ಸ್ಪಂದನಾ ಟ್ರಸ್ಟ್ ನ 51 ನೇ ವಾರ್ಷಿಕೋತ್ಸವ ಆಚರಣೆ

ಮಂಗಳೂರು: ಸ್ಪಂದನಾ ಟ್ರಸ್ಟ್ ಇನ್ಫೆಂಟ್ ಮೇರಿಸ್ ಕಾನ್ವೆಂಟ್ ಜೆಪ್ಪು ಇದರ 51 ನೇ ವಾರ್ಷಿಕೋತ್ಸವವನ್ನು ಹಾಗೂ ಕ್ರಿಸ್ಮಸ್ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಭಗಿನಿ ಸಿಲ್ವಿಯಾ ಫೆರ್ನಾಂಡಿಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆಯು ಮಕ್ಕಳ ಹಾಗೂ ಕುತುಂಬದ ಅಭಿವೃದ್ದಿಗಾಗಿ ಶ್ರಮಿಸುತ್ತಿದೆ. ಅಭಿವೃದ್ದಿ ಕಾರ್ಯಕ್ರಮಗಳನ್ನು ಆಯೋಜಿಸಿ ಹಾಗೂ ಸರಕಾರದಿಂದ ಸಿಗುವ ಸವಲತ್ತುಗಳ ಮಾಹಿತಿ ನೀಡಿ ಎಲ್ಲರನ್ನೂ ಸ್ವಾವಲಂಬಿಗಳಾಗಿಸುವುದು ಸಂಸ್ಥೆಯ ಉದ್ದೇಶ ಎಂದರು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಯೆನೆಪೋಯ ಮೆಡಿಕಲ್ ಕಾಲೇಜ್ ನ ಪ್ರಾಧ್ಯಾಪಕ ಸಿಡ್ನಿ ಡಿ’ಸೋಜ, […]
ಕಲಾವಿದೆ ಲಿಖಿತ ಶೆಟ್ಟಿ ಇವರಿಗೆ ಕನಸು ಕಾರ್ತಿಕ್ ಸ್ಮರಣಾರ್ಥ ಯುವರಂಗ ಪುರಸ್ಕಾರ ಪ್ರದಾನ

ಬೈಂದೂರು: ಯಾವ ಊರಿನಲ್ಲಿ ಸಂಸ್ಕೃತಿ ಬೆಳೆಯುತ್ತದೋ ಆ ಊರು ಅಭಿವೃದ್ಧಿಯಾಗುತ್ತದೆ, ಸಂಸ್ಕೃತಿಯನ್ನು ನಾಶ ಮಾಡಿದ ಊರು ಅಥವಾ ನಶಿಸುತ್ತದೆ ಎಂದು ಖ್ಯಾತ ರೇಡಿಯೋ ನಿರೂಪಕಿ, ಲೇಖಕಿ ಆರ್ ಜೆ ನಯನ ಹೇಳಿದರು. ಅವರು ಬೈಂದೂರು ತಾಲೂಕಿನ ಅರೆಹೊಳೆಯ ನಂದಗೋಕುಲ ರಂಗಶಾಲೆಯಲ್ಲಿ ನಡೆದ ಕನಸು ಕಾರ್ತಿಕ್ ಯುವ ರಂಗ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಕನಸು ಕಾರ್ತಿಕ್ ನೆನಪಿನಲ್ಲಿಅರೆ ಹೊಳೆಪ್ರತಿಷ್ಠಾನ, ಮಂದಾರ (ರಿ.) ಬೈಕಾಡಿ, ರಂಗಪಯಣ (ರಿ.) ಬೆಂಗಳೂರು ಹಾಗೂ ಜನಪ್ರತಿನಿಧಿ ಪತ್ರಿಕೆ ಕುಂದಾಪುರ, ಜಂಟಿಯಾಗಿ ಆಯೋಜಿಸಿದ್ದ ಅರೆಹೊಳೆ […]
ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಆಸ್ಪತ್ರೆಗೆ ದಾಖಲು: ಆರೋಗ್ಯ ಸ್ಥಿತಿ ಸ್ಥಿರ

