ಡಿಸೆಂಬರ್ 2 – 3 ರಂದು ನಗರದಾದ್ಯಂತ ಮತದಾರರ ಪಟ್ಟಿ ಸೇರ್ಪಡೆಗೆ ವಿಶೇಷ ನೋಂದಣಿ ಅಭಿಯಾನ
ಬೆಂಗಳೂರು : ಜಿಲ್ಲಾ ಚುನಾವಣಾಧಿಕಾರಿಗಳು-ಬೆಂಗಳೂರು ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಅಕ್ಟೋಬರ್ 27 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಡಿಸೆಂಬರ್ 9 ರವರೆಗೆ ಅವಕಾಶ ಕಲ್ಪಿಸಲಾಗಿದೆ.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ನಿಟ್ಟಿನಲ್ಲಿ ಡಿಸೆಂಬರ್ 2, 3 ರಂದು ಎರಡು ದಿನಗಳ ಕಾಲ ನಗರದಾದ್ಯಂತ ವಿಶೇಷ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.ಬಿಬಿಎಂಪಿ ಪಾಲಿಕೆ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಸೇರ್ಪಡೆಗೆ ಡಿಸೆಂಬರ್ 2 […]
ಭಗವಂತ ಖೂಬಾ : ಕೋವಿಡ್ ಬಂದಿರದಿದ್ದರೆ ಭಾರತ ವಿಶ್ವದ 2ನೇ ಅಥವಾ 3ನೇ ಅತಿ ದೊಡ್ಡ ಆರ್ಥಿಕತೆಯಾಗಿರುತ್ತಿತ್ತು
ಬೆಂಗಳೂರು: ಅರಮನೆ ರಸ್ತೆಯ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ರಾಜ್ಯ ಮಟ್ಟದ ಯುವ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಈಗಿನ ಪ್ರಗತಿ ನೋಡಿದರೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆ ಈಗಾಗಲೇ ಪೂರ್ಣಗೊಂಡಿದೆ ಮತ್ತು ಅಮೃತಕಾಲ ಪ್ರಾರಂಭವಾಗಿದೆ ಎನ್ನುವುದು ಕಾಣುತ್ತದೆ. ಮತ್ತಷ್ಟು ಸಾಧನೆ ಮಾಡುವವರ ಮೂಲಕ ಯುವಕರು 2047ರ ವರ್ಷ ಬರುವ ವೇಳೆಗೆ ಈ ದೇಶವನ್ನು ಶತಮಾನೋತ್ಸವನ್ನು ಇನ್ನಷ್ಟು ಸಂಭ್ರಮಿಸುವ ರೀತಿಯಲ್ಲಿ ಕೊಂಡೊಯ್ಯಬೇಕಾಗಿದೆ. ಅಮೃತಕಾಲದಿಂದ ಶತಮಾನೋತ್ಸವಕ್ಕೆ ದೇಶವನ್ನು ಮುನ್ನಡೆಸಲು ಯುವಕರ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು. ಭಾರತವು ಸಾಕಷ್ಟು […]
ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನ : 2028ರಲ್ಲಿ ಆಯೋಜನೆಯ ಪ್ರಸ್ತಾಪ ಮಾಡಿದ ಭಾರತ
ದುಬೈ: ಜನರ ಸಹಭಾಗಿತ್ವದ ಮೂಲಕ ಕಾರ್ಬನ್ ಸಿಂಕ್ಗಳನ್ನು ರಚಿಸುವುದರ ಮೇಲೆ ಕೇಂದ್ರೀಕರಿಸುವ ಗ್ರೀನ್ ಕ್ರೆಡಿಟ್ ಇನಿಶಿಯೇಟಿವ್ ಪ್ರಾರಂಭಿಸಲಾಗುತ್ತದೆ ಎಂದು ಪ್ರಧಾನಿ ತಿಳಿಸಿದರು.2028ರಲ್ಲಿ ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನ ಅಥವಾ ಕಾಪ್33 (COP-33) ಸಮ್ಮೇಳನವನ್ನು