ಮೊದಲ ಬಾರಿಗೆ 71 ಸಾವಿರದ ಮಟ್ಟ ದಾಟಿ ಇತಿಹಾಸ ಸೃಷ್ಟಿಸಿದ ಸೆನ್ಸೆಕ್ಸ್
ಮುಂಬೈ: ಅಮೆರಿಕದ ಫೆಡರಲ್ ರಿಸರ್ವ್ ತನ್ನ ಪ್ರಮುಖ ಬಡ್ಡಿದರಗಳನ್ನು ಯಥಾಸ್ಥಿತಿಯಲ್ಲಿ ಇರಿಸಿದ ನಂತರ ಜಾಗತಿಕ ಮಾರುಕಟ್ಟೆಗಳಲ್ಲಿನ ಆಶಾವಾದಿ ಪ್ರವೃತ್ತಿ, ಮುಂದಿನ ವರ್ಷ ದರ ಕಡಿತದ ಸಂಕೇತಗಳು ಮತ್ತು ನಿರಂತರ ವಿದೇಶಿ ನಿಧಿಯ ಒಳಹರಿವಿನಿಂದ ಭಾರತದ ಷೇರು ಮಾರುಕಟ್ಟೆಗಳು ಏರಿಕೆ ಕಂಡಿವೆ. 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 569.88 ಪಾಯಿಂಟ್ಸ್ ಏರಿಕೆ ಕಂಡು ಸಾರ್ವಕಾಲಿಕ ಗರಿಷ್ಠ 71,084.08 ಕ್ಕೆ ತಲುಪಿದೆ. ಶುಕ್ರವಾರದ ಬೆಳಗಿನ ವಹಿವಾಟಿನಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಏರಿಕೆ ಕಂಡು ಬಂದಿದ್ದು, ಬಿಎಸ್‌ಇ ಸೆನ್ಸೆಕ್ಸ್ ಶುಕ್ರವಾರ ಮೊದಲ […]
ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದ ರಥೋತ್ಸವ ಸಂಪನ್ನ
ಉಡುಪಿ: ರಥಬೀದಿಯ ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದ ರಥೋತ್ಸವವು ಭಾವಿ ಪರ್ಯಾಯ ಪೀಠಾಧಿಪತಿಗಳಾದ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಸಮ್ಮುಖದಲ್ಲಿ ಜರಗಿತು. ಈ ಸಂದರ್ಭದಲ್ಲಿ ರಥಬೀದಿಯಲ್ಲಿ ಪರ್ಯಾಯೋತ್ಸವದ ಅನಂತ ದ್ವಾರ ಮಂಟಪದ ಉದ್ಘಾಟನೆಯನ್ನು ಸ್ವಾಮೀಜಿಗಳು ನೆರವೇರಿಸಿದರು.
ಬ್ರಹ್ಮಾವರ: ಜನನಿ ಎಂಟರ್ ಪ್ರೈಸಸ್ ನಲ್ಲಿ ಉದ್ಯೋಗಾವಕಾಶ
ಬ್ರಹ್ಮಾವರ: ಇಲ್ಲಿನ ಪ್ರಖ್ಯಾತ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಮಳಿಗೆ ಜನನಿ ಎಂಟರ್ ಪ್ರೈಸಸ್ ನಲ್ಲಿ ಉದೋಗಾವಕಾಶಗಳಿವೆ ಲಭ್ಯವಿರುವ ಉದ್ಯೋಗಳುಡ್ರೈವರ್-2ಡೆಲಿವರಿ ಎಕ್ಸಿಕ್ಯೂಟಿವ್-2ಸರ್ವಿಸ್ ಎಕ್ಸಿಕ್ಯೂಟಿವ್-2ಟೆಲಿ ಕಾಲರ್-2ಟೆಕ್ನಿಷಿಯನ್-2 ಆಕರ್ಷಕ ವೇತನ, ಇ.ಎಸ್.ಐ.ಸಿ ಮತ್ತು ಪಿ.ಎಫ್ ಸೌಲಭ್ಯವಿದೆ. ಬ್ರಹ್ಮಾವರದವರಿಗೆ ಮೊದಲ ಆದ್ಯತೆ ಆಸಕ್ತರು ಜನನಿ ಎಂಟರ್ ಪ್ರೈಸಸ್ ಬ್ರಹ್ಮಾವರಕ್ಕೆ ಭೇಟಿ ನೀಡಬಹುದು ಅಥವಾ 9611097699/9986763686 ಕರೆ ಮಾಡಬಹುದು.
