ಮುರುಡೇಶ್ವರದಲ್ಲಿ ರಾಜ್ಯದ ಎರಡನೇ ತೇಲುವ ಸೇತುವೆ ನಿರ್ಮಾಣ; 130 ಮೀಟರ್ ಉದ್ದದ ಸೇತುವೆಯಿಂದ ಶಿವನ ಅಪೂರ್ವ ನೋಟ!!
ಉ.ಕ: ರಾಜ್ಯದ ಎರಡನೇ ಮತ್ತು ದೇಶದ ಮೂರನೇ ತೇಲುವ ಸೇತುವೆ ಇದೀಗ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ನಿರ್ಮಾಣಗೊಂಡಿದ್ದು, 130 ಮೀಟರ್ ಉದ್ದದ ಈ ಸೇತುವೆಯು ಸಮುದ್ರದ ಮಧ್ಯದಿಂದ ಶಿವನ ಬೃಹತ್ ಪ್ರತಿಮೆ ಮತ್ತು ಮುರುಡೇಶ್ವರ ದೇವಾಲಯವನ್ನು ಕಾಣುವ ಅವಕಾಶವನ್ನು ನೀಡಲಿದೆ. ದೇಶದಲ್ಲಿ ಇದು ಮೂರನೇ ತೇಲುವ ಸೇತುವೆಯಾಗಿದ್ದು, ಇನ್ನೆರಡು ಮಲ್ಪೆ ಮತ್ತು ಕೇರಳದಲ್ಲಿವೆ ಎಂದು ಓಷನ್ ಅಡ್ವೆಂಚರ್‌ನ ಸಂಸ್ಥಾಪಕ ಮತ್ತು ಮುಖ್ಯಸ್ಥ ಗಣೇಶ ಹರಿಕಂತ್ರ ಟಿಎನ್ಐಇಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಸೇತುವೆ ನಿರ್ಮಾಣಕ್ಕೆ ಮೂರು […]
37ನೇ ವರ್ಷದ ಬಾರಾಡಿಬೀಡು “ಸೂರ್ಯ – ಚಂದ್ರ” ಜೋಡುಕರೆ ಕಂಬಳ ಕೂಟದ ಫಲಿತಾಂಶ
ಕಾರ್ಕಳ: ಡಿ.9 ರಂದು ನಡೆದ 37ನೇ ವರ್ಷದ ಬಾರಾಡಿಬೀಡು “ಸೂರ್ಯ – ಚಂದ್ರ” ಜೋಡುಕರೆ ಕಂಬಳ ಕೂಟದ ಫಲಿತಾಂಶ ಹೀಗಿವೆ. ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ: ಕನೆಹಲಗೆ: 04 ಜೊತೆ ಅಡ್ಡಹಲಗೆ: 03 ಜೊತೆ ಹಗ್ಗ ಹಿರಿಯ: 20 ಜೊತೆ ನೇಗಿಲು ಹಿರಿಯ: 35 ಜೊತೆ ಹಗ್ಗ ಕಿರಿಯ: 36 ಜೊತೆ ನೇಗಿಲು ಕಿರಿಯ: 110 ಜೊತೆ ಒಟ್ಟು ಕೋಣಗಳ ಸಂಖ್ಯೆ: 208 ಜೊತೆ ಕನೆಹಲಗೆ: ( ಸಮಾನ ಬಹುಮಾನ ) ನೇರಳೆಕಟ್ಟೆ ಕೊಡ್ಲಾಡಿ ಅದ್ವಿನ್ ರವಿರಾಜ್ […]
ಹಿರಿಯಡಕ: ಅಕ್ರಮವಾಗಿ ಮರಳು ಸಾಗಾಟ- ಟಿಪ್ಪರ್ ವಶ
ಹೆಬ್ರಿ: ಹಿರಿಯಡಕ ಪೊಲೀಸ್ ಠಾಣಾ ಮುಂಭಾಗದಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ ಟಿಪ್ಪ ರ್ ವಾಹನದಲ್ಲಿ ಹಿರಿಯಡಕ ಜಂಕ್ಷನ್‌ನಿಂದ ಮಣಿಪಾಲ ಕಡೆಗೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದವರನ್ನು ತಡೆದು ನಿಲ್ಲಿಸಿದಾಗ ಚಾಲಕ ಪರಾರಿಯಾದ ಘಟನೆ ನಡೆದಿದೆ. ಟಿಪ್ಪ ರ್ ವಾಹನವನ್ನು ಪರಿಶೀಲಿಸಿದಾಗ ಸುಮಾರು 12 ಸಾವಿರ ರೂ. ಮರಳನ್ನು ಯಾವುದೇ ಪರವಾನಿಗೆ ಇಲ್ಲದೇ ಕಳ್ಳತನ ಮಾಡಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದ್ದು ವಾಹನ ಸಹಿತ ವಶಪಡಿಸಿಕೊಂಡು ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಕಾಂಗ್ರೆಸ್ ಸಂಸದರ ಅಕ್ರಮ ಹಣ ಪ್ರಕರಣ: ಮುಗಿದ ಎಣಿಕೆ ಕಾರ್ಯ; 353 ಕೋಟಿ ರೂ ಮೊತ್ತದ ಅಕ್ರಮ ಹಣ ಪತ್ತೆ
ನವದೆಹಲಿ: ಕಾಂಗ್ರೆಸ್ ರಾಜ್ಯಸಭಾ ಸಂಸದ ಧೀರಜ್ ಸಾಹು ಅವರಿಗೆ ಸಂಬಂಧಿಸಿದ ನಿವೇಶನಗಳಿಂದ ಪತ್ತೆಯಾದ ಅಪಾರ ಹಣದ ಮೊತ್ತವು ಭಾನುವಾರದಂದು 353 ಕೋಟಿ ರೂ ತಲುಪಿದ್ದು, ಅಂತಿಮವಾಗಿ ಎಣಿಕೆ ಕೊನೆಗೊಂಡಿದೆ. ಬುಧವಾರ, ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ಸಂಸದರ ಮನೆಯ ಕಪಾಟಿನಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾಗಿತ್ತು. ಕಳೆದ ಕೆಳವು ದಿನಗಳಿಂದ ನೋಟುಗಳ ಎಣಿಕೆ ಕಾರ್ಯವು ನಡೆದಿತ್ತು. ಈ ಮಧ್ಯೆ ಎಸ್‌ಬಿಐ ಶಾಖೆಯ ಕಾರ್ಯಾಚರಣೆ ಹಾಗೂ ನೋಟು ಎಣಿಸುವ ಯಂತ್ರಗಳು ಕೆಟ್ಟು ನಿಂತದ್ದರಿಂದ ಹಣ ಎಇಸುವ ಕಾರ್ಯಕ್ಕೆ […]
ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಬಿಜೆಪಿ ರಾಜ್ಯಧ್ಯಕ್ಷ
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪ ಅವರು ಇಂದು ಬೆಂಗಳೂರಿನಲ್ಲಿ ಫಲಿಮಾರು ಮಠದ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥ್ ನಾರಾಯಣ್ ಮತ್ತು ಶ್ರೀ ಮಠದ ಪಿ ಆರ್ ಓ ಆದ ಕಡೆಕಾರು ಶ್ರೀಶ ಭಟ್, ಶ್ರೀಗಳ ಆಪ್ತರಾದ ಕೆ.ಗಿರೀಶ್ ಉಪಾಧ್ಯಾಯ, ಮತ್ತಿತರು ಉಪಸ್ಥಿತರಿದ್ದರು.