ರೋಟರಿ ಜಿಲ್ಲೆ 3182 ವತಿಯಿಂದ ಕಲ್ಯಾಣಸಿರಿ ರೋಟರಿ ದತ್ತಿನಿಧಿ ಮತ್ತು ಪೋಲಿಯೋ ಪ್ಲಸ್ ಸೆಮಿನಾರ್

ಉಡುಪಿ: ರೋಟರಿ ಜಿಲ್ಲೆ 3182 ಉಡುಪಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಜಿಲ್ಲೆಯನ್ನು ಒಳಗೊಂಡ, ಕಲ್ಯಾಣಸಿರಿ ರೋಟರಿ ದತ್ತಿನಿಧಿ (TRF) ಯನ್ನು ಪೋಲಿಯೋ ಪ್ಲಸ್ ಸೆಮಿನಾರ್ ಕಾರ್ಯಕ್ರಮವು ಅಮೃತ್‌ಗಾರ್ಡನ್ ನಲ್ಲಿ ಜರಗಿತು. ಮಾಜಿ ಗವರ್ನರ್ ಹಾಗೂ RI ಟ್ರಸ್ಟಿ ಗುಲಾಮ್ ವಹನ್ವತಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ರೋಟರಿಯ ಸೇವೆಯು ಶಾಂತಿಯ ಸಂಕೇತ, ಸಮಾಜದಲ್ಲಿ ಶಾಂತಿಯನ್ನು ಕಾಪಾಡುವ ಕೆಲಸವನ್ನು ರೋಟರಿ ಸದಸ್ಯರು ಮಾಡಬೇಕಾಗಿದೆ. ತಮ್ಮ ತಮ್ಮ ಬದುಕನ್ನು ಮತ್ತು ಸೇವೆ ಸಲ್ಲಿಸುತ್ತಿರುವ ತಮ್ಮ ಸಮುದಾಯದಲ್ಲಿ ರೋಟರಿ ಒದಗಿಸುತ್ತಿರುವ ವಿಶಾಲ ಅವಕಾಶವನ್ನು ಸಮರ್ಪಕವಾಗಿ […]

ಎಂಜೆಸಿ ಅಮೃತ ಮಹೋತ್ಸವ ಪೂರ್ವಭಾವಿ ಸಭೆ

ಮಣಿಪಾಲ: ಮಣಿಪಾಲ ಪದವಿ ಪೂರ್ವ ಕಾಲೇಜು (ಎಂಜೆಸಿ) ಇದರ ಅಮೃತ ಮಹೋತ್ಸವವನ್ನು ಡಿಸೆಂಬರ್ 27ರಿಂದ 30ರವರೆಗೆ ಆಚರಿಸಲಾಗುತ್ತಿದೆ. ಸಮಾರಂಭವನ್ನು ಅದ್ದೂರಿಯಾಗಿ ಹಾಗು ಅರ್ಥಪೂರ್ಣವಾಗಿ ಆಚರಿಸಲು ಡಿಸೆಂಬರ್ 3, ರವಿವಾರದಂದು ಸಂಜೆ ಗಂಟೆ 4ಕ್ಕೆ ಕಾಲೇಜಿನ ಸಭಾಂಗಣದಲ್ಲಿ ಹಳೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಾಲಾಭಿಮಾನಿಗಳ ಸಭೆಯನ್ನು ಕರೆಯಲಾಗಿದೆ. ಎಲ್ಲರೂ ಸಭೆಗೆ ಆಗಮಿಸುವಂತೆ ಶಾಲಾ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮುಂಡ್ಕಿನ ಜೆಡ್ಡು: ಡಿ. 02 ರಂದು ಶ್ರೀ ಗೋಪಾಲ ಕೃಷ್ಣ ಭಜನಾ ಮಂದಿರದಲ್ಲಿ ಕಾರ್ತಿಕ ದೀಪೋತ್ಸವ

ಮುಂಡ್ಕಿನ ಜೆಡ್ಡು: ಶ್ರೀ ಗೋಪಾಲ ಕೃಷ್ಣ ಭಜನಾ ಮಂದಿರದಲ್ಲಿ ಕಾರ್ತಿಕ ದೀಪೋತ್ಸವವು ಡಿ. 02 ರಂದು ಸಂಜೆ 6:30 ಗಂಟೆಗೆ ನಡೆಯಲಿದೆ ಎಂದು ಅರ್ಚಕ ವೃಂದ, ಅಧ್ಯಕ್ಷರು, ಕಾರ್ಯದರ್ಶಿ ಹಾಗು ಸರ್ವ ಸದಸ್ಯರ ಪ್ರಕಟಣೆ ತಿಳಿಸಿದೆ.