ಸಾಂಸ್ಕೃತಿಕ ಕಲರವ ಆಳ್ವಾಸ್ ವಿರಾಸತ್ ಗೆ ಚಾಲನೆ ನೀಡಿದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್
ಮೂಡುಬಿದಿರೆ: ನೂರಾರು ಮಂದಿ ಉಚಿತ ಶಿಕ್ಷಣ ಮತ್ತು ವಸತಿ ಸೌಲಭ್ಯವನ್ನು ಪಡೆಯುತ್ತಿರುವ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯನ್ನು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಗುರುವಾರ ಶ್ಲಾಘಿಸಿದರು ಮತ್ತು ಸಂಸ್ಥೆಯು ಮಾತೃಭಾಷೆಯ ಬೆಳವಣಿಗೆಗೆ ಹೆಚ್ಚಿನ ಕೊಡುಗೆ ನೀಡಬೇಕೆಂದು ಆಶಿಸಿದರು. ಆಳ್ವಾಸ್ ಎಜುಕೇಶನ್ ಫೌಂಡೇಶನ್ ಕ್ಯಾಂಪಸ್‌ನಲ್ಲಿರುವ ವನಜಾಕ್ಷಿ ಶ್ರೀಪತಿ ಭಟ್ ಬಯಲು ಸಭಾಂಗಣದಲ್ಲಿ ನಾಲ್ಕು ದಿನಗಳ 29 ನೇ ಆವೃತ್ತಿಯ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ‘ಆಳ್ವಾಸ್ ವಿರಾಸತ್’ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರವು ಶಾಲೆಯನ್ನು ಅತ್ಯುತ್ತಮ ಸಂಸ್ಥೆ ಎಂದು ಘೋಷಿಸಿದೆ. ಜಗತ್ತಿನ […]
10 ವರ್ಷಗಳ ಬಳಿಕ ವಾಹನ ಚಾಲನಾ ತರಬೇತಿ ಶುಲ್ಕ ಪರಿಷ್ಕರಣೆ: ದುಬಾರಿಯಾಗಲಿದೆ ವಾಹನ ಚಾಲನಾ ತರಬೇತಿ
ಬೆಂಗಳೂರು: ರಾಜ್ಯದ ಡ್ರೈವಿಂಗ್ ಸ್ಕೂಲ್‌ಗಳಲ್ಲಿ ವಾಹನ ಚಾಲನಾ ತರಬೇತಿ ಶುಲ್ಕವನ್ನು 10 ವರ್ಷಗಳ ಬಳಿಕ ಪರಿಷ್ಕರಿಸಲಾಗಿದ್ದು, 2024ರ ಜನವರಿ 1 ರಿಂದ ಚಾಲ್ತಿಗೆ ಬರಲಿದೆ. ಈ ಪರಿಷ್ಕರಣೆಯೊಂದಿಗೆ ವಾಹನ ಚಾಲನಾ ತರಬೇತಿ ಶುಲ್ಕವು 800 ರೂಪಾಯಿಯಿಂದ 3,000 ರೂಪಾಯಿಗೆ ಏರಿಕೆಯಾಗಲಿದೆ ಎಂದು ಎಚ್.ಟಿ ವರದಿ ಮಾಡಿದೆ. ಕರ್ನಾಟಕದಲ್ಲಿ ಡೈವಿಂಗ್ ಸ್ಕೂಲ್‌ಗಳಲ್ಲಿ ತರಬೇತಿ ಶುಲ್ಕವನ್ನು ಹೆಚ್ಚಿಸುವುದಕ್ಕೆ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಈ ಆದೇಶದ ಪ್ರಕಾರ, ವಾಹನ ಚಾಲನಾ ತರಬೇತಿ 2024ರ ಜ.1ರಿಂದ ಕೊಂಚ ದುಬಾರಿಯಾಗಲಿದೆ. ಕಾರು ಚಾಲನೆ […]