ನಂದೇಶ್ವರ: ಸಂಸ್ಕೃತ ಭಾಷೆ ಮಾತನಾಡಿ ದೇಶದ ಗಮನ ಸೆಳೆದ ನಂದೇಶ್ವರ ಗ್ರಾಮ

ಚಿಕ್ಕೋಡಿ : ಭಾರತ ದೇಶದ ಪರಂಪರೆಯಲ್ಲಿ ಮಠ – ಮಂದಿರಗಳು ತನ್ನದೇ ಆದಂತಹ ಪ್ರಮುಖ ಪಾತ್ರ ವಹಿಸಿವೆ. ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ ಸಮಾಜಕ್ಕೆ ಕೊಡುಗೆಗಳನ್ನು ನೀಡಿ, ತನ್ನ ಸುತ್ತಮುತ್ತಲಿನ ವಾತಾವರಣದಲ್ಲಿ ಶಿಕ್ಷಣ, ಅನ್ನದಾಸೋಹ, ಸಂಸ್ಕೃತಿ, ಉತ್ತಮ ವಿಚಾರಧಾರೆ, ಭಕ್ತಿ ಭಂಡಾರಗಳನ್ನು ಸಾರುತ್ತ ಮಠಗಳ ಚಾರಿತ್ರ್ಯವನ್ನು ಇತಿಹಾಸ ಪುಟಗಳಲ್ಲಿ ಉಳಿಯುವಂತೆ ಹಲವು ಮಠಾಧೀಶರು ಕೂಡಾ ಕಾರ್ಯ ಮಾಡಿದ್ದಾರೆ.ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಂದೇಶ್ವರ ಗ್ರಾಮದಲ್ಲಿ ಜನರ ದೈನಂದಿನ ವ್ಯವಹಾರ ಸಂಸ್ಕೃತದಲ್ಲಿಯೇ ನಡೆಯುತ್ತಿದೆ. ಆಧುನಿಕ ಯುಗದಲ್ಲಿ ಹಲವು ಮಠಾಧೀಶರುಗಳ ನಡುವೆ […]

ಎನ್‌ಡಿಎಂಎ : ಸಿಲ್ಕ್ಯಾರಾ ಸುರಂಗ ಘಟನೆ: ಕಾರ್ಮಿಕರ ಸುರಕ್ಷತೆ ಮುಖ್ಯ, ಯಾವುದೇ ಆತುರವಿಲ್ಲ

ಉತ್ತರಕಾಶಿ/ನವದೆಹಲಿ: ಉತ್ತರಾಖಂಡದ ಉತ್ತರಕಾಶಿಯಲ್ಲಿ ನಿರ್ಮಾಣ ಹಂತದ ಸಿಲ್ಕ್ಯಾರಾ ಸುರಂಗ ಕುಸಿದು 16 ದಿನಗಳಿಂದ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ತಲುಪಿದೆ. ಸುರಂಗದ ಒಳಗೆ 41 ಜನ ಕಾರ್ಮಿಕರಿದ್ದಾರೆ. ಹೊರಗೆ ಹಲವಾರು ಜನರು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಜನರ ಸುರಕ್ಷತೆ ಮತ್ತು ಭದ್ರತೆ ಮುಖ್ಯ. ನಮಗೆ ಯಾವುದೇ ಆತುರವಿಲ್ಲ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸಲು ಸುಮಾರು 3-4 ನಾಲ್ಕು ಗಂಟೆಗಳು […]

ಅಪಘಾತದಲ್ಲಿ ಕಾಲು ಮುರಿದ ಹಸುವನ್ನು ದತ್ತು ಪಡೆದು ಆರೈಕೆ: ಐಟಿ ಉದ್ಯೋಗಿಯ ಗೋಪ್ರೇಮ

ಮಂಗಳೂರು:ಹೌದು, ಮಂಗಳೂರಿನ ರಾಣಿ ಅವರು ಬೆಂಗಳೂರಿನ ಐಟಿ ಕಂಪೆನಿಯ ಉದ್ಯೋಗಿ. ಇತರ ಐಟಿ ಉದ್ಯೋಗಿಗಳಂತೆ ಕೆಲಸದ ಬಗ್ಗೆ ಮಾತ್ರ ಗಮನ ನೀಡದೆ ಮೂಕ ಪ್ರಾಣಿಗಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಕೊರೊನಾ ಕಾಲದಲ್ಲಿ ಪಣಂಬೂರಿನಲ್ಲಿ ಅಪಘಾತದಿಂದ ಕಾಲು ಮುರಿದಿದ್ದ ಈ ಹಸುವಿಗೆ ಶುಶ್ರೂಷೆ ನೀಡಿದ ಆಯನಿಮಲ್ ಕೇರ್ ಟ್ರಸ್ಟ್​ನವರು ಗಾಯವನ್ನು ಗುಣ ಪಡಿಸಿದ್ದರು. ಗೋವಿನ ಮೇಲೆ ಪ್ರೀತಿಯಿಂದ ಹಲವಾರು ಜನ ಗೋಸೇವೆ ಮಾಡುತ್ತಿರುವುದನ್ನು ನೋಡುತ್ತೇವೆ. ಐಟಿ ಕಂಪೆನಿಯ ಉದ್ಯೋಗಿ, ಮಂಗಳೂರಿನ ನಿವಾಸಿ ರಾಣಿ ಎಂಬುವರು ಅಪಘಾತದಲ್ಲಿ ಕಾಲು […]