ಭಾರತದಲ್ಲಿ ಆಯೋಜಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪ್ರಸ್ತಾಪಿಸಿದ್ದಾರೆ. ಭಾರತದಲ್ಲಿ 2028ರ ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನ ಅಥವಾ ಕಾಪ್33 (COP-33) ಸಮ್ಮೇಳನವನ್ನು ಆಯೋಜಿಸುವ ಕುರಿತು ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ. ದುಬೈನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನದಲ್ಲಿ ವಿವಿಧ ರಾಷ್ಟ್ರಗಳ ನಾಯಕರು ಮತ್ತು ಸರ್ಕಾರಗಳ […]
ಆಸೀಸ್ – ಭಾರತ ಪಂದ್ಯಕ್ಕೆ ಪವರ್ ಕಟ್ : ಕ್ರೀಡಾಂಗಣದ 3 ಕೋಟಿ ವಿದ್ಯುತ್ ಬಿಲ್ ಬಾಕಿ
ರಾಯಪುರ (ಛತ್ತೀಸ್ಗಢ): ಸರಣಿಯಲ್ಲಿ ಉಭಯ ತಂಡಗಳು 3 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಭಾರತ 2 ಮತ್ತು ಆಸೀಸ್ 1ನ್ನು ಗೆದ್ದುಕೊಂಡಿದೆ. ಸರಣಿಯ ನಾಲ್ಕನೇ ಪಂದ್ಯ ಇಂದು ರಾಯ್ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ವಿದ್ಯುತ್ ಕೊರತೆ ಉಂಟಾಗಿದೆ.ವಿಶ್ವಕಪ್ ಬಳಿಕ ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವೆ ಟಿ-20 ಪಂದ್ಯ ನಡೆಯುತ್ತಿದೆ.ರಾಯ್ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ 4ನೇ ಟಿ20 ಪಂದ್ಯಕ್ಕೆ ವಿದ್ಯುತ್ ಕೊರತೆ ಉಂಟಾಗಿದೆ. ಕೋಟಿಗಟ್ಟಲೆ […]
ಬೆಂಗಳೂರು ಕಂಬಳ ಯಶಸ್ವಿ ಹಿನ್ನೆಲೆ ಜಾಗ ಸಿಕ್ಕರೆ ಮುಂದಿನ ವರ್ಷವು ನಡೆಸುತ್ತೇವೆ: ಶಾಸಕ ಅಶೋಕ್ ಕುಮಾರ್ ರೈ ಹೇಳಿಕೆ
ಮಂಗಳೂರು : ಬೆಂಗಳೂರು ಕಂಬಳದ ಯಶಸ್ವಿಯ ಬಳಿಕ ಮಂಗಳೂರಿನಲ್ಲಿ ಈಟಿವಿ ಭಾರತ್ ಜೊತೆಗೆ ಮಾತನಾಡಿದ ಅವರು, ಬೆಂಗಳೂರು ಕಂಬಳ ಯಶಸ್ವಿಯಾಗಿ ನಡೆದಿದೆ. ನಾವು 6-7 ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಲ್ಲಿದ್ದೆವು. ಆದರೆ, ನಮ್ಮ ನಿರೀಕ್ಷೆಗೂ ಮೀರಿ 13 ಲಕ್ಷ ಜನ ಖುದ್ದಾಗಿ ಬಂದು ಬೆಂಗಳೂರು ಕಂಬಳ ವೀಕ್ಷಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮತ್ತಷ್ಟು ಜನ ಬೆಂಗಳೂರು ಕಂಬಳ ವೀಕ್ಷಿಸಿದ್ದಾರೆ ಎಂದರುರಾಷ್ಟ್ರದ ಗಮನಸೆಳೆದ ಬೆಂಗಳೂರು ಕಂಬಳವನ್ನು ಆಯೋಜಿಸಿದವರಲ್ಲಿ ಪ್ರಮುಖರಾದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಜಾಗ ಸಿಕ್ಕರೆ ಮುಂದಿನ […]