ಕೊಟ್ಟಾರ ಚೌಕಿಗೆ ಹುತಾತ್ಮ ಯೋಧ ಕ್ಯಾಪ್ಟನ್ ಪ್ರಾಂಜಲ್ ಹೆಸರು: ಶಾಸಕ ಭರತ್ ಶೆಟ್ಟಿ

ಮಂಗಳೂರು: ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾದ ಕರ್ನಾಟಕದ ವೀರ ಯೋಧ ದಿವಂಗತ ಕ್ಯಾಪ್ಟನ್ ಪ್ರಾಂಜಲ್ ಅವರ ಹೆಸರನ್ನು ನಗರದ ಕೊಟ್ಟಾರ ಚೌಕಿ ಜಂಕ್ಷನ್‌ಗೆ ನಾಮಕರಣ ಮಾಡಲಾಗುವುದು ಎಂದು ಶಾಸಕ ಡಾ. ವೈ. ಭರತ್ ಶೆಟ್ಟಿ ಹೇಳಿದ್ದಾರೆ. ಕೊಟ್ಟಾರ ಚೌಕಿಯಲ್ಲಿ ಅಮರ್ ಜವಾನ್ ಥೀಮ್ ಪಾರ್ಕ್ ನಿರ್ಮಿಸಲಾಗುವುದು. ಆದ್ದರಿಂದ, ಉದ್ಯಾನವನದ ಸಮೀಪವಿರುವ ಈ ವೃತ್ತಕ್ಕೆ ಮಂಗಳೂರು ನಗರದಲ್ಲಿ ಬೆಳೆದ ಕ್ಯಾಪ್ಟನ್ ಪ್ರಾಂಜಲ್ ಅವರ ಹೆಸರನ್ನು ಇಡುವುದು ಸೂಕ್ತವಾಗಿದೆ. ಈ ಕುರಿತು ಪತ್ರ ಮುಖೇನ […]
ಕೊಡವೂರು: ರಸ್ತೆ ಕಾಮಗಾರಿ ಕುರಿತು ಸಾರ್ವಜನಿಕ ಸಭೆ

ಉಡುಪಿ: ಕುಡಿಯುವ ನೀರು, ವಿದ್ಯುತ್ ಮತ್ತು ರಸ್ತೆ ಸಂಪರ್ಕ ಮೂಲಭೂತ ಅವಶ್ಯಕತೆಗಳಾಗಿದ್ದು, ಸಾರ್ವಜನಿಕರ ಹಾಗೂ ಗ್ರಾಮದ ಸಮಸ್ಯೆಗಳನ್ನು ತಿಳಿಯುವ ನಿಟ್ಟಿನಲ್ಲಿ ನಗರಸಭಾ ಸದಸ್ಯ ವಿಜಯ್ ಕೊಡವೂರು ಸಭೆ ನಡೆಸಿದರು. ಹೊಸ ರಸ್ತೆ ನಿರ್ಮಾಣಕ್ಕಾಗಿ ಆ ಭಾಗದ ಎಲ್ಲಾ ನಾಗರಿಕರನ್ನು ಒಟ್ಟು ಸೇರಿಸಿ ಅಲ್ಲಿಯ ಅವಶ್ಯಕತೆಗಳನ್ನು ಪೂರೈಸುವುದು ನನ್ನಂತಹ ಜನಪ್ರತಿನಿಧಿ ಜವಾಬ್ದಾರಿ ಎಂದ ಅವರು, ಹೊಸ ರಸ್ತೆ ಕಾಮಗಾರಿಯ ಸಂದರ್ಭದಲ್ಲಿ ಬರುವಂತಹ ಅಡೆ-ತಡೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸಭೆ ನಡೆಸುತ್ತಿದ್ದೇನೆ ಎಂದರು. ಸರಕಾರದಿಂದ ಬರುವಂತಹ ಅನುದಾನಗಳನ್ನು ಸಮರ್ಪಕವಾಗಿ ಬಳಸುವ ನಿಟ್ಟಿನಲ್ಲಿ […]
ಶ್ರೀ ಕೃಷ್ಣ ಮಠ ತಲುಪಿದ ಅಯೋಧ್ಯಾ ಪವಿತ್ರ ಮಂತ್ರಾಕ್ಷತೆ