ಸಮೀಕ್ಷಾ ವರದಿ ಸಲ್ಲಿಕೆಗೆ ಮತ್ತೆ 3 ವಾರ ಕಾಲಾವಕಾಶ ಕೇಳಿದ ಎಎಸ್​ಐ : ಜ್ಞಾನವಾಪಿ ಪ್ರಕರಣ

ವಾರಣಾಸಿ (ಉತ್ತರ ಪ್ರದೇಶ): ಮಸೀದಿ ಸಂಕೀರ್ಣದ ವೈಜ್ಞಾನಿಕ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಮಂಗಳವಾರ(ನ.28) ಕೊನೇ ದಿನವಾಗಿತ್ತು. ಮಸೀದಿಯ ವೈಜ್ಞಾನಿಕ ಸಮೀಕ್ಷೆ ಒಂದು ತಿಂಗಳ ಹಿಂದೆಯೇ ಮುಕ್ತಾಯಗೊಂಡಿದೆ. ಆದರೂ ವರದಿ ಸಲ್ಲಿಸಲು ನ್ಯಾಯಾಲಯ ನೀಡಿದ್ದ ಗಡುವುಗಳನ್ನು ವಿಸ್ತರಿಸಲು ಎಎಸ್​ಐ ಈಗಾಗಲೇ ಹಲವು ಬಾರಿ ಮನವಿ ಸಲ್ಲಿಸಿದೆ. ಎಎಸ್​ಐ ನವೆಂಬರ್​ 17 ರಂದು ವರದಿಯನ್ನು ಸಲ್ಲಿಸಬೇಕಾಗಿತ್ತು. ಆದರೆ ನವೆಂಬರ್​ 18 ರಂದು ಹೆಚ್ಚುವರಿ 15 ದಿನಗಳ ಕಾಲಾವಕಾಶ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಜ್ಞಾನವಾಪಿ ಮಸೀದಿ […]

ಅವಕಾಶ ಮತ್ತು ಸವಾಲುಗಳು : ಭಾರತಕ್ಕೆ APEC ಸದಸ್ಯತ್ವ

ಹೈದರಾಬಾದ್​: ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ (ಎಪಿಇಸಿ) ವೇದಿಕೆಯ ನಾಯಕರ ಸಭೆ 2023 ರ ನವೆಂಬರ್ 17 ರಂದು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಮುಕ್ತಾಯಗೊಂಡಿತು. ಈ ಸಭೆಯ ಹಿನ್ನೆಲೆಯಲ್ಲಿ ಭಾರತಕ್ಕೆ ಎಪಿಇಸಿ (ಅಪೆಕ್​) ಸದಸ್ಯತ್ವ ಸಿಗುವ ವಿಷಯ ನೀತಿ ನಿರೂಪಕರ ವಲಯದಲ್ಲಿ ಮತ್ತು ಹಣಕಾಸು ಪತ್ರಿಕೆಗಳಲ್ಲಿ ಮತ್ತೊಮ್ಮೆ ಚರ್ಚೆಯ ವಿಷಯವಾಗಿದೆ. ಅಪೆಕ್​ನ ಕಾರ್ಯತಂತ್ರದ ಪ್ರಾಮುಖ್ಯತೆ ಕಾರಣದಿಂದ ಭಾರತಕ್ಕೆ ಇದರ ಸದಸ್ಯತ್ವ ಮಹತ್ವ ಪಡೆದುಕೊಂಡಿದೆ. ಆಸ್ಟ್ರೇಲಿಯಾ, ಬ್ರೂನಿ, ಕೆನಡಾ, ಚೀನಾ, ಹಾಂಕಾಂಗ್, ಚಿಲಿ, ನ್ಯೂಜಿಲೆಂಡ್, ಪಪುವಾ […]