ಹೈದರಾಬಾದ್: ತೆಲಂಗಾಣ ಮಾಜಿ ಮುಖ್ಯಮಂತ್ರಿ ಹಾಗೂ ಭಾರತ ರಾಷ್ಟ್ರ ಸಮಿತಿ ಪಕ್ಷದ ಮುಖ್ಯಸ್ಥ ಕೆ ಚಂದ್ರಶೇಖರ್ ರಾವ್ ಅವರು ಕಳೆದ ರಾತ್ರಿ ತಮ್ಮ ತೋಟದ ಮನೆಯಲ್ಲಿ ಕುಸಿದು ಬಿದ್ದು ಗಾಯಗೊಂಡಿದ್ದಾರೆ. ಕೆಸಿಆರ್ ಅವರನ್ನು ತಕ್ಷಣವೇ ಹೈದರಾಬಾದ್‌ನ ಯಶೋಧಾ ಆಸ್ಪತ್ರೆಗೆ ದಾಖಲಿಸಲಾಗಿದೆ ಗುರುವಾರ ಎರ್ರವಳ್ಳಿ ತೋಟದ ಮನೆಯಲ್ಲಿ ರಾವ್ ಕಾಲು ಜಾರಿ ಕೆಳಗೆ ಬಿದ್ದಿದ್ದರು. ಬಿದ್ದ ನಂತರ ಅವರ ಎಡ ಸೊಂಟದ ಮೂಳೆ ಮುರಿದಿದೆ ಎಂದು ವರದಿಯಾಗಿದೆ. ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಖ್ಯಮಂತ್ರಿಯವರಿಗೆ ವೈದ್ಯರು ಕೆಲವು ಪರೀಕ್ಷೆಗಳನ್ನು […]
ಭಾರತಿ ವಿಷ್ಣುವರ್ಧನ್ ಅವರಿಗೆ ಚೊಚ್ಚಲ ಕರ್ನಾಟಕ ನಂದಿ ಜೀವಮಾನ ಸಾಧನೆ ಪ್ರಶಸ್ತಿ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ನಂದಿ ಚಲನಚಿತ್ರ ಪ್ರಶಸ್ತಿ ಪ್ರಾರಂಭವಾಗಿದ್ದು ಪ್ರಶಸಿ ಪ್ರದಾನ ಸಮಾರಂಭವು ಒರಿಯನ್ ಮಾಲ್‌ನಲ್ಲಿ ಬುಧವಾರದಂದು ನಡೆಯಿತು. ಕನ್ನಡದ್ದೇ ಆದ ಸ್ವಂತ ಪ್ರಶಸ್ತಿ ನೀಡುವ ವೇದಿಕೆ ಇದಾಗಿದ್ದು, ಈ ಮೂಲಕ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಬೆನ್ನು ತಟ್ಟುವ ಪ್ರಯತ್ನದ ಭಾಗವಾಗಿ ನಂದಿ ಪ್ರಶಸ್ತಿ ನೀಡುವ ಉದ್ದೇಶ ಹೊಂದಿದೆ. ಕರ್ನಾಟಕ ನಂದಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ಹಿರಿಯ ನಟಿ, ಪದ್ಮಶ್ರೀ ಪುರಸ್ಕೃತೆ ಭಾರತಿ ವಿಷ್ಣುವರ್ಧನ್ ಅವರಿಗೆ ನೀಡಲಾಯಿತು. ಭಾರತಿ ಅವರ ಪರವಾಗಿ ಪ್ರಶಸ್ತಿಯನ್ನು ಅನಿರುದ್ದ […]
ಡಿ. 8 ರಿಂದ 12 ರವರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ, ಸರ್ವಧರ್ಮ ಸಮ್ಮೇಳನ ಹಾಗೂ ಸಾಹಿತ್ಯ ಸಮ್ಮೇಳನ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸ ಪ್ರಯುಕ್ತ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಡಿ. 8 ರಿಂದ 12 ರವರೆಗೆ ನಡೆಯಲಿವೆ. ಡಿ.8ರಂದು ಬೆಳಗ್ಗೆ 10.30ಕ್ಕೆ ಹೈಸ್ಕೂಲ್ ವಠಾರದಲ್ಲಿ ರಾಜ್ಯಮಟ್ಟದ ವಸ್ತು ಪ್ರದರ್ಶನವನ್ನು ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಗಿರೀಶ್ ನಂದನ್ ಉದ್ಘಾಟಿಸಲಿದ್ದಾರೆ. ವಸ್ತು ಪ್ರದರ್ಶನ ಮಂಟಪದಲ್ಲಿ ಪ್ರತಿದಿನ ಸಂಜೆ 6 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ. ಡಿ.10 ರಂದು ರಾತ್ರಿ 7 ರಿಂದ 10ರವರೆಗೆ ಅಮೃತವರ್ಷಿಣಿ ಸಭಾಭವನದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಬಳಗದವರಿಂದ […]