ಏಳು ವರ್ಷಗಳ ಬಳಿಕ ಮತ್ತೆ ಬರುತ್ತಿದೆ ಕಿರಿಕ್ ಶೆಟ್ಟರ “ಬ್ಯಾಚುಲರ್ ಪಾರ್ಟಿ”… ಈ ಬಾರಿ ಪಾರ್ಟಿ ಇನ್ನೂ ಜೋರು!!

ಏಳುವರ್ಷಗಳ ಹಿಂದೆ ರಕ್ಷಿತ್ ಶೆಟ್ಟಿ-ರಿಷಬ್ ಶೆಟ್ಟಿ ತಂಡದಿಂದ “ಕಿರಿಕ್ ಪಾರ್ಟಿ” ಹಿರಿ ಕಿರಿಯರೆನ್ನದೆ ಎಲ್ಲರನ್ನೂ ರಂಜಿಸಿ ಗಲ್ಲಾಪೆಟ್ಟಿಗೆಯನ್ನು ಧೂಳೀಪಟ ಮಾಡಿ ದಾಖಲೆ ಬರೆದಿತ್ತು. ಕಿರಿಕ್ ಪಾರ್ಟಿ ಬಿಡುಗಡೆಯಾಗಿ ಏಳು ವರ್ಷ ಕಳೆದಿದ್ದು, ಅಭಿಮಾನಿಗಳು ಕಿರಿಕ್ ಪಾರ್ಟಿ-2 ರ ಬಿಡುಗಡೆಗಾಗಿ ಕಾಯುತ್ತಲೇ ಇದ್ದರು. ಈ ಬಗ್ಗೆ ಚಿತ್ರದ ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿ ಮಾಹಿತಿ ನೀಡಿದ್ದು, ಈ ಬಾರಿ ಪಾರ್ಟಿ ಇನ್ನೂ ಜೋರು ಎಂದಿದ್ದು ಕುತೂಹಲವನ್ನು ಇನ್ನೂ ಕೆರಳಿಸಿದ್ದಾರೆ. ಬಹುತಾರಾಗಣದ ಬೆಂಬಲದೊಂದಿಗೆ, ಈ ಚಿತ್ರವು ಅಭಿಜಿತ್ ಮಹೇಶ್ ಅವರ […]

ಇಸ್ರೇಲ್-ಹಮಾಸ್ ಸಂಘರ್ಷ: ತಕ್ಷಣದ ಮಾನವೀಯ ಕದನ ವಿರಾಮದ ಬೇಡಿಕೆ ಪರ ಮತ ಚಲಾಯಿಸಿದ ಭಾರತ

ನವದೆಹಲಿ: ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ತಕ್ಷಣದ ಮಾನವೀಯ ಕದನ ವಿರಾಮ ಮತ್ತು ಎಲ್ಲಾ ಒತ್ತೆಯಾಳುಗಳನ್ನು ಬೇಷರತ್ತಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತವು ಮಂಗಳವಾರ ಕರಡು ನಿರ್ಣಯದ ಪರವಾಗಿ ಮತ ಚಲಾಯಿಸಿದೆ. ತಕ್ಷಣದ ಮಾನವೀಯ ಕದನ ವಿರಾಮದ ಬೇಡಿಕೆಯ ನಿರ್ಣಯವನ್ನು ಅಲ್ಜೀರಿಯಾ, ಬಹ್ರೇನ್, ಇರಾಕ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಪ್ಯಾಲೆಸ್ತೀನ್ ಸೇರಿದಂತೆ ಹಲವಾರು ದೇಶಗಳು ಪ್ರಾಯೋಜಿಸಿದ್ದವು. ಅಮೇರಿಕಾ ಸಂಯುಕ್ತ ಸಂಸ್ಥಾನ ಮತ್ತು ಇಸ್ರೇಲ್ ಸೇರಿದಂತೆ ಹತ್ತು ದೇಶಗಳು […]

ಡಿ.16 ರಂದು ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ಬ್ರಹ್ಮರಥೋತ್ಸವ

ಕುಂದಾಪುರ: ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಡಿ.16 ರಂದು ಬ್ರಹ್ಮರಥೋತ್ಸವ ಹಾಗೂ ಅಷ್ಟೋತ್ತರ ನಾರೀಕೇಳ ಗಣಯಾಗ ನಡೆಯಲಿದ್ದು, ಡಿ.13 ರಿಂದ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ ಎಂದು ದೇವಳದ ಪ್ರಕಟಾಣೆ ತಿಳಿಸಿದೆ.

