ಆಸೀಸ್​ – ಭಾರತ ಪಂದ್ಯಕ್ಕೆ ಪವರ್​ ಕಟ್​ : ಕ್ರೀಡಾಂಗಣದ 3 ಕೋಟಿ ವಿದ್ಯುತ್ ಬಿಲ್ ಬಾಕಿ

ರಾಯಪುರ (ಛತ್ತೀಸ್‌ಗಢ): ಸರಣಿಯಲ್ಲಿ ಉಭಯ ತಂಡಗಳು 3 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಭಾರತ 2 ಮತ್ತು ಆಸೀಸ್​ 1ನ್ನು ಗೆದ್ದುಕೊಂಡಿದೆ. ಸರಣಿಯ ನಾಲ್ಕನೇ ಪಂದ್ಯ ಇಂದು ರಾಯ್‌ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ವಿದ್ಯುತ್​ ಕೊರತೆ ಉಂಟಾಗಿದೆ.ವಿಶ್ವಕಪ್ ಬಳಿಕ ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವೆ ಟಿ-20 ಪಂದ್ಯ ನಡೆಯುತ್ತಿದೆ.ರಾಯ್‌ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ 4ನೇ ಟಿ20 ಪಂದ್ಯಕ್ಕೆ ವಿದ್ಯುತ್​ ಕೊರತೆ ಉಂಟಾಗಿದೆ.

ಕೋಟಿಗಟ್ಟಲೆ ಬಿಲ್ ಬಾಕಿ: ಶಹೀದ್ ವೀರ್ ನಾರಾಯಣ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂದ್ಯಕ್ಕೂ ಮುನ್ನವೇ ಬಿಲ್ ಪಾವತಿಸಲು ವಿದ್ಯುತ್ ಇಲಾಖೆ ಕ್ರೀಡಾಂಗಣಕ್ಕೆ ನೋಟಿಸ್​ ನೀಡಿತ್ತು. ಆದರೆ, ಪಾವತಿಸದ ಹಿನ್ನೆಲೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದರಿಂದ ನಿಗದಿತ ಸಮಯಕ್ಕೆ ಪಂದ್ಯ ಆರಂಭವಾಗುವುದೇ ಎಂಬ ಅನುಮಾನ ಮೂಡಿದೆ.

ಬೆಳಕಿನ ವ್ಯವಸ್ಥೆ ಹೇಗೆ: ವಿಶ್ವಕಪ್​ ನಂತರ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಕಳೆದ ಮೂರು ಪಂದ್ಯಗಳಿಗೆ ಪ್ರೇಕ್ಷಕರು ಹರಿದು ಬಂದ ಹಿನ್ನೆಲೆಯಲ್ಲಿ ಇಂದು ಹೆಚ್ಚಿನ ಅಭಿಮಾನಿಗಳು ಬರುವ ನಿರೀಕ್ಷೆ ಇದೆ. ಕ್ರೀಡಾಂಗಣದ ಲೈಟ್​ಗೆ ಹೆಚ್ಚಿನ ಪವರ್​ ಬ್ಯಾಕ್​ಕಪ್​ ಬೇಕಿದೆ. ಇದಕ್ಕೆ ಕ್ರೀಡಾಂಗಣ ಸಮಿತಿ ಯಾವ ಕ್ರಮ ಕೈಗೊಳ್ಳುತ್ತದೆ ಎಂದು ಇನ್ನೂ ಸ್ಪಷ್ಟವಾಗಿ ತಿಳಿಸಿಲ್ಲ.