ಉಡುಪಿ: ಶ್ರೀಕೃಷ್ಣಮಠ ಪರ್ಯಾಯ ಮಠದ ಶ್ರೀ ವಿದ್ಯಾ ಸಾಗರ ತೀರ್ಥ ಸ್ವಾಮೀಜಿ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಗಳು ಅಯೋಧ್ಯೆಯಿಂದ ತರಲಾದ ಪವಿತ್ರ ಮಂತ್ರಾಕ್ಷತೆ ತುಂಬಿದ ಕಲಶವನ್ನು ಮೆರವಣಿಗೆ ಮೂಲಕ ಶ್ರೀ ಕೃಷ್ಣ ಮಠದ ಮುಂಭಾಗದಲ್ಲಿ ಸ್ವಾಗತಿಸಿ ಬರಮಾಡಿಕೊಂಡರು. ಅಯೋಧ್ಯೆಯಿಂದ ಪವಿತ್ರ ಮಂತ್ರಾಕ್ಷತೆಯನ್ನು ಪ್ರತಿ ಗ್ರಾಮದ ಪ್ರತಿ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಆರ್ ಎಸ್ ಎಸ್ ನ ಹಿರಿಯರಾದ ಶಂಬು ಶೆಟ್ಟಿ, ಪ್ರಾಂತ ಅರ್ಚಕ ಪುರೋಹಿತ ಪ್ರಮುಖ ಪ್ರೇಮಾನಂದ ಶೆಟ್ಟಿ, ಭಜರಂಗ ದಳ […]
ಬೆಂಗಳೂರು “ರಾಜ – ಮಹಾರಾಜ” ಜೋಡುಕರೆ ಕಂಬಳ ಕೂಟದ ಫಲಿತಾಂಶ

ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ ಕನೆಹಲಗೆ: 07 ಜೊತೆಅಡ್ಡಹಲಗೆ: 06 ಜೊತೆಹಗ್ಗ ಹಿರಿಯ: 21 ಜೊತೆನೇಗಿಲು ಹಿರಿಯ: 32 ಜೊತೆಹಗ್ಗ ಕಿರಿಯ: 31 ಜೊತೆನೇಗಿಲು ಕಿರಿಯ: 62 ಜೊತೆಒಟ್ಟು ಕೋಣಗಳ ಸಂಖ್ಯೆ: 159 ಜೊತೆ ಕನೆಹಲಗೆ: ( 6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ )ಬೊಳ್ಳಂಬಳ್ಳಿ ಚೈತ್ರ ಪರಮೇಶ್ವರ ಭಟ್ “ಬಿ” ಹಲಗೆ ಮುಟ್ಟಿದವರು: ಉಲ್ಲೂರು ಕಂದಾವರ ಗಣೇಶ್ ಅಡ್ಡ ಹಲಗೆ: ಪ್ರಥಮ: ಎಸ್. ಎಮ್. ಎಸ್ ಫ್ಯಾಮಿಲಿ ಬೆಂಗಳೂರು ಹಲಗೆ ಮುಟ್ಟಿದವರು: ಭಟ್ಕಳ ಹರೀಶ್ ದ್ವಿತೀಯ: […]
ಚೀನಾದಲ್ಲಿ ಮಕ್ಕಳಲ್ಲಿ ನ್ಯುಮೋನಿಯಾ ಏಕಾಏಕಿ ಏರಿಕೆ: ಭಾರತಕ್ಕೆ ಅಪಾಯ ಇಲ್ಲದಿದ್ದರೂ ಜಾಗರೂಕತೆ ಅಗತ್ಯ

ನವದೆಹಲಿ: ಚೀನಾದಲ್ಲಿ ಮಕ್ಕಳಲ್ಲಿ ನ್ಯುಮೋನಿಯಾ ತರಹದ ಸೋಂಕಿನ ಏಕಾಏಕಿ ಏರಿಕೆಯನ್ನು ಭಾರತವು ಸೂಕ್ಷ್ಮವಾಗಿ ಗಮನಿಸುತ್ತಿದೆ. ಸದ್ಯ ಈ ವೈರಸ್ ನಿಂದ ಯಾವುದೇ ಬೆದರಿಕೆಗಳು ಕಂಡು ಬರುತ್ತಿಲ್ಲವಾದರೂ ಕೇಂದ್ರ ಆರೋಗ್ಯ ಸಚಿವಾಲಯವು ಜಾಗರೂಕವಾಗಿದ್ದು, ಆಸ್ಪತ್ರೆಗಳು ತುರ್ತು ಪರಿಸ್ಥಿತಿಯ ಸಿದ್ದತೆಯನ್ನು ಗಮನಿಸುವಂತೆ ಸೂಚನೆ ನೀಡಿದೆ. ಚಳಿಗಾಲ ಮತ್ತು ಮಾಲಿನ್ಯಪೂರ್ಣ ಹವಾಮಾನದ ಸಂದರ್ಭದಲ್ಲಿ ವೈರಲ್ ಫ್ಲೂ ಸಾಮಾನ್ಯವಾಗಿದ್ದು, ಸಾರ್ವಜನಿಕರು ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡುವುದು ಈ ಪರಿಸ್ಥಿತಿಯಲ್ಲಿ ಅಗತ್ಯವೆನಿಸಿದೆ. ವೈದ್ಯರ ಪ್ರಕಾರ ನಿಯಮಿತವಾಗಿ ಕೈಗಳನ್ನು ತೊಳೆಯುವುದು, ಸೀನುವಾಗ ಮತ್ತು ಕೆಮ್ಮುವಾಗ ಮಕ್ಕಳು […]