ಕಾಪು: ಲೀಲಾಧರ್ ಶೆಟ್ಟಿ ದಂಪತಿ ಆತ್ಮಹತ್ಯೆ

ಕಾಪು: ಕಾಪು ಕ್ಷೇತ್ರದಲ್ಲಿ ಮಾತ್ರವಲ್ಲದೆ ತುಳುನಾಡಿನದ್ಯಂತ ತನ್ನ ಆದರ್ಶ ವ್ಯಕ್ತಿತ್ವದಿಂದಲೇ ಜನಮನ್ನಣೆ ಪಡೆದು ಸಮಾಜದ ಸರ್ವರ ಆಪ್ತಮಿತ್ರನಂತಿದ್ದ ಸಮಾಜ ಸೇವಕ ಕಾಪು ಲೀಲಾಧರ್ ಶೆಟ್ಟಿ ಅವರು ಅವರ ಅರ್ಧಾಂಗಿ ಶ್ರೀಮತಿ ವಸುಂಧರಾ ಲೀಲಾಧರ ಶೆಟ್ಟಿ ಅವರೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ವಿಚಾರ ನೆನ್ನೆ ರಾತ್ರಿ ನಡೆದಿದೆ. ಇವರು ಕಾಪು ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು, ಕಾಪು ರಂಗತರಂಗ ನಾಟಕ ತಂಡ ಕಟ್ಟಿ ಬೆಳೆಸಿದ ಕೀರ್ತಿ ಇವರದು, ಈ ತಂಡದ ಯಜಮಾನಿಕೆಯೊಂದಿಗೆ ಅತ್ಯಂತ ಸುಪ್ರಸಿದ್ಧಿ ಹೊಂದಿದ್ದ ಇವರು ಗುರ್ಮೇ […]

ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಭಜನ್ ಲಾಲ್ ಶರ್ಮಾ ಆಯ್ಕೆ: ಜೈಪುರದ ಮಹಾರಾಣಿಗೆ ಉಪಮುಖ್ಯಮಂತ್ರಿ ಪಟ್ಟ

ಜೈಪುರ: ಭಾರತೀಯ ಜನತಾ ಪಕ್ಷವು ಮಂಗಳವಾರ ರಾಜಸ್ಥಾನದ ಮುಖ್ಯಮಂತ್ರಿಯಾಗಿ ಸಂಗನೇರ್ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾದ ಭಜನ್ ಲಾಲ್ ಶರ್ಮಾ ಅವರನ್ನು ಆಯ್ಕೆ ಮಾಡಿದೆ. ಭಜನ್ ಲಾಲ್ ಶರ್ಮಾ ಅವರನ್ನು ನೂತನ ಸಿಎಂ ಆಗಿ ನೇಮಕ ಮಾಡುವುದರ ಜೊತೆಗೆ ಜೈಪುರದ ಮಹಾರಾಣಿ ದಿಯಾ ಕುಮಾರಿ ಮತ್ತು ಪ್ರೇಮ್ ಚಂದ್ ಬೈರ್ವಾ ಅವರನ್ನು ರಾಜ್ಯದ ಉಪಮುಖ್ಯಮಂತ್ರಿಗಳನ್ನಾಗಿ ಘೋಷಿಸಿದೆ. ಭಜನ್‌ಲಾಲ್ ಶರ್ಮಾ ಮೂಲತಃ ಭರತ್‌ಪುರದವರು. ದೀರ್ಘಕಾಲದಿಂದ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ಜೈಪುರದ ಸಂಗನೇರ್‌ನಿಂದ ಬಿಜೆಪಿ ಅವರನ್ನು ಮೊದಲ ಬಾರಿಗೆ ಕಣಕ್ಕಿಳಿಸಿತ್ತು. […]