ಕಾರ್ಕಳ: ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಲಕ್ಷದೀಪೋತ್ಸವದ ಸಂಭ್ರಮ

ಕಾರ್ಕಳ: ಪಡುತಿರುಪತಿ ಖ್ಯಾತಿಯ ಶ್ರೀ ವೆಂಕಟರಮಣ ದೇವಸ್ಥಾನದ ಲಕ್ಷದೀಪೋತ್ಸವ ಸಂಭ್ರಮ ಇಂದಿನಿಂದ ಜರುಗಲಿರುವುದು. ಇಂದು ಕೆರೆ ದೀಪೋತ್ಸವ ನಡೆಯಲಿದ್ದು, ನಾಳೆ ಲಕ್ಷದೀಪೋತ್ಸವ ಹಾಗೂ ಡಿ.3 ರಂದು ಅವಭೃತ ವರ್ಣಮಯ ಓಕುಳಿ ನಡೆಯಲಿರುವುದು. ಸಂಚಾರದಲ್ಲಿ ಬದಲಾವಣೆ: ಇಂದು ಬಂಡಿಯಲ್ಲಿ ಗರುಡ ವಾಹನ ಉತ್ಸವ ಹಾಗೂ ಕೆರೆದೀಪ ನಡೆಯಲಿರುವುದರಿಂದ ರಾತ್ರಿ 8 ಗಂಟೆಯಿಂದ 12 ರ ವರೆಗೆ ಘನ ವಾಹನಗಳು ಬಂಗ್ಲೆಗುಡ್ಡೆ ಯಿಂದ ಪುಲ್ಕೆರಿ ಮಾರ್ಗವಾಗಿ ಸಂಚರಿಸಬೇಕು. ಕಾರ್ಕಳದಿಂದ ಜೋಡುರಸ್ತೆ ಕಡೆಗೆ ಹಾಗೂ ಜೋಡು ರಸ್ತೆಯಿಂದ ಕಾರ್ಕಳ ಕಡೆಗೆ ಸಂಚರಿಸುವ […]

ಅಲ್ಪಸಂಖ್ಯಾತರ ವಿದ್ಯಾರ್ಥಿವೇತನ ಹಗರಣ: 25.5 ಲಕ್ಷ ಅರ್ಜಿದಾರರಲ್ಲಿ 26% ಅರ್ಜಿದಾರರು ನಕಲಿ

ನವದೆಹಲಿ: ಪ್ರಸಕ್ತ ಸಾಲಿನ ಅಲ್ಪಸಂಖ್ಯಾತರ ವಿದ್ಯಾರ್ಥಿವೇತನ ಯೋಜನೆಯ ಪರಿಶೀಲನೆಯ ಸಂದರ್ಭದಲ್ಲಿ 6.7 ಲಕ್ಷಕ್ಕೂ ಹೆಚ್ಚು ಅಸ್ತಿತ್ವದಲ್ಲಿಯೇ ಇಲ್ಲದ ಅರ್ಜಿದಾರರು ಕಂಡುಬಂದಿದ್ದಾರೆ. ಬಯೋಮೆಟ್ರಿಕ್ ದೃಢೀಕರಣದ ವ್ಯಾಯಾಮವು ಕಾಣೆಯಾಗಿರುವ ಸಾಂಸ್ಥಿಕ ನೋಡಲ್ ಅಧಿಕಾರಿಗಳು ಮತ್ತು ಸಂಸ್ಥೆಗಳ ಮುಖ್ಯಸ್ಥರನ್ನು ಬಹಿರಂಗಪಡಿಸಿದೆ. ಆಧಾರ್ ಆಧಾರಿತ ಬಯೋಮೆಟ್ರಿಕ್ ವಿವರಗಳಲ್ಲಿ ಕೇವಲ 30% ನವೀಕರಣ ಅರ್ಜಿದಾರರು ನೈಜವಾಗಿದ್ದಾರೆ ಎಂದು ಅಲ್ಪಸಂಖ್ಯಾತ ಮಂತ್ರಾಲಯವು ಕಂಡುಕೊಂಡಿದೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, 1 ಲಕ್ಷಕ್ಕೂ ಹೆಚ್ಚು ಸಾಂಸ್ಥಿಕ ನೋಡಲ್ ಅಧಿಕಾರಿಗಳು (ಐಎನ್‌ಒ) ಮತ್ತು ಅಷ್ಟೇ ಸಂಖ್ಯೆಯ ಸಂಸ್ಥೆಗಳ […]