ಐದು ವರ್ಷದ ಹಿಂದೆಯೇ ಪವರ್​ ಕಟ್​: ಐದು ವರ್ಷಗಳ ಹಿಂದೆ ವಿದ್ಯುತ್​ ಕಡಿತ ಮಾಡಲಾಗಿತ್ತು. ಪಿಡಬ್ಲ್ಯುಡಿ ಇಲಾಖೆಯಲ್ಲಿ ಕ್ರಿಕೆಟ್ ನಿರ್ಮಾಣ ಸಮಿತಿ ಹೆಸರಿನಲ್ಲಿ 2010ರಲ್ಲಿ ಸಂಪರ್ಕ ಪಡೆದಿತ್ತು. ಬಿಲ್ ಬಾಕಿ ಇದ್ದರೂ ವಿದ್ಯುತ್ ಇಲಾಖೆ ತಾತ್ಕಾಲಿಕ ಸಂಪರ್ಕ ನೀಡಿತ್ತು. ತಾತ್ಕಾಲಿಕ ಸಂಪರ್ಕ ಅಡಿಯಲ್ಲೇ ಪೆವಿಲಿಯನ್ ಬಾಕ್ಸ್ ಮತ್ತು ವೀಕ್ಷಕರ ಗ್ಯಾಲರಿಗೆ ಸಂಪರ್ಕ ಕೊಡಲಾಗಿತ್ತು. ಈಗ ಅದನ್ನು ಹಿಂಪಡೆಯಲಾಗಿದೆ.ಟಿ20 ಪಂದ್ಯ ಸಂಜೆ 7ಕ್ಕೆ ಆರಂಭವಾಗಲಿದೆ.

ವಿದ್ಯುತ್ ಇಲಾಖೆ ಅಧಿಕಾರಿ ಅಶೋಕ್ ಖಂಡೇಲ್ವಾಲ್, ”2010ರಲ್ಲಿ ಪಿಡಬ್ಲ್ಯುಡಿ ಇಲಾಖೆಯಲ್ಲಿ ಕ್ರಿಕೆಟ್ ನಿರ್ಮಾಣ ಸಮಿತಿ ಹೆಸರಿನಲ್ಲಿ ಸಂಪರ್ಕ ಪಡೆದಿದ್ದು, 2018ರವರೆಗೆ 3 ಕೋಟಿ 16 ಲಕ್ಷದ 12 ಸಾವಿರದ 840 ಬಾಕಿ ಇದ್ದು, ಬಹಳ ದಿನಗಳಿಂದ ಪಾವತಿಯಾಗದೇ ಇದೆ, ಹೀಗಾಗಿ ಸಂಪರ್ಕ ಕಡಿತಗೊಂಡಿದೆ. ಇದಾದ ಬಳಿಕ ಬಾಕಿ ಬಿಲ್ ಪಾವತಿಗಾಗಿ ನಿರಂತರವಾಗಿ ಪತ್ರ ವ್ಯವಹಾರ ನಡೆಸಿದ್ದೆವು. ಆದರೆ ಈ ಮೊತ್ತ ಪಾವತಿಯಾಗಿಲ್ಲ. ನಂತರ ಈ ಮೊತ್ತವನ್ನು ಕ್ರೀಡಾ ಮತ್ತು ಯುವಜನ ಕಲ್ಯಾಣ ಇಲಾಖೆಯಿಂದ ಭರಿಸುವುದಾಗಿ ತಿಳಿಸಲಾಯಿತು. ನಾವೂ ಅವರನ್ನು ನಿರಂತರವಾಗಿ ಸಂಪರ್ಕಿಸಿದ್ದೇವೆ” ಎಂದು ತಿಳಿಸಿದ್ದಾರೆ.

ಈ ಪಂದ್ಯಕ್ಕೆ ವಿದ್ಯುತ್​ ನಿಗಮದಿಂದ ಕರೆಂಟ್​​ ಕಡಿತದ ಬರೆ ಬಿದ್ದಿದೆ. ಇದಕ್ಕೆ ಕಾರಣ ಕ್ರೀಡಾಂಗಣದವರು ಬಿಲ್ ಪಾವತಿಸದೇ ಇರುವುದು. ಸುಮಾರು 3 ಕೋಟಿ 16 ಲಕ್ಷ ವಿದ್ಯುತ್ ಬಿಲ್ ಪಾವತಿ ಬಾಕಿ ಇದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಂದ್ಯದ ವೇಳೆ ವಿದ್ಯುತ್​ ಕಡಿತ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಜನರೇಟರ್​ ಸಹಾಯದಿಂದ ಪಂದ್ಯವನ್ನು ನಡೆಸಲಾಗುವುದು ಎಂದು ಹೇಳಲಾಗುತ್ತಿದೆ. ಹೀಗಾಗಿ ಪಂದ್ಯ ಆರಂಭ ತಡವಾಗುವ ಸಾಧ್ಯತೆಯೂ ಇದೆ.