಂಜಾಗ್ರತೆಗೆ WHO ಕರೆ : ಭಾರತದಲ್ಲಿ ಮಾತ್ರವಲ್ಲ, ಜಾಗತಿಕವಾಗಿ ಏರಿಕೆ ಕಾಣುತ್ತಿದೆ ಕೋವಿಡ್
ನವದೆಹಲಿ: ಕೇರಳದಲ್ಲಿ ಓಮಿಕ್ರಾನ್ ಉಪತಳಿಯಾಗಿರುವ ಜೆಎನ್.1 ಭಾರತದಲ್ಲಿ ಪತ್ತೆಯಾಗುವ ಜೊತೆಗೆ ದೇಶದೆಲ್ಲೆಡೆ ಕೋವಿಡ್ 19 ಪ್ರಕರಣಗಳ ಏರಿಕೆ ಕೂಡ ಕಂಡು ಬಂದಿದೆ.ಇತ್ತೀಚಿಗೆ ಅನೇಕ ಕಾರಣದಿಂದಾಗಿ ಶ್ವಾಸಕೋಶದ ಸೋಂಕಿನಲ್ಲಿ ಏರಿಕೆ ಕಂಡಿದೆ. ಕೇವಲ ಕೋವಿಡ್ 19 ಮಾತ್ರವಲ್ಲದೆ, ಇನ್ನಿತರ ಸೋಂಕು ಮತ್ತು ಬ್ಯಾಕ್ಟೀರಿಯಾಗಳು ಕಾಡುತ್ತಿವೆ. ಭಾರತದಲ್ಲಿ ಮಾತ್ರವಲ್ಲದೇ, ಜಾಗತಿಕ ಮಟ್ಟದಲ್ಲೂ ಕೋವಿಡ್ 19 ಪ್ರಕರಣಗಳ ಏರಿಕೆ ಕಂಡು ಬಂದಿದೆ. ಹೀಗಾಗಿ ದೇಶಗಳು ಮುಂಜಾಗ್ರತೆ ಜೊತೆಗೆ ಈ ತಳಿಗಳ ಕುರಿತು ಮಾಹಿತಿ ಹಂಚಿಕೊಳ್ಳುವಂತೆ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಜಾಗತಿಕ […]
ನೆಲಕ್ಕುರುಳಿದ ಕಟ್ಟಡಗಳು,118 ಸಾವು, ನೂರಾರು ಮಂದಿಗೆ ಗಾಯ : ಚೀನಾದಲ್ಲಿ ಪ್ರಬಲ ಭೂಕಂಪ
ಬೀಜಿಂಗ್ (ಚೀನಾ): ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 6.2 ಎಂದು ಅಳೆಯಲಾಗಿದೆ. ಚೀನಾ ಭೂಕಂಪ ನೆಟ್‌ವರ್ಕ್ ಸೆಂಟರ್ (ಸಿಇಎನ್‌ಸಿ) ಪ್ರಕಾರ, ಸೋಮವಾರ ರಾತ್ರಿ 23:59 ಕ್ಕೆ ವಾಯುವ್ಯ ಚೀನಾದ ಗನ್ಸು ಪ್ರಾಂತ್ಯದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಇದಕ್ಕೂ ಮುನ್ನ ಪಾಕಿಸ್ತಾನದಲ್ಲೂ ಪ್ರಬಲ ಭೂಕಂಪನದ ಅನುಭವವಾಗಿತ್ತು. ಸೋಮವಾರ ತಡರಾತ್ರಿ ಚೀನಾದ ಗನ್ಸು ಪ್ರಾಂತ್ಯದಲ್ಲಿ ಪ್ರಬಲ ಭೂಕಂಪನ ಸಂಭವಿಸಿದೆ. ಚೀನಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಸೋಮವಾರ ಮಧ್ಯರಾತ್ರಿ ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ 118 ಜನರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಮಾಹಿತಿಯ ಪ್ರಕಾರ, […]
ಅಧ್ಯಯನ ವರದಿ : ಶೇ 45ರಷ್ಟು ಐಟಿ-ಟೆಕ್ ಪದವೀಧರರು ಮಾತ್ರ ನೇಮಕಾತಿಗೆ ಅರ್ಹರು
ನವದೆಹಲಿ : ಸರಿಸುಮಾರು 1.5 ಮಿಲಿಯನ್ ಎಂಜಿನಿಯರಿಂಗ್ ಪದವೀಧರರು ಐಟಿ ಅಥವಾ ತಂತ್ರಜ್ಞಾನ ಕ್ಷೇತ್ರದಲ್ಲಿ ನೌಕರಿಗಾಗಿ ಹುಡುಕಾಟ ನಡೆಸುತ್ತಿದ್ದು, ಉದ್ಯಮಗಳು ವಿಶಿಷ್ಟ ಕೌಶಲಗಳನ್ನು ಹೊಂದಿದ ಅಭ್ಯರ್ಥಿಗಳನ್ನು ಹುಡುಕಾಡುತ್ತಿರುವುದು ಮತ್ತು ಮಂದಗತಿಯ ನೇಮಕಾತಿಗಳು ಗೊಂದಲದ ವಾತಾವರಣ ಸೃಷ್ಟಿಸಿವೆ. ಪದವಿ ಶಿಕ್ಷಣ ಮುಗಿಸಿ ಐಟಿ ಉದ್ಯಮದಲ್ಲಿ ಕೆಲಸಕ್ಕೆ ಸೇರಬಯಸುವ ಉದ್ಯೋಗಾಕಾಂಕ್ಷಿಗಳ ಪೈಕಿ ಕೇವಲ ಶೇ 45ರಷ್ಟು ಜನ ಮಾತ್ರ ಉದ್ಯೋಗಕ್ಕೆ ಅಗತ್ಯವಾದ ಕೌಶಲಗಳನ್ನು ಹೊಂದಿದ್ದು, ನೇಮಕಾತಿಗೆ ಅರ್ಹವಾಗಿರುತ್ತಾರೆ ಎಂದು ವರದಿಯೊಂದು ಮಂಗಳವಾರ ತಿಳಿಸಿದೆ.ಐಟಿ ಅಥವಾ ತಂತ್ರಜ್ಞಾನ ಪದವಿ ಮುಗಿಸಿ ಹೊರಬರುವ […]
ಅಕ್ರಮ ಸಕ್ರಮ ಸರಾಗ ಪ್ರಕ್ರಿಯೆಗೆ ಬಗರ್ ಹುಕುಂ ಆ್ಯಪ್ ಬಿಡುಗಡೆ ಮಾಡಿದ ಕಂದಾಯ ಇಲಾಖೆ
ಬೆಂಗಳೂರು: ಕೃಷಿ ಭೂಮಿ ಅಕ್ರಮ ಸಾಗುವಳಿದಾರರ ಪಾಲಾಗುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಬಗರ್ ಹುಕುಂ ಆ್ಯಪ್ ಬಿಡುಗಡೆ ಮಾಡಿದೆ. ಸಾಗುವಳಿ ಭೂಮಿಯಲ್ಲಿ ಕೃಷಿ ಅಥವಾ ಇನ್ಯಾವುದೇ ಚಟುವಟಿಕೆ ಬಗ್ಗೆ ಸ್ಯಾಟಲೈಟ್ ಇಮೇಜ್ ಮೂಲಕ ಮಾಹಿತಿ ಪಡೆದು ಅರ್ಜಿ ವಿಲೇವಾರಿ ಮಾಡುವುದಕ್ಕೆ ಸರ್ಕಾರ ಬಗರ್ ಹುಕುಂ ಆ್ಯಪ್ ರೂಪಿಸಿದೆ. ಆ್ಯಪ್ ಬಿಡುಗಡೆ ಮಾಡಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ನಮೂನೆ 50, 53, 57ರ ಅಕ್ರಮ ಸಕ್ರಮ ಯೋಜನೆಯಡಿ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ ಕೃಷಿಯೇತರ ಚಟುವಟಿಕೆಗಳಲ್ಲಿ […]